ಪುಟ:Chirasmarane-Niranjana.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಚಿರಸ್ಮರಣೆ

 ಮಾತಾಡ್ತಿದ್ದಾರೆ? ನನಗೆ ಕಿವಿ ಇಲ್ವೇನು? ಕೇಳಿಸೋಲ್ವೇ?"
   ಅದು ಕಣ್ಣ-ದೇವಕಿಯರಿಗೆ ಸಂಬಂಧಿಸಿದ ಮಾತುಕತೆ, ವಯಸ್ಸಿನಲ್ಲಿ ಕಿರಿಯವನಾದ ತಾನು ಈವಿಷಯ  ಏನು ಹೇಳಬೇಕೆಂದು ತಡವರಿಸಿದ, ಆದರೂ, ಏನೂ ಹೇಳದೆ ಸುಮ್ಮನಿರುವುದು ಸರಿ ಎನಿಸದೆ ಆತನೆಂದ: 

"ಅದನ್ನೆಲ್ಲ ನೀನು ಮನಸ್ಸಿಗೆ ಹಚ್ಕೊಬಾರ್ದು, ಜನ ಎಲ್ರೂ, ಕೆಟ್ಟೋರೆ ಇರ್ತಾರ?"

ಅದು ಮಾಸ್ತರಿಂದ ಅಪ್ಪು ಕಲಿತಿದ್ದ ಪಾಠ, ಎಲ್ಲ ಜನರೂ ಯಾವಾಗಲೂ ಕೆಟ್ಟವರಲ್ಲ, ಜನರಲ್ಲಿ ಒಳ್ಳಯವರೂ ಇರ್ತಾರೆ, ಕೆಟ್ಟವರೂ ಇರ್ತಾರೆ, ಅತಿ ಕೆಟ್ಟವರ ಸಂಖ್ಯೆಯಂತೂ ಬಹಳ ಕಡಮೆ.....
    "ದೇವಕಿ ಹೀಗೆ ಇರೋಕಾಗೋದಿಲ್ಲ, ಅಪು, ಅವಳ್ನ ನಾನು ಮದುವೆಯಾಗ್ತೇನೆ."
    ಆ ಉತ್ತರ ಕೇಳಿದಾಗ ಅಪ್ಪುವಿನ ಒಳಗೇನೋ ಕುಪ್ಪಳಿಸಿತು. ತನಗೆ ತಿಳಿದ ರೀತಿಯಲ್ಲಿ ಆತನೂ ಆ ವಿಷಯ ಯೋಚಿಸಿದ್ದ, ದೇವಕಿಯನ್ನು ಕಣ್ಣ ಮದುವೆಯಾದರೆ ಸಮಸ್ಯೆ ಬಹಳ ಮಟ್ಟಿಗೆ ಬಗೆಹರಿಯುವುದೆಂದು ಆತನಿಗೆ ತೋರಿತ್ತು.ಆದರೆ ದೇವಕಿ ವಿಧವೆ,ಎಳೆಯ ಮಗುನವಿನ ತಾಯಿ,ಆದರೂ....
  ಕಣ್ಣನೇ ಮಾತು ಮುಂದುವರಿಸಿದ:
   "ಕಾಸರಗೋಡಿಗೊ ಕಣ್ಣಾನೂರಿಗೊ ಹೋಗಿ ಕೂಲಿಯಾಗ್ತೇನೆ. ಈ ಊರಿನ ನೀರಿನ ಋಣ ಮುಗೀತೂಂತ ತಿಳಿತೇನೆ."
ಆತನ ಕಂಠ ಗದ್ಗದಿತವಾಗಿ ಕಣ್ಣಿನ ಅಂಚಿನಲ್ಲಿ ನೀರು ತುಳುಕಾಡಿತು. ನೀರಿನ ಋಣ-ಎನ್ನುವ ಮಾತೆಲ್ಲ ಸಾಂಪ್ರದಾಯಿಕ.ಅಪ್ಪುವಿಗೆ ಅದು ಗೊತ್ತಿತ್ತು,ಆ ಮಾತಿನ ಹಿಂದಿನ ಭಾವನೆಯ ಆಳವೂ ಆತನಿಗೆ ಅರಿವಾಗುತಿತ್ತು.
  "ಯಾಕೆ ಹಾಗೆ ಹೇಳ್ತೀಯಾ? ಈ ಊರು ಬಿಟ್ಟು ಯಾಕೆ ಹೋಗ್ಬೇಕು?" "ಮತ್ತೆ ಇಲ್ಲಿ ಬದುಕೋದಕ್ಕೆ ಬಿಡ್ತಾರೇಂತ ತಿಳಿದ್ಯೇನು?"
ಆ ದೌರ್ಬಲ್ಯದ ಧ್ವನಿ ಅಪ್ಪುವಿಗೆ ಏನೇನೂ ಇಷ್ಟವಾಗಲಿಲ್ಲ. "ನಾವು ಇಷ್ಟೊಂದು ಜನ ಇರುವಾಗ ನಿನಗೆ ಯಾವ ಭಯ? ದುಡಿದು ಬದುಕುವ ಜನ ಯಾರಿಗೆ ಯಾಕೆ ಹೆದರ್ಬೇಕು?ನಾವು ಒಗ್ಗಟಾಗಿದ್ದರೆ...."
   ಸಾವಿರ ಸಾರೆ ಕೇಳಿದ, ನೂರು ಸಾರೆ ತಾನೇ ಹೇಳಿದ್ದ ಮಾತನ್ನೇ ಇಲ್ಲಿ ಪುನರುಚ್ಚರಿಸುತ್ತಿದ್ದನೆಂದು ಅಪ್ಪುವಿಗೆ ಮನವರಿಕೆಯಾಯಿತು, ಅದು ಮೂಲಮಂತ್ರ: ಒಗ್ಗಟ್ಟು-ಜನರ ಐಕ್ಯ, ಆ ಮಾತುಗಳನ್ನು ಆಡಿದ್ದ ನಿಜ. ಆದರೆ