ಪುಟ:Chirasmarane-Niranjana.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಚಿರಸ್ಮರಣೆ

ನದಿಯ ದಡದಿಂದ ಕಲುಗಳನ್ನೆತ್ತಿ ಹಲವರು, ಈಸಿ ಹೋಗುತ್ತಿದ್ದ
ಸುಬ್ಬಯ್ಯನತ್ತ ಬೀರಿದರು. ಯಾವುದೋ ಒಂದು ಕಲು ತಾಕಿದಾಗ ಈಸುತ್ತ
ಇದ್ದವನು ತಲೆಕೊಡವಿದ. ದಡದ ಮೇಲಿದ್ದವರು ನಕ್ಕರು. ಸುಬ್ಬಯ್ಯ ಮತ್ತೆ
ಈಸಿದ, ಮತ್ತೆ ಕಲುಗಳು ಆತನೆಡೆಗೆ ಹೋದುವು. 

ಆಗ ಕೇಳಿಸಿತು ಅಬೂಬಕರನ ಸ್ವರ;

"ಹೋಗಲಿ, ಬಿಟ್ಟಬಿಡಿ!"
ಅಷ್ಟರಲ್ಲೆ, ನಂಬಿಯಾರರ ಮನೆಯಿಂದ ಪೋಲೀಸನು ಮೆರವಣಿಗೆಯನ್ನು
ಹಿಂಬಾಲಿಸಿದನೆಂದು ಕೇಳಿ,ಧಾವಿಸಿ ಬಂದ ಅಪ್ಪು ಮತ್ತು ಚಿರುಕಂಡ, ಏದುತ್ತ

ಏದುತ್ತ ಜನ ನೆರೆದಿದ್ದ ಸ್ಥಳಕ್ಕೆ ತಲಪಿದರು. ಏನಾಯಿತೆಂದು ಕೇಳ

ಬೇಕಾದುದಿರಲಿಲ್ಲ. ಕೆಲವರ ಕೈಯಲ್ಲಿ ಕಲುಗಳಿದ್ದುದನ್ನು ಕಂಡು ಚಿರುಕಂಡ
ಎಂದ:
"ಹಾಳಾಗಲಿ, ಕಲ್ಲೆಸೀಬೇಡಿ!"
ಪಂದ್ಯಾಟದ ಪಟುವೆಂದು ಹಿಂದಿನ ದಿನ ಆತ್ಮಸ್ತುತಿ ಮಾಡಿಕೊಂಡಿದ್ದ
ಸುಬ್ಬಯ್ಯನ ಈಸುಗಾರಿಕೆಯ ವಿಷಯದಲ್ಲಿ ಮೂದಲಿಕೆಯ ಮಾತನಾಡುತ್ತ ಜನ
ನಕ್ಕರು.
ಸುಬ್ಬಯ್ಯನಕ್ಕೆ ಸೋತ ಹಾಗೆ ತೋರಿತು. ಅಪ್ಪು ಕಾತರದಿಂದ ಅತ್ತ ನೋಡಿದ.
ಚಿರುಕಂಡನ ಹಣೆ ಯೋಚನೆಯಿಂದ ನೆರಿಗೆ ಕಟ್ಟಿತು.
ಯಾರೋ ಒಬ್ಬನೆಂದ:
"ವಿಶ್ರಾಂತಿ ತಗೊಳ್ತಿದ್ದಾನೆ ಕಣ್ರೋ..."
ಮುಂದೆ ಈಸಲು ಮತ್ತೊಂದು ಯತ್ನ, ಮತ್ತೆ ಸೋಲು. 

"ಏನಪ್ಪ,ಘಾಜದಾರರು ಕಷ್ಟದಲ್ಲಿದ್ದಾರೇಂತ ಕಾಣ್ತದೆ!" ಎಂದು ಒಬ್ಬ ರಾಗವೆಳೆದ....

...ಅಪ್ಪು ಚಿರುಕಂಡ ಊಹಿಸಿದಂತೆಯೇ ಆಯಿತು. ನಡುನೀರಿನಲ್ಲಿ ಸುಬ್ಬಯ್ಯ ಮುಳುಗಿದ, ಕರಿಯ ಚುಕ್ಕೆಯಾಗಿ ಆವರೆಗೂ ತೋರುತ್ತಿದ್ದ ತಲೆ ಕಾಣಿಸದೇ ಹೋಯಿತು.

ಅಲ್ಲಿ ಸೇರಿದ್ದವರೆಲ್ಲ ಮಾತು ನಿಲ್ಲಿಸಿ ಕ್ಷಣಕಾಲ ಮೌನವಾದರು.

"ಪಾಪಿ ಮುಳುಗಿದ!" ಎಂದಿತೊಂದು ಸ್ವರ.
ಅಪು ಮತ್ತು ಚಿರುಕಂಡ ಪರಸ್ಪರ ಮುಖ ನೋಡಿದರು. ಇಬ್ಬರ ದೃಷ್ಟಿಯೂ 

ಪ್ರಶಾರ್ಥಕ ಚಿಹ್ನೆಯಾಗಿ ನದಿಯನ್ನು ನೋಡಿತು. ಅಲ್ಲಿ ಅದುದೇನು? ಆತ