ಪುಟ:Chirasmarane-Niranjana.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೦೩

ಪರಿಶೀಲಿಸಿ ಮಾಡಿರುವ ಠರಾವು ಏನೆಂದರೆ---

  "ಪೋಲೀಸನ ಮರಣಕ್ಕೆ ಕಯ್ಯೂರಿನ ರೈತರು ಯಾವ ರೀತಿಯಲ್ಲೂ ಹೊಣೆಗಾರರಲ್ಲ. ನದಿಗೆ ಹಾರದೆ ಇರುತ್ತಿದ್ದರೆ ಆತನಿಗೆ ಏನೂ ಆಗುತ್ತಿರಲಿಲ್ಲ.  ನದಿಯಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಅವನು ಸತ್ತುಹೋದ. ಆದುದರಿಂದ ಯಾರು    ಯಾವ ಯೋಚನೆಯನ್ನು ಮಾಡದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಬೇಕು. ಸಮ್ಮೇಳನದ ಸಿದ್ಧತೆಯ ಅಂಗವಾಗಿ ಎಂದಿನಂತೆ ನಾಳೆ ಪ್ರಾತಃಕಾಲವೂ ಮೆರವಣಿಗೆ ಜರಗುವುದು. ಸ್ವಯಂ ಸೇವಕರಷ್ಟೇ ಅಲ್ಲದೆ ಎಲ್ಲ ರೈತ ಬಾಂಧವರೂ ಆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಸಂಘ ಕರೆಕೊಡುತ್ತದೆ. 
  ನ್ಯಾಯಕ್ಕೆ ಜಯವಾಗಲಿ ! 
  ಇಂಕ್ಟಿಲಾಬ್ ಜಿಂದಾಬಾದ್ !" 
  ಪ್ರಕಟಣೆಯ ಮುಂದೆ ರೈತರು ಗುಂಪು ಕೂಡಿದರು. ಕೆಲವರು ಪುನಃ ಪುನಃ ಅದನ್ನೋದಿದರು. ಅದು ಎಲ್ಲ ಸಂದೇಹಗಳನ್ನೂ ದೂರ ಮಾಡುವ ಸ್ಪಷ್ಟೀಕರಣವಾಯಿತು; ಸಮಾಧಾನಕ್ಕೆ ಕಾರಣವಾಯಿತು.
  ಆದರೆ ಇಷ್ಟನ್ನೂ ಮಾಡಿ ಸಂಘದ ಪ್ರಮುಖರು ಸುಮ್ಮನಿರುವಂತಿರಲಿಲ್ಲ.     ಸಶಸ್ತ್ರ ಪೋಲೀಸರ ಪಡೆ ಬಂದೇಬರುವುದೆಂದು ಅವರು ತರ್ಕಿಸಿದರು. 
  "ಅಧಿಕಾರಿಗಳಿಗೆ ಸುದ್ದಿ ಮುಟ್ಟೋದಕ್ಕೆ ಎಷ್ಟು ಹೊತ್ತು ಬೇಕು?" ಎಂದ 

ಅಬೂಬಕರ್.

   ವಿವಿಧ ಅಭಿಪ್ರಾಯಗಳು ಬಂದವು:
   "ಇಷ್ಟರಲ್ಲೇ ಜಮೀನ್ದಾರ ಯಾರನ್ನಾದರೂ ಕಳಿಸಿದನೋ ಏನೋ?" 
   "ಹಾದೀಲಿ ದೂತರನ್ನು ತಡೆಯಬಹುದಾಗಿತ್ತು."
   ಎಲ್ಲವನ್ನೂ ಯೋಚಿಸಿ ಚಿರುಕಂಡ ಹೇಳಿದ: 
   "ಅದರಿಂದ ಅಷ್ಟೇನೂ ಪ್ರಯೋಜನವಿಲ್ಲ. ಬೆಳಿಗ್ಗೆ ತರಕಾರಿ ತಗೊಂಡು ನೀಲೇಶ್ವರದ ಪೇಟೆಗೆ ಹೋದವರ ಮೂಲಕ ಈಗಾಗಲೇ ಸುದ್ದಿ ಹಬ್ಬಿರ್ತದೆ. 

ಅದನ್ನು ತಡೆಯೋದು ಸಾಧ್ಯವಿಲ್ಲ. ಈಗ ವಿಪತ್ತನ್ನು ಧೈರ್ಯದಿಂದ ಇದಿರಿಸ್ಬೇಕು. ರಿಸರ್ವ್ ಪೋಲೀಸು ಪಡೆ ಬಂದೇಬರ್ತದೇಂತ ಊಹಿಸ್ಕೊಂಡೆ ಚರ್ಚೆ ನಡೆಸೋಣ."

   "ನಾವೆಲ್ಲ  ಭೂಗತರಾಗ್ಬೇಕು. ಯಾರೂ ಸಿಗಬಾರ್ದು" ಎಂದ ಅಪ್ಪು. ಆ      ಧ್ವನಿಯಲ್ಲಿ ಉದ್ವೇಗ ತುಂಬಿತ್ತು. 
   ಆ ಮಾತು ಕೇಳಿ ಒಂದು ನಿಮಿಷ ಯಾರೂ ಏನನ್ನೂ ಹೇಳಲಿಲ್ಲ. ಆ ಬಗೆಗೆ ಚಿರುಕಂಡನ ಅಭಿಪ್ರಾಯವೇನೆಂದು ತಿಳಿಯಲು ಅವರು ತವಕಗೊಂಡರು.