ಪುಟ:Chirasmarane-Niranjana.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩ ಚಿರಸ್ಮರಣೆ "ಬೇಡ!ದುಡ್ಡು ಪೋಲು ಮಾಡ್ಬೇಡಿ! ಕಾಯಿಲೆಯಾದಾಗ ನಾನೇ ಇಂಟರ್‍ನಲ್ಲಿ ಹೋಗ್ತೇನೆ" ಎಂದು ಮಾಸ್ತರು ವಿರೋಧಿಸಿದರು.

    ತಮ್ಮ ಕೈಗಡಿಯಾರವನ್ನು ಬಿಚ್ಚಿ ಅವರು ಅದಕ್ಕೆ 'ಕೀ' ಕೊಟ್ಟರು, ಅಪ್ಪು ಚಿರುಕಂಡರತ್ತ ನೋಡುತ್ತ ಅವರೆಂದರು: 
   "ಸಂಘದ ಕಟ್ಟಡ ಆದ್ಮೇಲೆ ನೀವೊಂದು ಗೋಡೆ ಗಡಿಯಾರ ತರ್ಬೇಕು."

"ಹೂಂ, ತರ್ತೇವೆ."

  "ಈಗ ಈ ಕೈಗಡಿಯಾರ ನಿಮಗೆ ಉಡುಗೊರೆ ಕೊಡ್ಬೇಕೂಂತ ಮಾಡಿದ್ದೇನೆ.

ಗಾಡಿಗೆ ಹೊತ್ತಾಯ್ತು.ಹೇಳಿ, ಹ್ಯಾಗೆ ಹಂಚ್ಕೊಳ್ತೀರಾ?"

  ಇದು ತಮಾಷೆಯ ಮಾತು ಎಂದುಕೊಂಡ ಅಪ್ಪು, "ನೀವೇ ಇಟ್ಕೊಳ್ಳಿ ಸರ್ ",

ಎಂದ ಚಿರುಕಂಡ, ಮಾಸ್ತರ ಮುಖ ಗಂಭೀರವಾಯಿತು. ತಗೋ ಚಿರುಕಂಡ, ನಿನ್ನ ಕೈಗೆ ಕೊಡ್ತೇನೆ." ಅವರು ಕೊಟ್ಟೇ ತೀರುವುದು ಖಂಡಿತವೆಂದು ತಿಳಿದು ಚಿರುಕಂಡ: "ಅಪ್ಪು ಕೈಗೆ ಕೊಟ್ಟೆ." ಮಾಸ್ತರು ಹಾಗೆಯೇ ಮಾಡಿದರು. ಮುದ್ದಿಸಿದ ಮಗುವಿನ ಹಾಗೆ ಅಪ್ಪು ಚಿರುಕಂಡನನ್ನು ನೋಡಿದ. ಕೈಮರ ಬೀಳುತ್ತಿದ್ದಂತೆ, ನಿಲ್ದಾಣದ ಮೂಲೆಯಲ್ಲಿ ನಿಂತಿದ್ದ ಆ ಮೂವರ ಕಡೆ ಯಾರೋ ಓಡಿಬರುತ್ತಿದ್ದುದು ಕಂಡಿತು, ಆತನನ್ನು ಮೊದಲು ಗುರುತಿಸಿದ ಮಾಸ್ತರೆಂದರು: "ಕೋರ!" ಅವನ ಮೂಲಕ ಏನನ್ನೋ ಹೇಳಿ ಕಳುಹಿಸಿರಬೇಕೆಂದು, ಆತ ಹತ್ತಿರ ಬಂದೊಡನೆ ಅಪ್ಪು ಕೇಳಿದ : "ಏನು ಕೋರ?" "ಏನಿಲ್ಲ!" ಎಂದು , ತನ್ನ ವಕ್ರ ವಕ್ರವಾಗಿದ್ದ ಹಲ್ಲುಗಳನ್ನು ತೋರಿಸಿ ಏದುಸಿರುಬಿಡುತ್ತ ಕೋರ ಹೇಳಿದ: "ಗುಂಪಿನಿಂದ ತಪ್ಪಿಸ್ಕೊಂಡು ಬಂದ್ಯಾ ?" ಎಂದು ಮಾಸ್ತರು ಒಲವು ತುಂಬಿದ ನೋಟದಿಂದ ಆತನನ್ನು ನೋಡುತ್ತ ಕೇಳಿದರು. ಕೋರ ಲಜ್ಜೆಯಿಂದ ದೂರ ನಿಂತವೇ ಹೊರತು ಉತ್ತರ ಕೊಡಲಿಲ್ಲ. ರೈಲುಗಾಡಿ ಬಂತು. ಅಲ್ಲೇ ಎದುರುಗಿದ್ದ ಡಬ್ಬಿಯನ್ನೇರಿ ಬಾಗಿಲ ಬಳಿಯೇ ನಿಂತು ಮಾಸ್ತರು ಮುಖ ಹೊರಹಾಕಿ , ಅಪ್ಪು ಚಿರುಕಂಡನನ್ನು ಸಮೀಪಕ್ಕೆ ಕರೆದು ಹೇಳಿದರು: