ಆ ಮಾತಿನಲ್ಲಿ ಸೂಚ್ಯವಾಗಿದ್ದುದು ತಮಗೆ ಅರ್ಥವಾಯಿತೆಂದು ಹಲವರು ನಕ್ಕರು.
ಮುಂದೆ ಜನ,ಅರ್ಧಲ್ಲೇ ಬಿಟ್ಟು ಬಂದಿದ್ದ ಕೆಲಸಗಳನ್ನು ಪೂರ್ತಿಗೊಳಿಸಿಲೆಂದು ಚದರಿದರು.
....ಹೊಸದುರ್ಗಕ್ಕೆ ಹೊರಟುನಿಂತ ಫೌಜದಾರರಿಗೂ ಪೋಲೀಸರಿಗೂ ಉಡುಗೊರೆಯನ್ನೇನ್ನೋ ಜಮೀನ್ದಾರರು ಕೊಟ್ಟರು. ಆದರೆ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸದಿರಲಿಲ್ಲ. ಅವರೆಂದರು:
"ನೀವು ಮೃದು, ಬಹಳ ಮೃದು."
ತಮ್ಮ ಕಷ್ಟ ನಿಮಗೆ ಅರ್ಥವಾಗೋದಿಲ್ಲ. ನೀವಿನ್ನೂ ಹತ್ತೊಂಭತ್ತನೇ ಶತಮಾನದ ನ್ಯಾಯ ಮಾತಾಡ್ತೀರಿ. ಈಗ ಪರಿಸ್ಥಿತಿ ಬದಲಾಗಿದೆ. ಮೊದಲಾದರೆ ಇಷ್ಟ ಬಂದಹಾಗೆ ಏನು ಬೇಕಾದರೂ ಮಾಡಬಹುದಿತ್ತು. ಈಗ ಹಾಗಲ್ಲ. ಪತ್ರಿಕೆಗಳಿವೆ. ಕಾಂಗ್ರೆಸಿನವರೂ ಗಲಾಟೆ ಎಬ್ಬಿಸ್ತಾರೆ.ಆದ್ದರಿಂದ ಪ್ರತಿಯೊಂದೂ ನ್ಯಾಯ ಪ್ರಕಾರ ನಡೀತಿದೆ ಅಂತ ತೋರಿಸ್ಕೊಂಡೇ ಮುಂದುವರೀಬೇಕು."
"ಆದರೆ ನೀವು ಮುಂದುವರಿಯೋ ಹೊತ್ತಿಗೆ ಎಲ್ಲಾ ಮುಗಿದಿರತ್ತದೆ!"
"ಹಾಗಂದರೇನು?"
"ಆ ಅಪ್ಪು-ಚಿರುಕಂಡ ಎಲ್ಲಾ ನನ್ನ ಕಣ್ಣೆದುರಲ್ಲೇ ಹುಟ್ಟಿ ಬೆಳ್ದೋರು. ನೋಡಿ, ಹ್ಯಾಗೆ ಸೊಕ್ಕಿದ್ದಾರೆ ! ಅವರಿಗೆ ಏರಡು ಬಿಗೀಬೇಕಾಗಿತ್ತು."
ತಮ್ಮ ಖಾಕಿ ಚಡ್ಡಿಯೊಳಕ್ಕೆ ಕೈತೂರಿಸುತ್ತ ಘೌಜದಾರರೆಂದರು:
"ಬಿಗಿಯೋದು ದೊಡ್ಡ ಮಾತಲ್ಲ. ಆದರೆ ಎಷ್ಟೊಂದು ಜನ ಸೇರಿಬಿಟ್ಟ್ಟರೂ ಅಂತ ನೋಡಿದಿರೋ ಇಲ್ವೋ?"
"ಜನ ನೋಡಿ ಗಾಬರಿಯಾದ್ರೇನೋ ನೀವು? ಅಷ್ಟೇ ಜನ ಇಲ್ಲಿಗೆ ಬಂದು ನಿಮ್ಮೆದುರಲ್ಲೇ ಮನೆಗೆ ಬೆಂಕಿ ಇಡ್ತೇವೇಂತ ಹೇಳಿದರೂ ಸುಮ್ಮನಿರ್ತೀರೇನೊ?"
"ಹಾಗಲ್ಲ ಸರ್."
"ಹಾಗಲ್ಲ ಹೀಗೆ!"
"ನೀವು ತಪ್ಪು ತಿಳಕೊಂಡಿದ್ದೀರಿ. ನಿಮಗೆ ಅಸಮಾಧಾನಪಡಿಸಿ ನಮಗೆ ಸಿಗೋ ಲಾಭವಾದರೂ ಏನು? ಇನ್ನೊಂದ್ಸಲ ನೋಡಿ. ಹೀಗಾಗೋದಿಲ್ಲ."
ಘೌಜದಾರರು ಸ್ಟಲ್ಪ ಹಾದಿಗೆ ಬಂದರೆಂದು ಜಮೀನ್ದಾರರೆಂದರು: