ಪುಟ:Chirasmarane-Niranjana.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

ಕಣ್ಣ ನಗದೆ, ಗಂಭೀರವಾಗಿಯೇ ಆ ಪ್ರಶ್ನೆಯನ್ನು ಆಲಿಸಿದವನಂತೆ ನಟಿಸಿದ. "ಹೂಂ. ಹೂಂ, ಹಾಗೇಂತ್ಲೆ ಹೇಳ್ಬೇಕು." "ಹಿಂದಿನ ಮಾಸ್ತರು ಶಾಲೆ ಕೆಲಸದ ಮೇಲೆ ನಿಗಾ ಸಂಘದವರು ಜತೆ ಇರ್ತಿದ್ರಂತೆ." "ಅದೇನೋಪ್ಪ, ಅಂತೂ ಅವರು ಹೆಚ್ಚಾಗಿ ಸಂಘದೋರ ಜತೇಲಿ ಇರ್ತಿದ್ರು." "ನಾನು ಹೀಗೆಲ್ಲ ಕೇಳ್ದೇಂತ ಯಾರಿಗೆ ಹೇಳ್ಬೇಡಪ್ಪ ಸದ್ಯ;, ನನಗೆ ಯಾಕೆ ಬೇಕು ಇದೆಲ್ಲ? ಜಮೀನ್ದಾರರು ಹಾಗೆ ಹೇಳಿದ್ರೂಂತ ವೆಚಾರಿಸ್ದೆ, ಅಷ್ಟೆ." "ಅಯ್ಯೋ,ಅದಲ್ಲ ಎನು ದೊಡ್ಡ ತಪ್ಪು.?" "ಹಾಗಲ್ಲವಪ್ಪ!ನಾನು ಪರ ಊರಿನೋನುಯ್. ವಯಸ್ಸಾಗಿದೆ. ಯಾರ ವೈರವೂ ನನಗೆ ಬೇಡ. ಜಮೀನ್ದಾರರ ಜತೇಲೂ ನಾನು ಸ್ನೇಹದಿಂದಿರ್ಬೇಕು.ರೈತರ ಜತೇಲೂ ಸ್ನೇಹದಿಂದಿರ್ಬೇಕು ಅಲ್ವೇನಪ್ಪ?

 "
 "ನಿನ್ನ ಮಕ್ಕಳು ಈ ಶಾಲೆಗೆ ಬರ್ತಾರೋ?"
 "ನನ್ನದಿನ್ನೂ ಚಿಕ್ಕಮಗು."
 "ಐದು ವ್ರಷ ಆಗಿಲ್ವೊ?"
 "ಇಲ್ಲ .ಇನ್ನು ಐದೇ ತಿಂಗಳು."
 "ಬರೇ ಚಿಕ್ಕದು ಹಾಗಾದರೆ"-ಎಂದು ಆ ಉಪಾಧ್ಯಾಯರು ಅಭಿಪ್ರಾಯ ಇತ್ತರು. ನ್ನನ ಮಗಳಿಗೆ ಪಾಠ ಹೇಳೋದಕ್ಕೆ ನೀವು ಇಲ್ಲಿರೋದಿಲ್ಲ' ಎಂದ ಕಣ್ಣ, ಮನಸ್ಸಿನಲ್ಲಿಯೆ.
 ಇಲ್ಲಿ, ಅಕ್ಕಿ ತರಕಾರಿ ಹಾಲು ಮೂಸರು ಅನುಕೂಲವೆ ಎಓದು ವಿಚಾರಿಸಲು ಹೊರಟು ಉಪಾಧ್ಯಾಯರು, ಮೂಗೆಗೆ ಒಂದು ಚಿತೆಕೆ ನಶ್ಯೆವೇರಿಸಿದರು. ಆ ವಿಷಯ ಮತ್ತೂ ಸ್ವಲ್ಪ ಹೂತ್ತು ಅವರೊಡನೆ ಹರಟೆ ಹೂಡೆಯಲು ಕಣ್ಣನೂ ನಿರಾಕರಿಸಲಿಲ್ಲ.
ಆದರೆ ಸಂಘದ ಕಟ್ಟಡಕ್ಕೆ ಮರಳ್ಳಿ ಬಂದೂಡನೆ ಮೂತ್ರ, ನಡೆದುದೆಲ್ಲ ವನ್ನೂ ಆಭಿನಯಪೂರ್ವಕವಾಗಿ ಕಣ್ಣ ಬಣ್ಣಿಸುತ್ರ, ನೋಡುತ್ತಿದ್ದ ಕೇಳುತ್ತಿದ್ದವರೊಡನೆ ತಾನೂ ಬಿದ್ದುಬಿದ್ದು ನಕ್ಕ. ಇನ್ನು ಪ್ರತಿಯೂಬ್ಬರು ಅ ಬಡ ಉಪಾಧ್ಯಾಯರನ್ನು ಗೇಲಿಮಾಡಲು ತೂಡಬಹುದೆಂದು ಚಿರುಕಂಡನೆಂದ:
"ಇಲ್ಲಿ ನೋಡಿ. ಯಾರೂ ಅವರ ತಂಟೆಗೆ ಹೋಗಬಾರ್ಬು. ಬಡಪಾಯಿ ಇದ್ದಷ್ಟು ಕಾಲ ಪಾಠ ಹೇಳ್ಲಿ. ಯಾರೂ ಆ ಮುದುಕನಿಗೆ ಹಿಂಸೆ ಕೊಡ್ಬೇಡಿ."