ಪುಟ:Chirasmarane-Niranjana.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಚಿರಸ್ಮರಣೆ ದಿನಾಚರಣೆಯನ್ನು ಆ ವರ್ಷ ವಿಜೃಂಭಣೆಯಿಂದ ಆಚರಿಸಿದರು. ಆ ದಿನ ಗುಡಿಸಲುಗಳು ಬರಿದಾದುವು. ಹೆಂಗಸರು ಮಕ್ಕಳು, ಮದುಕರಾದಿಯಾಗಿ ಎಲ್ಲರೂ ಮೆರವಣಿಗೆ ಸೇರಿದರು. ಎದುರಿಗೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಎತ್ತರದ ಬಾವುಟ ಹಿಡಿದು, ಹಳ್ಳಿಯ ಮೂಲೆ ಮೂಲೆಯಲ್ಲೂ ಅವರು ಸುತ್ತಾಡಿದರು. ಬಹಿರಂಗ ಸಭೆಯಲ್ಲಿ, ಹೊರಗಿನಿಂದ ಬಂದ ನಾಯಕರೊಬ್ಬರು ಭಾಷಣವಿತ್ತರು.

  ಹುಡುಗರಿಲ್ಲದ ಬರಿಯ ಶಾಲೆಯ ಹಿತ್ತಿಲಲ್ಲಿ,ಎತ್ತರವಾಗಿ ಬೆಳೆದ ಮಾವಿನ

ಗಿಡಗಳ ಬಳಿ ನಿಂತು, ಆ ಹಾದಿಯಾಗಿ ಬರುತ್ತಿದ್ದ ಮೆರವಣಿಗೆಯನ್ನು ಉಪಾಧ್ಯಾಯರು ನೋಡಿದರು. ಬಾವುಟ ಹಿಡಿದು ಹಾಡುತ್ತಿದ್ದವನನ್ನು ತಾನೆಲ್ಲಿಯೋ ಕಂಡಿದ್ದಂತೆ ಉಪಾಧ್ಯಾಯರಿಗನ್ನಿಸಿತು.ಆತನೆ!"ನಿಮ್ಮ ಮಕ್ಕಳ

ಮೊಮ್ಮಕ್ಕಳು ಯಾವಾಗ ಬರ್ತರೆ?"ಎಂದು ಕೇಳಿದ್ದ ಖದೀಮ!"ಆಹಾ!"ಎಂದು ಉಪಾಧ್ಯಾಯರು ಉದ್ಗಾರವೆತ್ತಿದರು. ಮುಖ ಕಪ್ಪಿಟ್ಟು ಕಂಕುಳ ಕೆಳಗೆ 

ಬೆವರೊಡೆದರೂ, ಹಾಡುತ್ತಿದ್ದ ಕಣ್ಣನನ್ನು ಅವರು ಕುತೂಹಲದಿಂದ ನೋಡಿದರು.

  ಘೋಷಗಳು ಬಾರಿಬಾರಿಗೂ ಬೆಟ್ಟ ತಪ್ಪಲುಗಳಲ್ಲಿ ಪ್ರತಿಧ್ವನಿಸಿದುವು: 
 "ಭೂಮಿ ಯಾರದು?"- 
 "ರೈತರದು."
 "ಉಳುವವನೇ-"
 "ಹೊಲದೋಡೆಯ!"
 "ಹಳೆಯ ಸಾಲ-"
 "ಮನ್ನಾ ಮಾಡಿ!"
 "ಜಮೀನ್ದಾರಿ ಪದ್ಧತಿ-"
 "ಅಳಿಸಿ ಹೋಗಲಿ!"
 "ಸಾಮ್ರಾಜ್ಯಶಾಹಿ-"
 "ನಾಶವಾಗಲಿ!"
  ಜಮೀನಾರರಿಬ್ಬರೂ ತಮ್ಮ ಮನೆಯಿಂದ ಹೊರಬರಲಿಲ್ಲ. ಆದರೂ

ಘೋಷಣೆಗಳು ಅವರಿಗೆ ಸ್ಪಷ್ಟವಾಗಿ ಕೇಳಿಸಿದುವು.

  ....................
  ಆ ಸಂದರ್ಭದಲ್ಲಿ ಕಯ್ಯೂರಿಗೊಬ್ಬ ಯುವಕ ಬಂದ. "ಯಾವಾಗ ಬಂದೆಯೋ ಅಬೂಬಕರ್?" ಎಂದು ಗುರುತುಹಿಡಿದು ಎಲ್ಲರೂ ಅವನನ್ನು ಕೇಳುವವರೇ.