ಪುಟ:Chirasmarane-Niranjana.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಚಿರಸ್ಮರಣೆ

ಗುಡಿಸಲುಗಳೊಳಗೇ ಅವಿತಿರುವರೆಂದೂ ಮುಂದೇನಾಗುವುದೋ ಎಂಬ ಭೀತಿ ಹಲವರನ್ನು ಕಾಡುತ್ತಿದೆಯೆಂದೂ ಇಂತಹ ಪರಿಸ್ಥಿತಿಯಲ್ಲಿ ಸಮ್ಮೇಳನ ನಡೆಸಬೇಕೆ ಬೇಡವೆ ಎಂಬ ಚರ್ಚೆಯಾಗುತ್ತಿದೆಯೆಂದೂ ವರದಿ ಮಾಡಿದ.

  ನಂಬಿಯಾರರ ಮುಖ ಅರಳಿತು.ಅವರು ಗೆಲುವು ತೋರಿ ಸ್ವಲ್ಪ ಹೋತ್ತು  ಓಡಾಡಿದರು. ಬಳಿಕ ಕುಳಿತು, ಪರಿಸ್ಥಿತಿಯ ಭೀಕರತೆಯನ್ನು ಮನಗಾಣಿಸುವ ದೀರ್ಘಪತ್ರವನ್ನು ಬರೆದರು. ಮಲೆಯಾಳಿ ಭಾಷೆಯಲ್ಲಿ ಮಾತ್ರ ಸಾಲದೆಂದು     ತಮ್ಮ ಹರಕು ಮುರುಕು ಇಂಗ್ಲಿಷಿನಲ್ಲೂ ಇನ್ನೊಂದು ಒಕ್ಕಣೆ ಸಿದ್ಧಗೊಳಿಸಿದರು.      ಆ ಲಕೋಟೆಯೊಡನೆ ನಂಬಿಕೆಯ ದೂತರನ್ನು ಗುಪ್ತವಾಗಿ ಹೊಸದುರ್ಗಕ್ಕೆ ಅಟ್ಟಿದುದಾಯಿತು. ಇನ್ನೊಬ್ಬ ನೀಲೇಶ್ವರಕ್ಕೆ ಹೋಗಿ ಕಯ್ಯೂರಿನ ರೈತರು ಸಶಸ್ತ್ರ ಬಂಡಾಯವೆದ್ದು ಪೋಲೀಸನನ್ನು ಕೊಲೆಮಾಡಿದ ವಾರ್ತೆಯನ್ನು ತಂತಿ    ಮೂಲಕವಾಗಿ ಮದರಾಸು ಸರಕಾರಕ್ಕೂ ಮಂಗಳೂರಿನ ಜಿಲ್ಲಾಧಿಕಾರಿಗೂ ತಿಳಿಸುವ ಏರ್ಪಾಟನ್ನು ನಂಬಿಯಾರರು ಮಾಡಿದರು. 
  ಇಷ್ಟು ಮಾಡಿ ಅವರು ತೃಪ್ತಿಯ ನಿಟ್ಟುಸಿರು ಬಿಟ್ಟು ಕಾನೂನು-ನೆಮ್ಮದಿಯ  

ರಕ್ಷಕರ ಆಗಮನವನ್ನು ಇದಿರು ನೋಡಿದರು. ಆದರೂ ಕತ್ತಲಾದಂತೆ, ಅವರಿಗೆ ಭಯವಾಯಿತು. ಎಚ್ಚರವಿರಲು ಆಳುಗಳಿಗೆ ಹೇಳಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಅಗಣಿ ಹಾಕಿದರು. ನಂಬೂದಿರಿ ನೀಲೇಶ್ವರದಲ್ಲಿ ಸುಖವಾಗಿ ಇರುವನೆಂಬ ವಿಷಯ ಅವರನ್ನು ಆಗಾಗ್ಗೆ ಕುಟುಕಿತು. "ಖದೀಮ! ಹೀಗಾಗ್ತದೇಂತ ಅವನಿಗೆ ಮೊದಲೇ ಗೋತ್ತಿತ್ತೋ ಏನೋ"ಎಂದು ಜರೆದು ಬಯ್ದರು

  .................... 
   ರೈತ ಸಂಘದ ಕಚೇರಿಯಲ್ಲಿ ಜನಸಂದಣಿ ನೆರೆಯಿತು. ಕೆಲವರು ಭೀತರಾಗಿ          ಅತ್ತಸುಳಿಯಲಿಲ್ಲ , ನಿಜ. ಆದರೆ  ಹೆಚ್ಚಿನವರೆಲ್ಲ ಬರುತ್ತಲಿದ್ದರು.

ಹೋಗುತ್ತಲಿದ್ದರು. ಆದರೆ ಮಾತನಾಡುತ್ತಿದ್ದವರು ಕಡಮೆ. ಎಲ್ಲರ ಮುಖಗಳ ಮೇಲೂ ಪ್ರಶ್ನಾರ್ಥಕ ಚಿಹ್ನೆಯಿತ್ತು : 'ಏನು? ಇನ್ನೇನು ? ಮುಂದೇನು?'

   ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲಿ ಸಂಘದ ಕಾರ್ಯಸಮಿತಿಯ ಅವಸರದ     ಸಭೆ ಸೇರಿತು. ಅರ್ಧ ಗಂಟೆಯೊಳಗೇ ಪ್ರಕಟಣೆಯೊಂದು ಸಿದ್ಧವಾಯಿತು. ಎಲ್ಲರೂ ಓದಲು ಅನುಕೂಲವಾಗುವಂತೆ ಅಗಲದ ಹಾಳೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಚಿರುಕಂಡ ಅದನ್ನು ಬರೆದ. ಹಾಳೆಯನ್ನು ಬಿದಿರಿನ ತಡಿಕೆಗೆ ಅಂಟಿಸಿ, ತಡಿಕೆಯನ್ನು ಸಂಘದ ಕಚೇರಿಯ ಮುಂದುಗಡೆ ತೂಗಹಾಕಿದರು. ಪ್ರಕಟಣೆಯಲ್ಲಿ ಹೀಗಿತ್ತು: 
  'ಇವತ್ತು ಬೆಳಗ್ಗಿನ' ಘಟನೆಯನ್ನು ಸಂಘದ ಕಾರ್ಯಸಮಿತಿಯು ವಿವರವಾಗಿ