ಪುಟ:Chirasmarane-Niranjana.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೭೭ "ಇನ್ನು ನಾನು ನಿಮ್ಮ ಮಾಸ್ತರಲ್ಲ.ಇವತ್ತಿನಿಂದ ಸರ್ ಅಂತ ಕೂಗ್ಬೇಡಿ ಸಂಗಾತಿ ಅಂತ ಕರೀರಿ." "ಹೂಂ,ಹೂಂ..." ಎಂದು ಇಬ್ಬರೂ ತಲೆಯಾಡಿಸಿದರು ಶಿಳ್ಳು ಕೇಳಿಸಿ ಗಾಡಿ ಚಲಿಸಿತು. ಮಾಸ್ತರು ಮೂವರನ್ನೂ ನೋಡುತ್ತ ಕೈಬೀಸಿದರು. ಅಪ್ಪು ಮತ್ತು ಚಿರುಕಂಡ ಇಬ್ಬರೂ ಗಟ್ಟಿಯಾಗಿ ಏಕಕಾಲದಲ್ಲಿ ಅಂದರು: "ನಮಸ್ಕಾರ ಸರ್!"

                            ೧೪
ಮಾಸ್ತರು ತೋರಿಸಿಕೊಟ್ಟಿದ್ದುದು ನಿರಂತರ ದುಡಿಮೆಯ ಹೆದ್ದಾರಿ.ಕಯ್ಯೂರಿನ ರೈತರೆಲ್ಲ ಒಬ್ಬಿಬ್ಬರು ಶ್ರೀಮಂತ ರೈತರನ್ನು ಬಿಟ್ಟು-ಆ ಹಾದಿಯನ್ನು ತುಳಿದರು.ಹಿಂದೆ ಏನು ಆದರೂ ವಿದ್ದಿಯನ್ನು ಹಳಿಯುತ್ತಿದ್ದವರು,ಈಗ ತಮ್ಮ ಭವಿಷ್ಯತ್ತಿನ ನಿರ್ಮಾ ಗಳು ತಾವೇ ಎಂಬುದನ್ನು ಮನಗಂಡಿದ್ದರು.ವಿಶ್ವದ ಎಷ್ಟೋ ಕಡೆ ಕಾಲಕಾಲಕ್ಕೂ ಜನ ಬಂಡಾಯವೆದ್ದು ನಿರಂಕುಶ ಪ್ರಭುತ್ವವನ್ನು ನಿರ್ಮೂಲ ಮಾಡಿದ ರೋಮಾಂಚಕಾರಿ ಕಥೆ ಅವರ ಬಾಹುಗಳಲ್ಲಿ ಶಕ್ತಿ ತುಂಬಿತು.ಪರಕೀಯರ ಆಡಳಿತಕ್ಕೂ ತಮ್ಮ ಇರುವಿಕೆಗೂ ಸಂಬಂಧವಿದೆ ಎಂಬ ತಿಳಿವಳಿಕೆ,ಸ್ವಾತಂತ್ರೋದಯವನ್ನು ಜನ ಇದಿರು ನೋಡುವಂತೆ ಮಾಡಿತು.

ಕಣ್ಣ ತನಗೆ ಹುಟ್ಟಿದ ಹೆಣ್ಣುಮಗುವಿಗೆ ಚೇತನಾ ಎಂದು ಹೆಸರಿಟ್ಟ.ಹೊಸ ವಿಚಾರ ಮನಗಳಲ್ಲೂ ಮನೆಗಳಲ್ಲೂ ಬೇರುಬಿಟ್ಟಿತೆಂಬುದಕ್ಕೆ ಆ ನಾಮಕರಣ ನಿದರ್ಶನವಾಗಿತ್ತು.

ಆ ಊರಿನ ಎರಡು ಸಾವಿರ ಜನರಲ್ಲಿ ಎಳೆಯ ಮಕ್ಕಳ ಹೊರತಾಗಿ,ಜಮೀನ್ದಾರರು ಮತ್ತು ಅವರ ಸೇವಕರನ್ನು ಬಿಟ್ಟು ಉಳಿದವರೆಲ್ಲ ಸಂಘದ ಸದಸ್ಯರಾದರು.ಕುಂ ಂಬುವಿನ ಮನೆಯವರು ಕೊಟ್ಟ ಜಾಗದಲ್ಲಿ ಸಂಘದ ಕಟ್ಟಡ ಸಿದ್ದವಾಯಿತು.

ರೈತರು ಸರದಿಯಂತೆ ಬಂದು ಅರಕ್ಕೋಸ್ಕರ ದುಡಿದರು.ಹೊಲಗಳಲ್ಲಿ ಮಳೆಗಾಲದ ಮೊದಲ ಕೆಲಸವಾದ ಮೇಲೆ ರೈತರು ಅಭ್ಯಾಸಕೂಟಗಳಲ್ಲಿ ನಿರತರಾದರು.

ಜೂನ್ ಬಂತು. ಕಯ್ಯೂರಿಗೆ ಅದು ಸಂಭ್ರಮದ ತಿಂಗಳು.ನಂಬಿಯಾರರು ಮತ್ತು ನಂಬೂದಿರಿಯ ಮಕ್ಕಳಿಬ್ಬರು ಹೈಸ್ಕೂಲು ವಿಧ್ಯಾಭ್ಯಾಸಕ್ಕಾಗಿ ನೀಲೇಶ್ವರಕ್ಕೆ ಹೋದರು.ಮಾರನೇ ದಿನ ಬೇರೆಯೂ ಇಬ್ಬರೂ ಹುಡುಗರು ಅದೇ