ಪುಟ:Chirasmarane-Niranjana.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ "ಅದಿದ್ದೇ ಇದೆ ಅನ್ನಿ. ಆದರೂ ಬೆಳಿಗ್ಗೆ ಮತ್ತೊಮ್ಮೆ ಡಂಗುರ ಹೊಡಿಸ್ಬೇಕು. ಜನರಿಗೆ ಅರ್ಥವಾಗೇ ಇಲ್ಲಾಂತ ಕಾಣ್ತದೆ." ಅರ್ಥವಾಗಿತ್ತು. ಅಷ್ಟೇ ಅಲ್ಲ, ಸಂಘದ ಕಛೇರಿಯಲ್ಲಿ ಅ ಸಂಬಂಧವಾಗಿ ದೊಡ್ಡ ಗೊಂದಲವೇ ಆಯಿತು. ಉದ್ಯೋಗದ ಪ್ರಶ್ನೆ. ಹಳ್ಳಿಯಲ್ಲಿ ಕೆಲವರು ಸೈನ್ಯ ಸೇರುವ ಮಾತನ್ನಾಡಿಯೇ ಆಡಿದರು. ಅವರಿಗೂ ಉಳಿದವರಿಗೂ ಜಗಳವಾಯಿತು. ತೀರ್ಪಿಗೋಸ್ಕರ ಜಗಳ ಸಂಘದ ಮುಖಂಡರಲ್ಲಿಗೆ ಬಂತು. ಸೈನ್ಯ ಸೇರುವೆವೆ೦ದಿದ್ದ ಅಷ್ಟು ಜನಕ್ಕೂ ಸಾಕಷ್ಟು ಹೊಲವಿರಲಿಲ್ಲ. ಉದ್ಯೋಗವಿರಲಿಲ್ಲ: ಸಾಕಲು ದೊಡ್ಡ ಸಂಸಾರಗಳಿದ್ದುವು. ಅಪ್ಪುವಿನೊಡನೆ ಚಿರುಕಂಡ ಈ ಸಮಸ್ಯೆಯನ್ನು ಕುರಿತು ದೀರ್ಘಸಮಾಲೋಚನೆ ನಡೆಸಿದ. ಅದರ ಫಲವಾಗಿ ಅವರು, ಸರಿಯೆಂದೇ ತಾವು ಭಾವಿಸಿದ ತೀರ್ಮಾನಕ್ಕೆ ಬಂದರು. ಚಿರುಕಂಡ ಅವರನ್ನೆಲ್ಲ ಕೇಳಿದ:

"ನೀವು ಯಾವತ್ತಾದರೂ ಸಂಘಕ್ಕಾಗಲೀ ದೇಶಕ್ಕಾಗಲೀ ದ್ರೋಹ ಮಾಡ್ತೀರಾ?"
"ಇಲ್ಲ". ಎಂದೂ "ಖಂಡಿತ ಇಲ್ಲ" ಎಂದೂ "ಎಂದಿಗೂ ಇಲ್ಲ" ಎಂದೂ ಒಬ್ಬೂಬ್ಬರು ಒಂದೊಂದು ರೀತಿಯಾಗಿ ಅಂದರು.

"ಕ್ಕೆಯಲ್ಲಿ ಬಂದೂಕು ಹಿಡಿದಾಗಲೂ ಈ ವಾಗ್ವಾನ ನೆನಪಿಡ್ತೀರಾ?"

"ಖಂಡಿತವಾಗಿಯೂ ಇಡ್ತೇವೆ." 

"ಸರಿ ಹಾಗಾದರೆ. ನೇಗಿಲು ಹಿಡಿಯೋ ಕೈ ಬಂದೂಕು ಎತ್ತೋದಕ್ಕೂ ಕಲಿತ ಹಾಗಾಗ್ತದೆ. ವಾಪಸು ಬಂದಾಗ ನೀವು ನಮಗೆ ಮುಖ ತೋರಿಸ್ಬೇಕಾಗ್ತದೆ ಅನ್ನೋದು ನೆನಪಿರ್ಲಿ." ತೀವ್ರ ಭಿನ್ನಾಭಿಪ್ರಾಯದಿಂದ ವಾತಾವರಣ ಕಲುಷಿತವಾಗುವಂಥ ಸನ್ನಿವೇಶ ಸುಲಭವಾಗಿ ಸಮಾಧಾನದೆಲ್ಲೇ ಪರ್ಮವಸಾನೆ ಹೊಂದಿತು.

ಮಾರನೆಯ ಬೆಳಗ್ಗೆ ಮತ್ತೊಂದು ಡಂಗೂರದೊಡನೆ ಆರು ಜನ ಸೈನ್ಯದಲ್ಲಿ ಭರ್ತಿಯಾಗಲೆಂದು ಅಧಿಕಾರಿಗಳ ಮುಂದೆ ನಿಂತರು. ಇಬ್ಬರು ಜಮೀನ್ದಾರರ ಚಾಕರರಲ್ಲಿ ನಾಲ್ವರು ಅವರ ಜತೆ ಸೇರಿದರು.

" ಕಯ್ಯೂರು ಪರವಾಗಿಲ್ಲ ಮೆಸ್ಟರ್ ನಂಬಿಯಾರ್" ಎಂದರು ಅಧಿಕಾರಿ. ......................

 ಕಯ್ಯೂರು ನಿಜವಾಗಿಯೂ 'ಪರವಾಗಿರಾಲಿಲ್ಲ'. ಅಪೂವರ್ವವಾದ ರಾಜೀಕಿಯ ಜಾಗೃತಿಯಿಂದ ಗ್ರಾಮ ಹೊಸ ರೂಪು ತಳೆಯಿತು. ಸಂಘದವರು ರೈತ