ಪುಟ:Chirasmarane-Niranjana.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಚಿರಸ್ಮರಣೆ

 ......ಬೆಳಿಗ್ಗೆ ಎದ್ದ ಅಪ್ಪು ಎಲ್ಲವನ್ನೂ ಮರೆತವನಂತೆ ತಲೆಕೊಡವಿ, ಭತ್ತದ

ಕಣಜ ಕಟ್ಟುವ ಕೆಲಸದಲ್ಲಿ ತಂದೆಗೆ ನೆರವಾದ. ಸಂಜೆ ಚಿರುಕಂಡನ ಭೇಟಿಯಾಯಿತು. ಆಗ, ರಾತ್ರೆ ತಾನು ಕಣ್ಣನ ಮನೆಗೆ ಊಟಕ್ಕೆ ಹೋಗಿದ್ದ ವಿಷಯ ಚಿರುಕಂಡನಿಗೆ ತಿಳಿಸಬೇಕೆಂದಿತು ಅಪ್ಪುವಿನ ಮನಸ್ಸು. ಆದರೆ ತನ್ನಿಂತಾನಾಗಿಯೇ ಆ ಯೋಚನೆ ಮರೆಯಾಯಿತು!

  ಕಣ್ಣ ಯಾಕೆ ತನ್ನನ್ನು ಒಬ್ಬನನ್ನೇ ಊಟಕ್ಕೆ ಕರೆದಿದ್ದನೆಂಬುದನ್ನು ಅಪ್ಪು

ತರ್ಕಿಸಿದ್ದ. ಕ್ರಾಂತಿಕಾನಾದ ತಾನು ಅಂತಹ ಯೋಚನೆ ಮಾಡುವುದೇ ತಪ್ಪೆಂದು ಒಳದನಿ ಚೀರುತ್ತಿತ್ತು. ಕಣ್ಣನೇನಾದರೂ ಬಂದು ಆ ಪ್ರಸ್ತಾಪವೆತ್ತಿದರೆ ಚೆನ್ನಾಗಿ ಬಯ್ದುಬಿಡಬೇಕು ಎಂದುಕೊಂಡ ಅಪ್ಪು. ಆದರೆ ಕಣ್ಣ ಸಂಜೆ ಸಿಗಲಿಲ್ಲ. ಆದರಿಂದ ಅಪ್ಪುವಿಗೆ ಬೇಸರವಾಯಿತು.

 ಮಾರನೆಯ ದಿನ ಉರಿಬಿಸಿಲಲ್ಲಿ ಅಪ್ಪು ನದಿಗೆ ಹೋಗಿ ತಣ್ಣನೆ ಸ್ನಾನ

ಮಾಡಿದ. ಹಿಂದೊಮ್ಮೆ ಕಲ್ಲುಬಂಡೆಯ ಮೇಲೆ ಬಿಸಿಲಲ್ಲಿ ಮೈಯ ನೀರು ಆರಿಸಿಕೊಳ್ಳುತ್ತಿದ್ದಾಗ ದೇವಕಿಗೆ ಸಂಬಂಧಿಸಿ ಕಣ್ಣ ಆಡಿದ್ದ ಮಾತು ನೆನಪಾಗಿ ನಗುಬಂತು. ಆದರೆ ಮರುಕ್ಷಣವೇ ಕಸಿವಿಸಿ ಎನಿಸಿತು. 'ನದಿಯದಂಡೆಯುದ್ದಕ್ಕೂ ಮೇಲಕ್ಕೆ ಹೋದರೆ ಕಣ್ಣನ ಮನೆ ಸಿಗ್ತದೆ. ನಿನ್ನೆಯೆಲ್ಲ ಆತ ಕಾಣಿಸಿಕೊಂಡೇ ಇಲ್ಲ, ಮನೇಲಿದ್ದಾನೇನೋ ನೋಡ್ಬಹುದು'ಎಂದಿತು ಮನಸ್ಸು. ಮರುಕ್ಷಣವೇ ಆ ಬಯಕೆಯೊಳಗಿನ ಬಯಕೆ ಸ್ಪಷ್ಟವಾಗಿ, ಆತ ತನಗೆ ತಾನೇ ಛೀಮಾರಿ ಹಾಕಿದ.

 ಆ ದಿನವೂ ಕಣ್ಣ ಕಾಣಿಸದಿದ್ದಾಗ ಅಪ್ಪುವಿನ ಮನಸ್ಸು ಅಸ್ತವ್ಯಸ್ತವಾಯಿತು.
 "ಮೈ ಸರಿಯಾಗಿಲ್ವೇನೋ?"ಎಂದ ಚಿರುಕಂಡ.
 "ಯಾಕೋ ಒಂಥರಾ ಇದ್ದೀಯಲ್ಲ ಅಪ್ಪು?"ಎಂದು ಮಾಸ್ತರು ಕೇಳಿದರು.
 "ಏನಿಲ್ಲ, ಏನಿಲ್ಲ" ಎಂದು ಹೇಳಿ ಅಪ್ಪು ಅವರಿಂದ ತಪ್ಪಿಸಿಕೊಂಡ.ಆದರೆ

ಮನಸ್ಸನ್ನು ಸುತ್ತುವರಿದ ಯೋಚನೆಗಳ ಮುತ್ತಿಗೆಯಿಂದ ಅಷ್ಟೇ ಸುಲಭವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ.

  ಆದರೆ ಮರುದಿನ ಕಣ್ಣ ಸಿಕ್ಕಿದಾಗ ಅಪ್ಪು ಕೇಳಿದ:
 "ಎಲ್ಲಿಘೋಗಿದ್ದೆ ಎರಡು ದಿವಸ?"
 "ಮನೇಲಿ ಇದ್ದೆನಪ್ಪ."
 "ಹಾಗೇನು? ನಿಮ್ಮ ಅತ್ತೇನ ಬಿಟ್ಟುಬರೋದಕ್ಕೆ ನೇನೆಲ್ಲಾದರೂ ಊರಿಗೆ

ಹೋದೆಯೇನೋಂತಿದ್ದೆ."