ಖಂಡಿತವೆಂದು ತಿಳಿದು ಮಾಸ್ತರೆಂದರು:
"ಹೂಂ. ಆಕೆ ಉಪಾಧ್ಯಾಯಿನಿಯಾಗಿ ಯಾವುದೋ ಊರಲ್ಲಿದ್ದಾರೆ. ಬಹಳ ಒಳ್ಳೆಯವರು."
“ನೀವು ಯಾಕ್ಸರ್ ?"
ಪ್ರಶ್ನೆಯನ್ನು ಪೂರ್ಣಗೊಳಿಸಲು ಬಿಡದ ಮಾಸ್ತರು ಗಟ್ಟಿಯಾಗಿ ನಕ್ಕರು ಕೊನೆಗೆ ತಲೆಯಾಡಿಸಿ ಹೇಳಿದರು:
"ಯಾಕೋ ಆಗಲಿಲ್ಲ.”
"ಆಗೋದಿಲ್ವೇ ಸರ್?"
ಮಾಸ್ತರು ನಿಧಾನವಾಗಿ ಪದಗಳನ್ನು ಬಿಡಿಬಿಡಿಯಾಗಿ ಉಚ್ಚರಿಸುತ್ತ ಅಂದರು:
"ನನಗೆ ಗೊತ್ತಿಲ್ಲ. ಅಪ್ಪುವಿನಷ್ಟು ವಯಸ್ಸಾಗಿದ್ದಾಗ ನನಗೆ ಒಬ್ಬಳು ಹುಡುಗಿಯ ಗುರುತಾಯ್ತು. ಒಬ್ಬರನ್ನೊಬ್ಬರು ಮೆಚ್ಚಿಕೊಂಡ್ವಿ, ಅದೇ ಪ್ರೀತಿ ಅಂತ ನಾನು ಭಾವಿಸ್ಥೆ. ಮುಂದೆ ಮದುವೆಯಾಗೋದು ತಪ್ಪಿಹೊಯ್ತು."
"ಏನಾಯ್ತು ಸರ್?"
"ಪ್ರೀತಿ ಅಂದರೆ ಗಂಡು ಹೆಣ್ಣು ಒಬ್ಬರನ್ನೊಬ್ಬರು ಅಪೇಕ್ಷಿಸಿದರೆ ಮಾತ್ರ ಸಾಲದೂಂತ ನನಗೆ ಮನವರಿಕೆಯಾಯ್ತು. ನನ್ನ ಜೀವನದ ಗುರಿ ಧ್ಯೇಯ ಒಂದೂ ಆಕೆಗೆ ಅರ್ಥವಾಗಲಿಲ್ಲ. ಅಂಥಾದ್ದೆಲ್ಲ ಅವಳಿಗೆ ಇಷ್ಟವಿರಲಿಲ್ಲ. ಅದಕ್ಕೇ ಸಂಬಂಧ ಮುರಿದುಹೊಯ್ತು... ಆಮೇಲೆ ಮದುವೆ ಯೋಚನೇನೇ ಬಿಟ್ಟುಬಿಟ್ಟೆ.
"ಸರಿಯಾದೋರ್ನ ಮಾಡ್ಕೊಳ್ಬಾರ್ದಾ?"
"ನೋಡೋಣ.... ಮುಂದಿನ ಮಾತು ಮುಂದೆ! ಮೊದಲು ನಿಮ್ಮ ಮದುವೆ ಆಗಲಿ, ಕಯ್ಯೂರಿನ ರೈತನಾಯಕರು, ಪೋಲಿಗಳಲ್ಲ ಅಂತ ಜನ ಹೊಗಳಲಿ."
ಹಾಗೆ ಹೇಳಿದ ಮಾಸ್ತರೂ ಅದನ್ನು ಕೇಳಿದ ಅಪ್ಪುವೂ ಚಿರುಕಂಡನೂ ಒಟ್ಟಾಗಿ ನಕ್ಕರು.
'ತಾಯಿ ತಂದೆಗೆ ಈ ವಿಷಯ ಯಾವತ್ತು ತಿಳಿಸ್ತೀಯಾ?” ಎಂದರು ಮಾಸ್ತರು.
'ಆ ಜವಾಬ್ದಾರಿ ನಿಮ್ಮದು ಸರ್" ಎಂದ ಅಪ್ಪು.
"ಸರಿಹೋಯ್ತು! ಸರಿಹೋಯ್ತು! ನಿಮ್ಮ ಅಮ್ಮನಿಗೆ ಸೊಸೆ ಒಪ್ಪಿಗೆ
ಯಾಗಿದಿದ್ದರೆ ನನ್ನನ್ನು ಬಯ್ತಾರೆ, ಅಷ್ಟೆ.
“ಅಮ್ಮ೦ದಿರಿಗೇನು ಸರ್? ಮಕ್ಕಳು ಮದುವೆಗೆ ಒಪ್ಪಿದರೆ ಸಾಕೂಂತ ಇರದೆ ಎಂದ ಚಿರುಕಂಡ.
"ಸ್ವಾನುಭವದಿಂದ ಈ ಮಾತು ಅನ್ತಿದ್ದಿಯೇನಯ್ಯ?" ಎಂದು ಹೇಳಿ ಮಾಸ್ತರು