ಪುಟ:Chirasmarane-Niranjana.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೭೪ ಚಿರಸ್ಮರಣೆ

      "ಅವರಿಗೆಲ್ಲರಿಗೂ ನಾನೇ ಪ್ರತಿನಿಧಿ ಅಂತ ತಿಳ್ಕೊ ಅಪ್ಪು" ಎಂದು ಮಾಸ್ತರು

ಹೇಳಿದ್ದರು.

      ಆದರೂ ನೆರೆದಿದ್ದ ಜನರೆನ್ನೆಲ್ಲ ನೋಡುತ್ತಿದ್ದ ಅಪ್ಪುವಿಗೆ, ಬರಲಾಗದೆ ಇದ್ದ

ತನ್ನವರ ನೆನಪಾಗದಿರಲಿಲ್ಲ....

     ಮದುವೆ ನಡೆದ ಅವದಿಯಲ್ಲಿ, ಕಯ್ಯೂರಿನ ರೈತರ_ಅವರ ಸಘದ_

ಚಟುವಟಿಕೆ ಅದೊಂದೇ ಏನೋ ಎನ್ನುವಹಾಗಾಯಿತು. ಆ ಭಾವನೆ ಸರಿಯಲ್ಲವೆಂದು ತೋರಿಸಿಕೊಟ್ಟವನು ಅಪ್ಪುವೇ. ಮದುವಣಿಗ ಮತ್ತೆ ಮೊದಲಿನಂತೆಯೇ ಸಂಘದ ಕೆಲಸಕಾರ್ಯಗಳಲ್ಲಿ ನಿರತನಾದ.

   ......... 
   ಸಂತೋಷದ ಅಧ್ಯಾಯದ ಬಳಿಕ ದುಃಖದ ಪುಟಗಳಿದ್ದುವು. ಅದು ಮಾಸ್ತರರ

ಬೀಳ್ಕೊಡುಗೆ. ಬಡ ಕೋರನಿಂದ ಮೊದಲಾಗಿ ಮಧ್ಯಮ ರೈತರವರೆಗೆ ಪ್ರತಿಯೊಬ್ಬರೂ ಅವರನ್ನು ಊಟಕ್ಕೆ ಕರೆಯುವವರೇ. ನಂಬಿಯಾರರ ದುರಾಗ್ರಹಕ್ಕೆ ಒಳಗಾಗಿ ಮಾಸ್ತರು ಹೊರಡುತ್ತಿರುವರೆಂಬ ಸಂಗತಿಯಿಂದೇನೂ ರೈತರು ಬೆದರಲಿಲ್ಲ.

     "ನಾನಿನ್ನು ಕಯ್ಯೂರಿಗೆ ಯಾವತ್ತೂ ಬರೋದೇ ಇಲ್ಲ ಅನ್ನುವ ಹಾಗೆ ಔತಣ

ಮಾಡ್ತಿದ್ದೀರಲ್ಲ" ಎಂದು ಮಾಸ್ತರು ನಗುನಗುತ್ತ ಪ್ರತಿಭಟಿಸಿದರು.

     "ಇನ್ನೊಂದು ಸಲ ರೈತ ಸಮ್ಮೇಳನ ಇಲ್ಲಿಯೇ ಮಾಡ್ತೇವೆ ಮಾಸ್ತರೆ, ಆಗ

ನಿಮ್ಮನ್ನು ಕರೀತೇವೆ" ಎಂದು ಹಲವು ಜನ ಹೇಳಿದರು.

   ಸಂಘದ ಕಾರಣದಿಂದಲೆ ತಾನೊಬ್ಬ ಮನುಷ್ಯ ಎನಿಸಿಕೊಂಡಿದ್ದ ಕೃಷ್ಣನ್

ನಾಯರ್ ಏನು ಮಾಡಿದರೆ ತನ್ನ ಕೃತಜ್ಞತೆ ಸೂಚಿಸಿದಂತಾಗುವುದೋ ಎಂದು ಚಡಪಡಿಸಿದ.

    ಗುರು ಕಾಣಿಕೆಗಳು ಬಂದವು ! ಒಬ್ಬಂಟಿಗರಾಗಿ ಕೈಬೀಸಿ ಹೊರಡಬೇಕಾಗಿದ್ದ

ಮಾಸ್ತರು ಹಣಕಾಸು ಬಟ್ಟೆ ಬರೆಗಳನ್ನು ಸಂಘದ ವಶಕ್ಕೊಪ್ಪಿಸಿದರು.ಹಣ್ಣು ಹಂಪಲುಗಳ ಬುಟ್ಟಿಗಳನ್ನು ಕೈಮುಟ್ಟಿ ಸ್ವೀಕರಿಸಿ ಹಿಂದಕ್ಕೆ ಕಳುಹಿಸಿದರು.

    "ಇಲ್ಲಿಂದ ಯಾವೂರಿಗೆ ಹೋಗ್ತೀರಿ ಸರ್ ?" ಎಂದು ಚಿರುಕಂಡ ಮಾಸ್ತರ

ಜತೆಯಲ್ಲಿ ಅಪ್ಪು ಮತ್ತು ತಾನು ಇಬ್ಬರೆ ಉಳಿದಾಗ ಕೇಳಿದ.

    ತಲಚೇರಿಗೆ ಅ ತ ಎಲ್ಲರಿಗೂ ತಿಳಿಸಿಬಿಡಿ. ಆದರೆ, ಮುಂದೆ ಅಲ್ಲಿಂದ

ಕಲ್ಲಿಕೋಟೆಗೆ ಹೋಗ್ತೇನೆ. ಅಲ್ಲಿ ನಮ್ಮ ಮುಖಂಡರನ್ನು ಕಾಣ್ಬೇಕು. ಆದರೆ