ಪುಟ:Chirasmarane-Niranjana.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨

                                            ಚಿರಸ್ಮರಣೆ
    ಹಿಮ್ಮೇಳ ಸಿದ್ದವಾಗುತ್ತಿದೆ. ನಟರು ರಂಗಭೂಮಿಗೆ ಪ್ರವೇಶ ಮಾಡಿದ್ದಾರೆ. ಅವರಿಗಡ್ಡವಾಗಿ ತೆರೆ....
    ಠಣಂ ಠಣಕ್ ಠಣಂ...
    ನೃತ್ಯವನ್ನು ನೋಡುತ್ತಿರಿ; ಹಾಡಿನ ಅರ್ಥ ನಾನು ಹೇಳುವೆ.
   "ಕಯ್ಯೂರು ವೀರಗಾಥಾ!"
                        ೧

ಪರತಂತ್ರ ಭಾರತದ ಕರಿನಾಡು ಕೇರಳ, ಆ ಭೂಮಿಯಲ್ಲೊಂದು ಕಿರು ಗ್ರಾಮ ಕಯ್ಯೂರು. ಇದು ಹಿಂದಿನ ಕಥೆ; ಎಷ್ಟೋ ವರ್ಷಗಳಿಗೆ ಹಿಂದಿನ ಕಥೆ.

   ಆಗಲೇ ಸೂರ್ಯೋದಯವಾಗಿದೆ ಗಂಡಸರೆಲ್ಲ ನೊಗಗಳನ್ನು ಹೆಗಲಿಗೇರಿಸಿ   ಹೋರಿಗಳನ್ನು ಮುಂದಕ್ಕೆ ನಡೆಸುತ್ತ, ಹೊಲಗಳತ್ತ ಸಾಗಿದ್ದಾರೆ. ಕತ್ತಲೆ ಕರಗಿ   

ಮಬ್ಬು ಬೆಳಕು ಮೆಲ್ಲಮೆಲ್ಲನೆ ಶುಭ್ರವಾಗುತ್ತಿದೆ.

   ಆ ಹಟ್ಟಿಯ ಹೊರಗೊಬ್ಬ ಹದಿನಾಲ್ಕರ ಹುಡುಗ ಬಿದಿರು ತಡಿಕೆಯ     ತೂತಿನೊಳಗಿಂದ ಒಳಗಿಣಿಕಿ ನೋಡುತ್ತ ಪಿಸುದನಿಯಲ್ಲಿ ಕರೆಯುತ್ತಿದ್ದಾನೆ;
    "ಶ್... ಏಯ್...ಶೂ.... ಅಪ್ಪು....."  
     ಒಳಗೆ ತನಗೆ ತಿಳಿದೊಂದೇ ಹಾಡನ್ನು ಅಪ್ಪುವಿನ ತಾಯಿ ಕೋಮಲವೂ              ಅಲ್ಲದ, ಗಡಸೂ ಅಲ್ಲದ,ಗಡಸೂ ಅಲ್ಲದ ಸ್ವರದಲ್ಲಿ ಹಾಡುತ್ತಿದ್ದಾಳೆ; 
     "ಓಮನ ಕಿಡಾವೇ...."                                                                          
     "ಓ ಮುದ್ದು ಕಂದಾ..."
     ಆದರೆ ಆ ಹಾಡಿನ ಆಲಾಪನೆಗೆ ಭಂಗ ತರುವಂತೆ ಆ ಕರೆ :                     
     "ಶ್....ಅಪ್ಪೂ ಏಳೋ.....!"  
     ಆ ತಾಯಿ ತಿರುಗಿ ನೋಡಿದಳು. ಬರೀ ಚಾಪೆಯ ಮೇಲೆ ತೆಳ್ಳಗಿನದೊಂದು      ಕಂಬಳಿ ಹೊದೆದು ಮಲಗಿದ್ದ ಆಕೆಯ ಮಗನಿಗೆ ಆಗಲೇ ಹದಿನೈದು ತುಂಬಿತ್ತು.   ಎಳೆಯ ಕಂದಮ್ಮನಲ್ಲ! ಆದರೂ ಮಲಗಿದ್ದ ಮಗನನ್ನು ಪರಕೀಯರು ಯಾರೋ    ಕರೆದು ನಿದ್ದೆಗೆ ಭಂಗತರುವುದು ತಾಯಿಗೆ ಸಹನೆಯಾಗದು.
    ಹಾಡು ನಿಲ್ಲಿಸಿ, ಧ್ವನಿಯನ್ನು ಗಡುಸುಗೊಳಿಸಿ ತಾಯಿ  ಕೇಳಿದಳು: 
    "ಯಾರೋ ಅದು? ಅಪ್ಪು ಮಲಗಿದ್ದಾನೆ."    
   ಆ ತಾಯಿಯ ಸ್ವರ ಕೇಳಿ ಅಲ್ಲಿಂದ ಓಡಬೇಕೆನಿಸಿತು ಹೊರಗಿದ್ದ ಹುಡುಗನಿಗೆ. ಮರುಕ್ಷಣವೇ 'ಕುಂಭಕರ್ಣನ ನಿದ್ದೆ. ಈ ಮಹಾರಾಯನಿಗೊಮ್ಮೆ ಎಚ್ಚರವಾದರೂ