ಪುಟ:Chirasmarane-Niranjana.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ತನಗೆ ಅ೦ದಾಗ, ಕಣ್ಣನಿಗೆ ನಾಚಿಕೆಯಾಯ್ತು. "ನೀನು ಮನೆಗೆ ಹೋಲ್ಲೆ ಇಲ್ಲ?" ಇಲ್ಲವೆ೦ದು ಚಿರುಕ೦ಡ ತಲೆಯಾಡಿಸಿದ. "ನನಗೆ ಹೇಳಿದ್ದಿದ್ರೆ ನಾನೂ ಇಲ್ಲೇ ಇರ್ತಾ ಇದ್ದೆ. ಒಬ್ಬನೆ ಇರೋದು ಸರೀನಾ? "ಇಲ್ಲ ಕಣ್ಣ. ಅಪ್ಪು ಕು೦ಇ೦ಬು ಎರಡು ಗ೦ಟೆಗಷ್ತೆ ಹೋದ್ರು." "ಹು೦ ನನಗಿನ್ನು ನಿದ್ದೆ ಬರೋದಿಲ್ಲ, ಏನಾದರೂ ಕೆಲಸ ಕೊಡು." "ನೀನು ಮಾಡೋ ಕೆಲಸ ಈಗೇನೂ ಇಲ್ಲ. ಮಲಗೋದಕ್ಕೆ ಇಷ್ತವಿಲ್ಲವಾದರೆ ಏನಾದರೂ ಪುಸ್ತಕ ತಗೊ೦ಡು ಓದು." ಕಣ್ಣ ಕಪಾಟದತ್ತ ಹೋಗಿ ಒ೦ದು ಪುಸ್ತಕವನ್ನೆತ್ತಿ ತ೦ದ. "ಸಮಾಜದ ವಿಕಾಸ.' ಇನ್ನೊ೦ದು ಕುರ್ಚಿಯನ್ನು ಬೆಳಕುಬೀಳುವ ಕಡೆ ಮೆಲ್ಲನೆ ಒಯ್ದ್ದು, ಅದರ ಮೇಲೆ ಕುಳಿತು, ಪುಸ್ತಕವನ್ನು ಕಣ್ಣ ಓದತೊಡಗಿದೆ. ಒ೦ದು ಪುಟ, ಎರಡು ಪುಟ.... ಹೊರಗಿನಿ೦ದ ಗಾಳಿ ತಣ್ಣನೆ ಬೀಸಿತು. ಕಣ್ಣೆವೆಗಳು ಒ೦ದನ್ನೊ೦ದು ಅಪ್ಪಿ ಕೊ೦ಡವು. ಚಿರುಕ೦ಡ ಇದನ್ನು ನೋಡಿ ನಸುನಕ್ಕು ಸುಮ್ಮನಾದ. ಕಣ್ಣನನ್ನು ಕರೆದು ಎಬ್ಬಿಸಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲಿ ಕಣ್ಣನಿಗೇ ಎಚ್ಚರವಾಗಿ, ತಾನು ನಿದ್ದೆ ಹೋದುದರ ಅರಿವಾಗಿ ತಪ್ಪಿತಸ್ಥನ೦ತೆ ಆತ ಚಿರುಕ೦ಡನತ್ತ ನೋಡಿದ. ಮೆಲ್ಲನೆದ್ದು ಹೇಳಿದ: "ನಾನಿಷ್ತು ಮಲಕೊಳ್ತೇನೆ ಚಿರುಕ೦ಡ. ಅಬೂಬಕರ್ ಬ೦ದ ತಕ್ಸಣ ಎಬ್ಬಿಸ್ಬಿಡು." ಚಿರುಕ೦ಡ ಕಣ್ಣನನ್ನೂ ನೋಡಿ ನಕ್ಕು "ಹೂ೦" ಎ೦ದ. ಕೈಲಿದ್ದ ಪುಸ್ತಕವನ್ನು ಕಣ್ಣ ಚಾಪೆಯ ಮೇಲೆ ಮಲಗಿ ಮೈ ಚಾಚಿದ. ಐದು ಹೊಡೆಯಲು ಸ್ವಲ್ಪ ಹೊತ್ತಿದ್ದಾಗಲೇ ಎಲ್ಲರೂ ಬರತೊಡಗಿದರು. ಆ ಸದ್ದು ಕೇಳಿಯೆ ಕಣ್ಣನಿಗೆ ಎಚ್ಚರವಾಯಿತು. ಬಾಲಸ೦ಘದ ಕುಟ್ಟಿ ಕೃಷ್ಣ್ಣ ಕಣ್ಣನನ್ನು ನೋಡಿ, "ಏನು ಮಾವ? ರಾತ್ರೆ ಇದ್ಯಾ?" ಎ೦ದ. "ಹೂನಪ್ಪ ಮೂರು ಗ೦ಟೆಯವರೆಗೂ ಬರೀತಾನೇ ಇದ್ದೆ. ಇದೇ ಈಗ ಮಲಕೊ೦ಡೆ" ಎ೦ದ ಕಣ್ಣ ನಗುತ್ತ ಮೈಮುರಿಯುತ್ತ. "ನೀನು ಬರೆಯೋದು! ಗೊತ್ತು ಪಾಪ!" ಎ೦ದ ಕುಟ್ಟಿಕೃಷ್ಣ್ಣ. ಚಿರುಕ೦ಡ, ಅಬೂಬಕರ್ ಎಲ್ಲರೂ ನಕ್ಕರು.