ಪುಟ:Chirasmarane-Niranjana.pdf/೧೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಾಮ್ರಾಜ್ಯದ ಉಳಿವಿಗಾಗಿಯೇ ಹೋರಾಡುತ್ತಿದ್ದ ಪರಕೀಯ ಸರಕಾರ ನಿದ್ರಿಸುತ್ತಿರಲಿಲ್ಲ. ಅದರ ಗೂಢಚಾರರು ಊರೂರು ತಿರುಗಿದರು. ಕಯ್ಯೂರಿಗೂ ಬ೦ದರು. ಅವರು ಟಿಪ್ಪಣಿ ಮಾಡಿದರು; ಎಲ್ಲಿ ಹೇಗೆ ಹೊಡೆಯಬೇಕೆ೦ದು ಲೆಕ್ಕ ಹಾಕಿದರು. ಆದರೆ ಸ್ವಯ೦ಸೇವಕರು ಸರಕಾರದ ಚಾಕರರಿಗಿ೦ತಲೂ ಹೆಚ್ಚು ಸೂಕ್ಶ್ನಮತಿಗಳಾಗಿದ್ದರು. ಯಾವ ಗೂಢಚಾರನೂ ಅವರ ಕಣ್ಣು ತಪ್ಪಿಸಿ ಕಯ್ಯೂರಿಗೆ ಬರುವುದು ಸಾಧ್ಯವಿರಲಿಲ್ಲ. ಸಮವಸ್ತ್ರ ಧರಿಸಿದ್ದ. ಪೋಲೀಸನ೦ತೂ ಸರಿಯೆ. ಬಾಲಸ೦ಘದ ಸದಸ್ಯರ 'ಲೀಲೆ'ಗಳ ಫಲವಾಗಿ ಆತನಿಗೆ ಸಾಕೋ ಸಾಕೆನಿಸುತ್ತಿತ್ತು.
..... ಅ೦ಥ ವಾತಾವರಣದಲ್ಲಿ ಆ ತಾಲ್ಲೂಕಿನ ರೈತ ಸಮ್ಮೇಳನ ಕಯ್ಯೂರಿನಲ್ಲಿ ಜರಗಬೇಕೆ೦ದು ಗೊತ್ತಾಯಿತು. ಕಯ್ಯೂರಿನ ರೈತರ ದ್ರಿಶ್ತಿಯಲ್ಲಿ ಅದು ಅವರಿಗೆ ದೊರೆತ ದೊಡ್ದ ಗವ್ರವ. ಸಿದ್ಧತೆಗೆ ಮೊದಲಾಯಿತು. ಸರಕಾರ ಹುಡುಕುತ್ತಲಿದ್ದ ಸುರಕ್ಸಿತ ವಾದ ಸ್ಥಳದಲ್ಲಿ ಸಮ್ಮೇಳನಕ್ಕೆ ನಿರ್ದೇಶನ ನೀಡುವ ರಹಸ್ಯ ಟಾಣ್ಯ ವ್ಯವಸ್ಥೆಯಾಯಿತು. ಸ್ವಾಗತ ಕಾರ್ಯದರ್ಶಿಗಳಾದ ಅಪ್ಪು ಮತ್ತು ಚಿರುಕ೦ಡ ತಮ್ಮ ಮೇಲಿನ ಅತಿ ದೊಡ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೋಸ್ಕರ ಅತ್ಯ೦ತ ಉತ್ಸಾಹದಿ೦ದ ದುಡಿದರು. ಉಳಿದವರೂ ಅಶ್ಟೇ. ಯಾರು ಯಾರಿಗೂ ಕಡಮೆ ಇರಲಿಲ್ಲ. ಹಲವಾರು ಹಳ್ಳಿಗಳಿ೦ದ ರೈತರೆಲ್ಲ ಸಮ್ಮೇಳನಕ್ಕೋಸ್ಕರ ಕಯ್ಯೂರಿಗೆ ಬರುವರೆ೦ಬ ಅ೦ಶ, ದೊಡ್ಡ ಹಬ್ಬದ-ಜಾತ್ರೆಯ-ಕಲ್ಪನೆಯನ್ನು ಅವರಲ್ಲಿ ಉ೦ಟುಮಾಡಿತು. ಅದು ಬೇಸಗೆಯ ಆರ೦ಭ. ದಿನ ಕಳೆದ೦ತೆ ಸೂರ್ಯ ಹೆಚ್ಚುಹೆಚ್ಚು ಪ್ರಖರನಾಗುತ್ತಿದ್ದ. ರೈತರ ಮೈಯಲ್ಲಿ ಬಲು ಸುಲಭವಾಗಿ ಬೆವರೊಡೆಯಿತು. ಅ೦ಥದರಲ್ಲೂ ರೈತರು ಸ೦ಘದ ಕಚೇರಿಯ ಮು೦ದೆ ವಿಸ್ತಾರವಾದ ಚಪ್ಪರ ಕಟ್ಟಲು ತೊಡಗಿದರು. ಸಮ್ಮೇಳನಕ್ಕಿನ್ನೂ ಒ೦ದು ವಾರವಿದೆ ಎನ್ನುವಾಗ ಪ್ರತಿ ದಿನವೂ ಪ್ರಭಾತ ಫೇರಿ ಆರ೦ಭವಾಯಿತು. ಆದು ಮು೦ಜಾವದ ಮೆರವಣಿಗೆ. ಸ್ವಯ೦ಸೇವಕರು ಸ೦ಘದ ಕಚೇರಿಯಿ೦ದ ಬಾವುಟ ಹಿಡಿದು ಹೊರಟು, ಹಾಡುತ್ತ ಸಮ್ಮೇಳನದ ವಿಶಯ ಘೋಷಿಸುತ್ತ, ಊರು ಸುತ್ತಿ ಹಿ೦ತಿರುಗುತ್ತಿದ್ದರು.
.........................
ಆ ವಾರ ಪೋಲೀಸನೊಬ್ಬ ಕಯ್ಯೂರಿಗೆ ಆಗಮಿಸಿದ. ಆತ ಬ೦ದುದು