ಪುಟ:Chirasmarane-Niranjana.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಮೇಲೆಯೂ ಕೃಷ್ಣನ್ ನಾಯರ್ ಮತ್ತಿತರ ಒಬ್ಬಿಬ್ಬರ ಬಂಧನ.

ದಸ್ತಗಿರಿಯಾದವರನ್ನೆಲ್ಲ ಸಂಘದ ಕಚೇರಿಗೆ ನಡೆಸಿಕೊಂಡು ಬಂದರು.ತರಕಾರಿ ಹೊತ್ತು ನೀಲೇಶ್ವರಕ್ಕೆ ಹೊರಟಿದ್ದ ಹೆಂಗಸರು,ನದಿ ದಾಟಲು ಪೋಲೀಸರ ಸಮ್ಮತಿ ದೊರೆಯದೆ,ಹಿಂತಿರುಗಿದರು.ಓಡಿಹೋಗಬೇಕೆನಿಸಿತ್ತು ಹಲವು ರೈತರಿಗೆ.ಅವರಿಗೆ ಭಯವಾಗಿತ್ತು.ಆದರೆ ಹಾದಿಗಳಲ್ಲೆಲ್ಲ ಪೋಲಿಸರು ಕಾವಲಿದ್ದುದನ್ನು ಕಂಡು ಅವರು ಹತಾಶರಾದರು.ಕ್ರಮೇಣ ಮುಖಂಡರನ್ನು ಮಾತ್ರ ಬಂಧಿಸಿದರೆಂಬುದು ತಿಳಿದು,'ಬದುಕಿದೆವು!' ಎಂದು ಅವರು ಸ್ವಲ್ಪ ಸಡಿಲವಾಗಿ ಉಸಿರುಬಿಟ್ಟರು.
ಪೋಲೀಸನೊಬ್ಬ ಸಂಘದ ಕಚೇರಿಯ ಛಾವಣಿಯನ್ನೇರಿ ಧ್ವಜಸ್ತಂಭವನ್ನು ಮುರಿದ.ಬಾವುಟ ಜೋಲಾಡುತ್ತ ಕೆಳಕ್ಕೆ ಬಂದು ಬಂಧಿತರ ಗುಂಪಿನ ಬಳಿಯಲ್ಲೇ ಮುರಿದು ಬಿತ್ತು.ಇನ್ನೊಬ್ಬ ಪೋಲೀಸ ಅದನ್ನೆತ್ತಿ ಮುದ್ದೆಯಾಗಿ ಮಾಡಿ ಅಧಿಕಾರಿಯ ಬಳಿಗೆ ಒಯ್ದು.
"ಕತ್ತೆ! ನನಗ್ಯಾಕೆ ಕೊಡ್ತೀಯಾ ಅದನ್ನು? ಕಟ್ಟಿ ನೆಲದ ಮೇಲಿಡು!" ಎಂದು ಅಧಿಕಾರಿ ಗದರಿಸಿದ.
ಬಂಧಿತರನ್ನು ಮನಸ್ವೀಬಯ್ದು ಹೀನಾಯವಾಗಿ ಅವಮಾನಿಸಿದುದಾಯಿತು.ಆದರೆ, ಚಿರುಕಂಡನ ಮೊದಲ್ಗೊಂಡು ಒಬ್ಬರೂ ತುಟಿಪಿಟ್ಟೆನ್ನಲಿಲ್ಲ.ಕಚೇರಿಯ ಮುಂದೆ ತೂಗುಹಾಕಿದ್ದ ಪ್ರಕಟಣೆಯನ್ನು ಅಧಿಕಾರಿ ಓದಿದ:
"ಪೋಲೀಸನ ಮರಣಕ್ಕೆ ಕಯ್ಯೂರಿನ ರೈತರು ಯಾವ ರೀತಿಯಲ್ಲೂ ಹೊಣೆಗಾರರಲ್ಲ.....ಆಹಾ!.....ನಾಳೆ ಪ್ರಾತಃಕಾಲವೂ ಮೆರವಣಿಗೆ ಜರಗುವುದು.....ಓಹೋ! ಧಾರಾಳವಾಗಿ!"
ಗದ್ದುಗೆಯನ್ನು ಮರಳಿ ಪಡೆದ ಅರಸುಕುಮಾರನ ಹಾಗೆ ನಂಬಿಯಾರರು ಅತ್ತಬಂದು, ಅಧಿಕಾರಿಯ ಎದುರು ವಿನಯದಿಂದ ತಮ್ಮ ಇಂಗ್ಲೀಷಿನಲ್ಲಿ "ಮನೆಕಡೆ ಹೋಗೋಣ.ವಿಶ್ರಾಂತಿ ತಗೊಳ್ಳಿ..."ಎಂದು ಹೇಳಿದರು.
ಅಧಿಕಾರಿ ನಂಬಿಯಾರರನ್ನು ನೋಡಿದ,ಕೈದಿಗಳನ್ನೂ ನೋಡಿದ.ತನ್ನ ಪೋಲೀಸರನ್ನೂ ನೋಡಿದ.
"ವಿಶ್ರಾಂತಿ ತಗೊಳ್ಳೋಣ.ಇಷ್ಟು ಮಾಡಿದ ಮೇಲೆ ವಿಶ್ರಾಂತಿ ಬೇಡವೆ? ಆದರೆ ಮೊದಲು ಇವರ ಮೆರವಣಿಗೆ ಹೊರಡಿಸ್ಬೇಕು!"
ಕೈದಿಗಳನ್ನು ಚರ್ವತ್ತೂರಿಗೊಯ್ದು ಅಲ್ಲಿಂದ ಹೊಸದುರ್ಗಕ್ಕೆ ಸಾಗಿಸಬೇಕೆಂದು ಆತನ ಆಜ್ಞೆಯಾಯಿತು.ಎಂಟು ಜನ ಕೈದಿಗಳನ್ನು ಈಗ ಬೇರೆ ರೀತಿಯಲ್ಲಿ ಒಬ್ಬರ ಕೈಗೆ ಒಬ್ಬರದನ್ನು ಜೋಡಿಸಿ ಬೇಡಿ ಹಾಕಿದರು."ಹೀಗೆ ಹಾಕಿದರೆ ಏರಿ ಮೇಲೆ