ಪುಟ:Chirasmarane-Niranjana.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕ್ಷರಗಳನ್ನು ಬರೆದುಕೊಟ್ಟರು.ಸ್ಲೇಟನ್ನು ಹಿಂದಕ್ಕೆ ಕೊಟ್ಟು ಕಣ್ಣನ ಭುಜವನ್ನು ಅವರು ಮೃದುವಾಗಿ ಅದುಮಿದರು.ಆತ ತಲೆಯೆತ್ತಿ ನೊಡಿದ.ಅವನ ಎರಡು ಕಣ್ಣುಗಳಲ್ಲೂ ಕಂಬನಿ ತುಂಬಿತ್ತು..... ......ಆ ರಾತ್ರಿ-ಶಾಲೆಗೆ ಎಂದಾದರೊಮ್ಮೆ ಬೇರೆ ಹಳ್ಳಿಯ ಅಪರಿಚಿತರು ಬರುವುದಿತ್ತು.ಅವರೆಲ್ಲರನ್ನೂ ಉಪಧ್ಯಾಯರೆಂದೇ ಮಾಸ್ತರು ಪರಿಚಯಮಾಡಿ ಕೊಡುತ್ತಿದ್ದರು.ಹಾಗೆ ಬಂದವರು ಎಷ್ಟೋಸಾರೆ ಅಲ್ಲಿ ನೆರೆದಿದ್ದವರನ್ನು ಕುರಿತು ಲೋಕಜ್ಞಾನದ ವಿಷಯವಾಗಿ ಮಾತನಾಡುವುದಿತ್ತು. ಈ ರೀತಿ ಬರುತ್ತಿದ್ದವರ ಮೂಲಕ ಪೆನ್ಸಿಲಿನಲ್ಲಿ ಬರೆದ ಹಾಳೆಗಳು ಕಯ್ಯೂರು ತಲುಪುತ್ತಿದ್ದವು.ಮಾಸ್ತರು ಅವುಗಳನ್ನು ಅಪ್ಪು-ಚಿರುಕಂಡನಿಗೆ ಕೊಟ್ಟು ಓದಿಸುತ್ತಿದ್ದರು;ಓದಿ ಅವರೊಡನೆ ಚರ್ಚಿಸುತ್ತಿದ್ದರು. ಅದು ಹೋರಾಟದ 'ವಿಶಿಷ್ಟ ಸಾಹಿತ್ಯ.' ಅಂತಹ ಒಂದು ಶಿರೋನಾಮೆ ಹೀಗಿತ್ತು:'ರೈತ-ಕೂಲಿಕಾರರ ಕ್ರಾಂತಿಯ ಮೂಲಕವೇ ಸ್ವಾತಂತ್ರ್ಯ ಸಾಧ್ಯ!'ಮಸಕು ಮಸಕಾದ ಅಕ್ಷರಗಳು.ಆದರೂ ಅಪ್ಪು ಮತ್ತು ಚಿರುಕಂಡ ಜತೆಯಾಗಿ ಅದನ್ನೋದಿದ್ರು.ಲೇಖನದ ಮೊದಲಲ್ಲೇ ಒಂದು ಸಂಬೋಧನೆಯಿತ್ತು:'ಸಂಗಾತಿಗಳೇ!'ಅ ಪದದಿಂದ ಹೊರಟುದು ಆತ್ಮೀಯತೆಯ ಧ್ವನಿ.ಕೊನೆಯಲ್ಲೊಂದಿತ್ತು:'ಲೋಕದೆಲ್ಲಾ ದುಡಿಯುವ ಜನರೇ ಒಗ್ಗಟ್ಟಾಗಿರಿ!'ಎಂಬ ಘೋಷ.ಆ ಸಾಲಲ್ಲೇ ರಣಘರ್ಡನೆ:'ಸಾಮ್ರಾಜ್ಯಶಾಹಿ ನಾಶವಾಗಲಿ!' 'ಕ್ರಾಂತಿಗೆ ಜಯವಾಗಲಿ!' ಆ ಪದಗಳ ಗುಂಯಾರವದಲ್ಲೇ ಸ್ವಲ್ಪ ಹೊತ್ತು ತನ್ಮಯನಾಗಿ ಕುಳಿತ ಅಪ್ಪು ಎಚ್ಚತ್ತು ಹೇಳಿದ:"ನಮ್ಮದೆಲ್ಲ ಮಾತಿನಲ್ಲೇ ಮುಗೀತು ಕಣೋ.ತ್ರಿಕರಪುರಕ್ಕೆ ಹೋಗಿ ಚಂದುವನ್ನಾದರೂ ನೋಡಬಹುದಿತ್ತು.ಧಾಂಡಿಗ ಆವತ್ತು ಹೇಳಿದಹಾಗೆ ನಾವು ಬಾವೀಲಿರೋ ಕಪ್ಪೆಗಳು...." ಪದಗಳನ್ನು ತೂಗಿ ನೋಡುತ್ತ ಚಿರುಕಂಡನೆಂದ:"ನಾವು ಗಿಡುಗಗಳಾಗ್ಬೇಕೂಂತ ತಾನೆ ನೀನು ಹೇಳೋದು? ಆಗಲಿ;ತ್ರಿಕರಪುರ ಒಂದೇ ಏನು?ಮಡಿಕೈಗೆ ಹೋಗೋಣ,ಪುದುಕೈಗೆ ಹೋಗೋಣ-ನೀಲೇಷ್ವರಕ್ಕೆ,ಹೊಸದುರ್ಗಕ್ಕೆ,ಕಲ್ಲಿಕೋಟೆಗೆ,ದಿಲ್ಲಿಗೆ...ಸಾಕೇನಪ್ಪ? ಅಪ್ಪು,ಚಿರುಕಂಡನ ಕೊರಳನ್ನು ತನ್ನ ಬಲಗೈಯಿಂದ ಸುತ್ತುವರಿದು ತನ್ನೆಡೆಗೆ ಬರಸೆಳೆದ.