ಪುಟ:Chirasmarane-Niranjana.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೬೧

   "ಮಾಸ್ತರು, ಚಿರುಕಂಡ, ಎಲ್ಲರನ್ನೂ ಕರೆದಿದ್ಯೇನು?"
   "ಹೂ."
   "ಸರಿ. ಎಷ್ಟು ಗಂಟೆಗೆ ಬರ್ಲಿ?"
   ಕೈಗಡಿಯಾರವಿಲ್ಲ ದಿದ್ದರೂ ಹಾಗೆ ಕೇಳುವುದು, ಘಂಟೆಯ ಮಾತನ್ನಾಡುವುದು,

ಶಿಸ್ತಿನ ಜೀವವಾದ ಅಪ್ಪುವಿಗೆ ಅಭ್ಯಾಸವಾಗಿತ್ತು.

   "ಬಾ. ಬೇಗ್ನೆ ಬಾ."
   "ಏಳು ಗಂಟೆಗೆ."
   "ಹೂಂ."
   ....ಏಳು ಘಂತೆಯ ಸುಮಾರಿಗೆ- ಅಪ್ಪುವಿನ ಮಾತಿನಲ್ಲೇ ಹೇಳುವುದಾದರೆ

ಏಲೂ ಘಂಟೆಗೆ ಸರಿಯಾಗಿ- ಆತ ಕಣ್ಣನ ಗುಡಿಸಲನ್ನು ಸಮೀಪಿಸಿದ. ಹೆಂಗಸರ ಸ್ಟರಗಳು ಕೇಳಿಬಂದವು. ಆದರೆ ಕಣ್ಣನ ಹೊರತಾಗಿ ಬೇರೆ ಗಂಡಸರು ಯಾರೂ ಅಲ್ಲಿ ಇದ್ದಂತೆ ತೋರಲಿಲ್ಲ.

   ಕಣ್ನ ಮುಗುಳ್ನಕ್ಕು ಸ್ವಾಗತಿಸಿದಾಗ, ಅಪ್ಪು ಕೇಲಿದ:
   "ಇನ್ನೂ. ಯಾರೂ ಬಂದಿಲ್ಟ?"
   ಕಣ್ಣನ ಮಾತಿನ ರೀತಿಯೂ ನಗೆಯ ಧ್ವನಿಯೂ ಯಾಕೋ ವಿಚಿತ್ರವಾಗಿದ್ದಂತೆ

ಅಪ್ಪುವಿಗೆ ತೋರಿತು. ನಡುಮನೆಯಲ್ಲಿ ಹಣತೆಯ ದೀಪ ಢಾಳಗಿ ಉರಿಯುತ್ತಿತ್ತು. ಹಾಸಿದ್ದ ಚಾಪೆಯ ಮೇಲೆ ಅಪ್ಪು ಕುಳಿತುಕೊಳ್ಳುತ್ತಿದ್ದಂತೆ ಕಣ್ಣ ಹೇಳಿದ: "ನಮ್ಮತ್ತೆ ಊರಿನಿಂದ ಬಂದಿದಾರೆ."

   ಆ ತಾಯಿ, ಹಿಂದೆ ದದೇವಕಿ ವಿಧವೆಯಾದಾಗ ಮಗಳನ್ನು ಕರೆದುಕೊಳ್ಳಲಾಗದೇ

ಇದ್ದ ಬ್ಡವೆ. ಕಣ್ಣ ದೇವಕಿಯನ್ನು ಮದುಬೆಯಾದಮೇಲೆ ಮಾತ್ರ ಎರಡು ಮೂರು ಸಾರೆ ಆಕೆ ಬಂದಿದ್ದಳು. ಅಂತೂ ಕಯ್ಯೂರಿಗೆ ಹೊಸಬಳಲ್ಲ. ಆಕೆಯ ಆಗಮನಸದಿಂದ ಆಶ್ಚರ್ಯವೇನೂ ಆಗದೆ ಅಪ್ಪುವೆಂದ:

  "ಬೆಳಿಗ್ಗೆ ಬಂದರಾ?"
  "ಹೂಂ."
  ದೆವಕಿ ಅತ್ತ ಬಂದಳು. ಕಣ್ನನ ಕೈಹಿಡಿದು ಬಹಳ ದಿನಗಳಾದ ಮೇಲೆ

ಗರ್ಭೀಣಿಯಾದ ಆಕೆಯನ್ನು -ಆ ಅಕ್ಕನನ್ನು -ಕುತೂಹಲದಿಂದ ಅಪ್ಪು ನೋಡಿದ. ದೇವಕಿ ಮುಗುಳ್ನಕ್ಕು ಅಡುಗೆಮನೆಯತ್ತ ದಿಟ್ಟಿಸಿ ಕರೆದಳು:

  "ಜಾನಕಿ, ಇಲ್ಲಿ ಬಾ!"
  ಅಪ್ಪುವಿನ ಮನಸ್ಸು ಕೇಳಿತು - ಯಾರು ಈ ಜಾನಕಿ? ಅಮ್ಮನೂ ಅಲ್ಲ

11