ಪುಟ:Chirasmarane-Niranjana.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಒರಟು ಮನುಷ್ಯ ಕುಶಲಮತಿ ಎಂದು ಸಾಮಾನ್ಯರ ದೃಷ್ಟಿಗೇನೂ ತೋರುತ್ತಿರಲಿಲ್ಲ.ಆದರೆ ವಾಸ್ತವವಾಗಿ ಆತನಿಗೆ ಎಂಥ ಚಾಣಾಕ್ಷ ಬೇಟೆಗಾರನನ್ನೂ ನಾಚಿಸುವ ಸಾಮರ್ಥ್ಯವಿತ್ತು.

ಎಲ್ಲರಿಗೂ ಕೇಳಿಸುವಂತೆ ಆತ ಸಾರಿ ಹೇಳಿದ:
"ನಮಗೆ ಬೇಕಾಗಿರೋದು ಮುಖಂಡರು ಮಾತ್ರ.ಬೇರೆ ಯಾರಿಗೂ ನಾವು ತೊಂದರೆ ಕೊಡೋದಿಲ್ಲ."
ನಂಬಿಯಾರರು ಎಂದೋ ಸಿದ್ಧಗೊಳಿಸಿದ್ದ ಮುಖಂಡರ ಪಟ್ಟಿ ಆತನ ಕೈಯಲ್ಲಿತ್ತು.
"ಕಾರ್ಯದರ್ಶಿ ಕೋಯಿತಟ್ಟನ ಚಿರುಕಂಡ-"
ಆತನ ಎರಡೂ ಕೈಗಳನ್ನು ಹಿಂಬದಿಗೆ ಬಿಗಿದು ಬೇಡಿ ಹಾಕಿದರು.
"ಮಠದ ಅಪ್ಪು-"
ಅವನಿರಲಿಲ್ಲ.
"ಎರಡು ಬಿಗಿಯಿರಿ ಅವನಪ್ಪನಿಗೆ.ಸರಿ,ಹಾಗೆ! ಅವನನ್ನೇ ಬಂಧಿಸಿ! ಈ
ಮನೆಗೆ ಕಾವಲು ನಿಲ್ಲಿ!"
ಮತ್ತೊಂದು ಹೆಸರು:
"ಪೊಡವರ ಕುಂಞಂಬು-ಓಹೋ!ಸಂಘ ಕಟ್ಟೋಕೆ ಜಾಗ ದಾನ ಮಾಡಿದ ದೊಡ್ಡ ಮನುಷ್ಯ!ಅರೆಸ್ಟ್!"
ಮುಂದೆ ಬೂಬಮ್ಮನ ಮನೆಗೆ ಸಂದರ್ಶನ.ಅಬೂಬಕರನಿಲ್ಲ."ಕಲ್ಲಿಕೋಟೆಗೆ ಹೋದನಂತೆ."
ಕಳ್ಳ ಸೂಳೇಮಗ!ಈ ಮುದುಕಿಗೂ ಹ್ಯಾಗೆ ಹೇಳಿಕೊಟ್ಟಿದ್ದಾನೆ! ಒಳಗೆ ಹುಡುಕಿ ಯಾರು ಆ ಹುಡುಗ? ತಮ್ಮನೇನು? ಬೀಳಲಿ ಹಾಗೆ! ಬಿಚ್ಚೋ ಬಾಯಿ-ಸುವ್ವರ್ ಕೆ ಬಚ್ಚಾ!"
ಅಲ್ಲಿಂದ ಮನೆ ಮನೆಗೆ.
"ಹಾಡುವ ಕಣ್ಣ!ಆಹಾ!ಸಂಗೀತಗಾರ!ಬಯನೆಟಿನಿಂದ ತಿವೀರಿ ಮುಕುಳಿಗೆ.ಆವನ ಗಂಟಲು ಸ್ವರ ಸ್ವಲ್ಪ ಕೇಳೋಣ!"
ಅಸಹಾಯನಾದ ನಿರ್ಜೀವ ವ್ಯಕ್ತಿ ತಾನು ಎನ್ನುವಂತೆ ಕೋರ,ಗಾಜಿನಂತಹ ಕಣ್ಣುಗಳಿಂದ ತೆಳ್ಳನೆಯ ನೋಟ ಬೀರುತ್ತ ನಿಶ್ಚಲನಾಗಿ ನಿಂತಿದ್ದ.ಅವನೇ ಕೋರನೆಂದು ನಂಬಿಯಾರರ ಬಂಟನೊಬ್ಬ ಬೊಟ್ಟುಮಾಡಿದ.
"ಇವನೇ ಕೋರ! ಬಾಡಿಗಾರ್ಡ್! ರಾಮನ ಬಂಟ ಹನುಮಂತ! ಲಗಾವ್ ಇಸ್ಕೊ!"