ಪುಟ:Chirasmarane-Niranjana.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೮೩

  .....ಶಾಲೆಯ ಪಾಠದ ಬಳಿಕ ಹುಡುಗರ ಆಟದ ಏರ್ಪಾಟನ್ನು ಸಂಘ ಮಾಡಿತು. ಹನ್ನೊಂದು ವರ್ಷ ವಯಸ್ಸಿನ ಕುಟ್ಟಿಕೃಷ್ಣನ ನೇತೃತ್ವದಲ್ಲಿ  ಬಾಲ ಸಂಘವೇರ್ಪಟ್ಟಿತು. ಕುಟ್ಟಿಕೃಷ್ಣ ಸಮರ್ಥನಾದ ಬಾಲನಾಯಕನೇ ಆಗಿದ್ದ ಆತನ ಸಂಘಟನಾ ಸಾಮರ್ಥ್ಯಕ್ಕೆ ದೊಡ್ಡವರೂ ಬೆರಗಾದರು. 
   ....ಆದರೆ, ಹಾಗೆ ಬೆರಗಾಗುತ್ತ ಕುಳಿತಿರಲು ಇನ್ನು ಅವಕಾಶವಿಲ್ಲವೆಂಬಂತೆ ಘಟನೆಗಳು ನಡೆದವು.  ಮುಖ್ಯವಾದುದು: ದ್ವಿತೀಯ ಘೋರ ಮಹಾಯುದ್ಧದ ಆರಂಭ. ಯುದ್ಧ ಶುರುವಾದುದೆಲ್ಲೋ ಲೋಕದೊಂದು ಮೂಲೆಯಲ್ಲಿ, ಬಲು ದೂರದ ಕಾಡಿಗೆ ಬೆಂಕಿ ಬಿದ್ದಹಾಗೆ, ಆದರೆ, ಅದರ ಬೇಗೆ ಕಯ್ಯೂರಿಗೂ ತಟ್ಟದೆ ಹೋಗಲಿಲ್ಲ, ಬೆಂಕಿಪೊಟ್ಟಣದಿಂದ ಹಿಡಿದು ಹಾರೆ ಪಿಕಾಸಿಯವರೆಗೆ ಸಾಮಗ್ರಿಗಳ ಬೆಲೆ ಮೆಲ್ಲಮೆಲ್ಲನೆ ಏರಿತು. 
  ಗುಪ್ತವಾಗಿ ಬರುತ್ತಿದ್ದ ಕರಪತ್ರಗಳೂ, 'ಸಾಹಿತ್ಯ'ವೂ ದೇಶದ ಬಂಧ ವಿಮೋಚನೆಯನ್ನು ಸಾಧ್ಯಗೊಳಿಸಲು ಕ್ರಾಂತಿಕಾರಕ ಶಕ್ತಿಗಳಿಗೆ ದೊರೆತ ಅಪೂರ್ವ ಸಂದರ್ಭದ ಬಗ್ಗೆ ಮಾತಾಡಿದುವು: ಜನ ಹೋರಾಡಲು ಸನ್ನದ್ಧರಾಗುತ್ತಿದ್ದ ವದಂತಿ ಮುಟ್ಟಿಸಿದುವು: ವೀರಘೋಷಗಳು, ಬಾಹುಸ್ಫುರಣಗೊಳಿಸುವ ವಿವರ, ಹೋರಾಟಕ್ಕೆ ಕಹಳೆ....
   ಜಾನಕಿಯ ತೋಳತೆಕ್ಕೆಯ ನೆನಪನ್ನು ಬದಿಗೊತ್ತಿ ಒಮ್ಮೆ ಅಪ್ಪು ಹೇಳಿದ:
   "ನಾವು ಸಿದ್ಧರಾಗ್ಬೇಕು ಚಿರುಕಂಡ."
  "ಏನು ಸಿದ್ಧವಾಗೋದು ಅಂದರೆ? ಎಲಿಗಾದರೂ ಪ್ರವಾಸ      ಹೋಗ್ಬೇಕಾಗಿದ್ಯೇನು?"
  "ಯಾಕೆ ಹೋಗಬಾರ್ದು? ಹೋರಾಟವಾಗುವಲ್ಲಿ-" 
  ಆ ಮಾತಿಗೆ ಚಿರುಕಂಡ ಸಿಟ್ಟಾದ "ಅದನ್ನೋದು,ಇದನ್ನೋದು,ಯೋಚನೆ

ಮಾಡು"-ಎಂದು.

  ಚರುಕಂಡ ಪ್ರತಿ ಸಾರೆಯೂ ವಿವರವಾಗಿ ಹೇಳುವುದಿತ್ತು:
  "ಸಾಮ್ರಾಜ್ಯಶಾಹಿ ಆಡಳಿತ ಅನ್ನೋದು ಇಡೀ ದೇಶವನ್ನೇ ಅವರಿಸಿದ 

ವಿಸ್ತಾರವಾದ ಬಲೆಯಿದ್ದ ಹಾಗೆ.ನಮ್ಮ ಊರಿನ ಮೇಲಿರುವ ಭಾಗವನ್ನು ನಾವು ಕತ್ತರಿಸ್ಬೇಕು. ಹಾಗೆಯೆ ಒಂದೂಂದು ಊರಿನವರು ಅವರವರ ಅಂಶಕ್ಕೆ ಕತ್ತರಿ ಹಾಕ್ಬೇಕು. ಆದರೆ ಇದೆಲ್ಲ ಒಂದೇ ಕಾಲದಲ್ಲಿ ಆಗೋದು ಅಗತ್ಯ. ಇಲ್ಲದೆ ಹೋದರೆ ಹರಿದ ಭಾಗವನ್ನು ದುರಸ್ತಿ ಮಾಡೋದಕ್ಕೆ ಸಾಮ್ರಾಜ್ಯಶಾಹಿಗೆ ಸಮಯ ಸಿಗ್ತದೆ. ಸ್ಪಷ್ಟವಾಯ್ತೆ?"