ಪುಟ:Chirasmarane-Niranjana.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೦೧

ಈಸಲಾರದೆ ಸತ್ತನೆ?ಅಥವಾ ಸುಳಿಗೆ ಸಿಲುಕಿದನೆ?ಇಲ್ಲವೆ ಮೊಸಳೆ ಆತನ ಕಾಲು ಹಿಡಿದೆಳೆಯಿತೆ?ಏನಾಯಿತು? ಎಷ್ಟು ನೋಡಿದರೂ,ಒಂದು ಜೀವ ಅಲ್ಲಿ ಮುಳುಗಿ ಸತ್ತಿ ತೆಂಬುದಕ್ಕೆ ಯಾವ ಸಾಕ್ಷ್ಯವೂ ಇರಲಿಲ್ಲ.ಎಂದಿನಂತೆಯೇ ಹರಿಯುತ್ತಿತ್ತು ತೇಜಸ್ವಿನಿ. ದೀರ್ಘವಾಗಿ ಉಸಿರುಬಿಟ್ಟು ಚಿರುಕಂಡನೆಂದ: "ಸ್ವಯಂಸೇವಕರ ಮೆರವಣಿಗೆ ನೇರವಾಗಿ ಸಂಘದ ಕಛೇರಿಗೆ ಹೋಗಲಿ ಉಳಿದವರೆಲ್ಲ ಅವರವರ ಕೆಲಸಕ್ಕೆ ಹೋಗಿ." ಆ ಧ್ವನಿ ಭಾರವಾಗಿತ್ತು. ಕೋರ ಬಂದ ಹಾದಿಯಲ್ಲೆ ಹೊರಟ.ಪೋಲೀಸನ ಕೆಂಪು ಟೋಪಿ ಬಿದ್ದಲ್ಲೆ ಇತ್ತು.ತನ್ನ ಕೈಲಿದ್ದ ಕೋಲಿನಿಂದ ಕೋರ ಅದನ್ನು ಬದಿಗೆ ಸರಿಸಿ ನದಿಯ ದಂಡೆಯತ್ತ ತಳ್ಳಿದ. ಅಲ್ಲಿಂದ ಟೋಪಿ ನೀರಿಗೆ ಉರುಳಿ ಮುಳುಗಿಹೋಯಿತು.

           ವಿರಾಮ
            ೧

ಪೋಲೀಸನ ಮರಣದ ದುರ್ಘಟನೆ ನಂಬಿಯಾರರ ನಾಭಿಯಲ್ಲಿ ನಡುಕ ಹುಟ್ಟಿಸಿತು.ಆ ಕ್ಷಣವೇ ,ಮನೆ ಹೆಂಗಸರೊಡನೆ ಊರು ಬಿಟ್ಟು ಹೋಗಲು ಅವರು ನಿರ್ಧಾರ ಮಾಡಿದರು.ಆದರೆ ಇದು ಸುಲಭವಲ್ಲ.ಹಾದಿಯಲ್ಲೆ ರೈತರು ತಮ್ಮನ್ನು ತರುಬಬಹುದು,ಎಂಬ ಶಂಕೆ ತಲೆದೋರಿ ಅವರು ವ್ಯಾಕುಲರಾದರು.ಹೀಗಾಗಿ, ಬಂದೂಕನ್ನು ನೆಚ್ಚಿಕೊಂಡು,ದೇವರ ಮೇಲೆ ಭಾರಹಾಕಿ,ಅವರು ಮನೆಯೊಳಗೇ ಕುಳಿತರು.ಯಾವ ಕ್ಷ್ಣಣವೂ ರೈತರು ತಮ್ಮ ಮನೆಯ ಮೇಲೆ ಏರಿಬರಬಹುದೆಂಬುದು ಜಮೀನ್ದಾರರ ಎಣಿಕೆಯಾಗಿತ್ತು.ಆದರೆ,ಮನೆಯ ಮಹಾದ್ವರದಲ್ಲಿ ಕಾವಲು ನಿಂತಿದ್ದ ಕಟ್ಟಾಳುಗಳಿಗೆ ರೈತರ ಸುಳಿವೇ ಕಂಡುಬರಲಿಲ್ಲ.ಅವರ ಎದೆಯೊಳಗೆ ಅವಲಕ್ಕಿ ಕುಟ್ಟುತ್ತಿದ್ದರೂ ಕ್ರಮೇಣ ಭಯ ಮಾಯವಾಗಿ,ನಿಂತು ಬೇಸರವೆನಿಸಿ,ಆಕಳಿಸುವಂತಾಯಿತು. ಮಧ್ಯಾಹ್ನದ ಹೊತ್ತಿಗೆ ಒಬ್ಬ ಬೇಹುಗಾರ ನಂಬಿಯಾರರಿಗೆ ಸುದ್ದಿ ತಂದ. ರೈತರು ರಣೋತ್ಸಾಹ ತೋರದೆ ಸಪ್ಪಗಿರುವರೆಂದು ತಿಳಿಸಿದ.ಕೆಲವರು