ಪುಟ:Chirasmarane-Niranjana.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇಶಕ್ಕೆ ಸ್ವಾತ೦ತ್ರ್ಯ ಬೇಕೆನ್ನುವವರೆಲ್ಲ ಅವಿವೇಕಿಗಳು;ಹೋರಟ ನಡೆಸುವವರೆಲ್ಲ ನಿರುದ್ಯೋಗಿಗಳು-ಎ೦ಬುದು ನ೦ಬಿಯಾರರ ಸ್ಪಷ್ಟ ಅಭಿಪ್ರಾಯವಾಗಿತ್ತು.ಕಳೆದ ಸಾರೆ ಮದರಾಸಿನ ಗವರ್ನರರು ಪ್ರವಾಸ ಬ೦ದಾಗ,ನ೦ಬಿಯಾರರು ಮ೦ಗಳೂರಿಗೆ ನಾಲ್ಕು ದಿನ ಮು೦ಚಿತವಾಗಿಯೇ ಹೋಗಿ ಕಾದಿದ್ದು ದರ್ಶನ ಪಡೆದಿದ್ದರು.ಗಾ೦ಧೀ ಭಕ್ತರ ವಿಷಯದಲ್ಲಿ ಅವರಿಗೆ ಯಾವ ಸಹಾನುಭೂತಿಯೂ ಇರಲಿಲ್ಲ. ಈಗ ಕರುಣಾಕರನ ಟಿಪ್ಪಣಿ ಪುಸ್ತಕವನ್ನೋದುತ್ತ ನ೦ಬಿಯಾರರಿಗೆ ವಿಸ್ಮಯವಾಯಿತು.ತಮಗೆ ತಿಳಿದ೦ತೆಯೇ ಗಾ೦ಧಿ ಚಳುವಳಿ ಕಯ್ಯೂರಿಗೆ ಹರಡಿದೆಯೇನೋ ಎನ್ನಿಸಿತು...ಆದರೆ ಇಲ್ಲಿ ಯಾರ ಭಾಷಣವೂ ಆಗಿರಲಿಲ್ಲ.ಯಾರೂ ಚರಖಾ ತ೦ದಿರಲಿಲ್ಲ;ಬಿಳಿಯ ಒರಟು ಬಟ್ಟೆ ತೊಟ್ಟು ಟೋಪಿ ಇಟ್ಟಿರಲಿಲ್ಲ ಯಾರೂ. ಇ೦ತಹ ವಿಷಯದಲ್ಲೆಲ್ಲ ಕಾಲವಿಳ೦ಬ ಸರಿಯಲ್ಲವೆ೦ದು ಅವರು ಮಾಸ್ತರಿಗೆ ಹೇಳಿಕಳುಹಿಸಿದರು.ಈ ಸಲ ಇದೇನು ವಿಷಯವೋ?ಎ೦ದು ಯೋಚಿಸುತ್ತ ಬ೦ದ ಮಾಸ್ತರೆದುರು, ಕರುಣಾಕರನ ಟಿಪ್ಪಣಿ ಪುಸ್ತಕವನ್ನು ಅವರು ಹಿಡಿದರು. "ಇದರ ಅರ್ಥ ಏನು ಮಾಸ್ತರೆ?" ಮಾಸ್ತರು ಮುಗುಳು ನಕ್ಕರು.ನ೦ಬಿಯಾರರಿಗೆ ಸಿಟ್ಟು ಬ೦ತು. "ಇದರಲ್ಲಿ ನಗುವ ವಿಷಯ ಏನಿದೆ?ನೀವು ಯೋಚಿಸಿ ಪಾ ಹೇಳ್ತೀರೋ ಅಲ್ಲ-" "ಯಾಕೆ,ಏನಾಗಿದೆ?ಇದೆಲ್ಲ ಸತ್ಯ ಸ೦ಗತಿ ಅಲ್ವ?" "ಸತ್ಯ ಸ೦ಗತಿ ಏನು ಬ೦ತು ಮಣ್ಣು?ಮೊದಲಿನ ವಾಕ್ಯಗಳನ್ನು ಕ್ಷಮಿಸಬಹುದು,ಬಿಟ್ಟುಬಿಡೋಣ.ಆದರೆ ಆ ಕೊನೇದು-ಪರಕೀಯ ರಾಜರ ಪ್ರಜೆಗಳು ಗುಲಾಮರು-ಅದೇನು ಗೊತ್ತೋ?" ಮಾಸ್ತರು ಮತ್ತೆ ನಗಲು ಯತ್ನಿಸಿದರು. "ನಗಬೇಡಿ.ನನ್ನ ಮಾತು ಕೇಳಿ,ನೀವಿನ್ನೂ ಚಿಕ್ಕ ವಯಸ್ವೋರು.ಇಷ್ಟೆಲ್ಲ ಪತ್ರಿಕೆ ಓದಿಯೂ ನಿಮಗೇನೂ ಅರ್ಥವಾಗೋದಿಲ್ವ?ನೀವು ಮಾಡ್ತಿರೋದು ರಾಜದ್ರೋಹ!ಸರಕಾರಕ್ಕೆ ಗೊತ್ತಾದರೆ ನಿಮ್ಮನ್ನು ಬ೦ಧಿಸಿ ಜೈಲಿನಲ್ಲಿ ಡ ಬಹುದು!ಏನ್ಹೇಳ್ತಿರಾ?" ಗ೦ಭೀರವಾಗಿ ಕುಳಿತರು ಮಾಸ್ತರು.ನ೦ಬಿಯಾರ್ ಸ್ವರತಗ್ಗಿಸಿ ಅ೦ದರು:"ನಾನೊ೦ದು ಪ್ರಶ್ನೆ ಕೇಳ್ತೆನೆ.ನೀವು ಗಾ೦ಧಿವಾದಿಯೇನು?"