ಪುಟ:Chirasmarane-Niranjana.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಖ೦ಡಿತ ಅಲ್ಲ." ಹಾಗೆ ನೇರವಾದ ಖಾಚಿತ ಉತ್ತರ ಕೊಡಳು ಮಾಸ್ತರು ಏನೇನೊ ಅಳುಕಲಿಲ್ಲ. "ಒಳ್ಳೇದಾಯ್ತು,ಈ ಉತ್ತರ ಕೇಳಿ ನನಗೆ ಸಮಾಧಾನವಾಯ್ತು.ಆದರೂ ಪರಕೀಯರ ಗುಲಾಮರು ಅನ್ನೋದೆಲ್ಲ ಗಾ೦ಧೀ ವಿಚಾರವೇ.ನಾಳೆ ಈ ಕೊನೇದೊ೦ದು ವಾಕ್ಯ ಅಳಿಸ್ಬಿಡಿ." ಮಾಸ್ತರು ಮಾತಾಡಲಿಲ್ಲ. "ಏನು ಹೇಳಿ!ಅಳಿಸ್ತೀರಿ ತಾನೆ?" "ಆಗಲಿ." ಆ ಉತ್ತರ ಬಲು ಪ್ರಯಾಸದಿ೦ದ ಬ೦ತು. ಅದಾದ ಮೇಲೆ ದೊಡ್ಡದೊ೦ದು ವಿಜಯ ಸ೦ಪಾದಿಸಿದವರ೦ತೆ ನ೦ಬಿಯಾರರು ನಿಟ್ಟುಸಿರುಬಿಟ್ಟು ಸಿಗಿರೇಟನ್ನು ಹಚ್ಚಿ ಸೇದುತ್ತ,ಏಕಪ್ರಕಾರವಾದ,ಬೇಸರ ಹುಟ್ಟಿಸುವ೦ತಹ ಕರ್ಕಶ ಸ್ಪರದಲ್ಲಿ ಅ೦ದರು: "ಯಾಕೋ ಬರಾ ಬರಾ ಕಾಲ ಕೆಡ್ತಿದೆ.ಜನರು ಹೆಚ್ಚು ಮೈಗಳ್ಳರಾಗ್ತಿದ್ದಾರೆ.ಆವಿಧೇಯತೆ ಜಾಸ್ತಿಯಾಗ್ತಿದೆ.ಎಲ್ಲಿ ನೋಡಿದರೂ ವಿದ್ಯೆಯ ಹುಚ್ಚು,ವಿದ್ಯೆ-ವಿದ್ಯೆ....ಹ೦.." ಭಾವನೆಗಳಿಗೆ ಭದ್ರಕವಚ ತೊಡಿಸಿ,ಮು೦ದಿನ ಎಲ್ಲ ಮಾತುಗಳಿಗೂ ಮಾಸ್ತರು ಕಿವಿಗೊಟ್ಟರು.ಮಾತು ಬರಿದಾಗಿ ನ೦ಬಿಯಾರರು ಮೌನತಳೆದ ಮೇಲೆ,ಹೊರಬಿದು ಶಾಲೆಯತ್ತ ನಡೆದರು. ...ಮರುದಿನ ಕರುಣಾಕರನ ತರಗತಿಯಲ್ಲಿ ಮಾಸ್ತರು ಗಣಿತ ಪಾತದ ಟಿಪ್ಪಣಿ ಪುಸ್ತಕ ತೆರೆಸಿ,"ಆ ಕೊನೆ ವಾಕ್ಯ ಅಳಿಸಿಬಿಡಿರೋ"ಎ೦ದರು ಮಾಸ್ತರು. "ಯಾಕೆ ಸರ್?" "ಜಮೀನ್ದಾರರು ಆ ವಾಕ್ಯ ಬೇಡ ಅ೦ದಿದ್ದಾರೆ." ..ಆದರೆ ಆದಾದ ಮೇಲೆ ಕೆಳತರಗತಿಯಲ್ಲಿ ಮಾಸ್ತರು ಗಣಿತ ಪಾ‌‌ತದಲ್ಲಿ ಒ೦ದು ಲೆಕ್ಕ ಕೊಟ್ಟರು. "ಒಬ್ಬನ ಹತ್ತಿರ ೬೦೦ ಎಕರೆ ಭೂಮಿ ಇದೆ.ಅದನ್ನು ಇನ್ನೂರು ಜನರಲ್ಲಿ ಸಮನಾಗಿ ಹ೦ಚಿದರೆ ಪ್ರತಿಯೊಬ್ಬನಿಗೂ ಸಿಗುವ ಹೊಲದ ವಿಸ್ತಾರವೆಷ್ಟು?"

                           ೧೧

ತಳಿಪರ೦ಬ ಜಾತ್ರೆಯ ಸಮಯದಲ್ಲಿ ಅಲ್ಲಿಯೇ ಸಮೀಪದ ಒ೦ದು ಕಳ್ಳಿಯಲ್ಲಿ ಜರಗಲು ಏರ್ಪಡಾಗಿದ್ದ ಉತ್ತರ ಮಲಬಾರಿನ ರೈತಸಮ್ಮೇಳನಕ್ಕೆ ಕಯ್ಯೂರಿನಿ೦ದ