ಪುಟ:Chirasmarane-Niranjana.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆ ಮಾತಿನಂತೆಯೆ ಹಲವರು ಅವನನ್ನು ಹಿಂಬಾಲಿಸಿದರು.ಉಳಿದವರು ಹಳ್ಳಿ ಸೇರಿದರು.

....ಸುಳ್ಳಾಗಿರಲಿಲ್ಲ ಅಪ್ಪು ನುಡಿದ ಮಾತು.ಬೆಳಗು ಮುಂಜಾನೆ ಸಶಸ್ತ್ರ ದಳದವರು ಪ್ರಭಾತಫೇರಿ ನಡೆಸಿದರು; ಲೆಫ್ಟ್-ರೈಟ್,ಲೆಫ್ಟ್-ರೈಟ್; ಅಬೌಟ್ಟರ್ನ್!
ಆ ಬಳಿಕ ನಂಬಿಯಾರರ ಸೇವಕರು ಸಿದ್ಧಗೊಳಿಸಿದ ಉಪಾಹಾರ ಸ್ವೀಕಾರ.ಆದಾದ ಮೇಲೆ ತಂಡತಂಡಗಳಾಗಿ ಚೆದರಿ, ಬೇಟೆ-ನರಬೇಟೆ.ಅವರು ಗುಡಿಸಲುಗಳನ್ನು ಹೊಕ್ಕರು.ಹುಡುಗಿಯರಿಗಾಗಿ ಹುಡುಕಿ ನಿರಾಶರಾಗಿ "ಮುಖಂಡರಿಲ್ಲ" ಎನ್ನುತ್ತ ಹೊರಬಂದರು.ಪುಡಿಕಾಸುಗಳನ್ನು ದೋಚಿದರು.ಮಡಿಕೆ ಕುಡಿಕೆಗಳನ್ನೊಡೆದರು.ಬಡ ಗಂಡಸರ ಎದೆಗೆ ಬಂದೂಕಿನ ಹಿಂಬದಿಯಿಂದ ಹೊಡೆದರು.ಮುದುಕಿಯರ ತಲೆ ಕೂದಲು ಹಿಡಿದೆಳೆದು, ಅವರು ರೋದಿಸಿದಾಗ ಅಬ್ಬರಿಸುತ್ತ ನಕ್ಕರು; ನಗುತ್ತ ಅಬ್ಬರಿಸಿದರು.ಮಧ್ಯಾಹ್ನದ ಹೊತ್ತಿಗೆ ಗಟ್ಟಿಮುಟ್ಟಾಗಿದ್ದ ನೂರು ನೂರೈವತ್ತು ಜನರನ್ನು ಹಿಡಿದು ತಂದರು.ಅವರನ್ನು ಪೋಲೀಸರ ಕಾವಲಿಗೊಪ್ಪಿಸಿ ಸಶಸ್ತ್ರದಳದವರು ಭೂರಿಭೋಜನಕ್ಕೆ ಕುಳಿತರು.
ಊಟವಾದ ಮೇಲೆ ಶುರುವಾಯಿತು ಮಾತು:
-"ಹೆಂಗಸರ್ನ್ನ ಎಲ್ಲಿ ಬಚ್ಚಿಟ್ಟಿದ್ಡೀರಿ?"
-"ಓಡಿಹೋದ ಗಂಡಸರು ಎಷ್ಟು ಜನ?"
-"ಸಾಮ್ರಾಜ್ಯಶಾಹಿ ನಾಶವಾಗಲೀಂತ ಈಗ ಹೇಳಿ ನೋಡೋಣ!"
-"ಪೋಲೀಸರ ಮೈ ಮುಟ್ಟಿದರೆ ಏನಗ್ತದೇಂತ ಗೊತ್ತಾಯ್ತೊ?"
ಏಟುಗಳು ಬಿದ್ದುವು.ಅವಾಚ್ಯ ಬೈಗಳು ಏಟಿಗಿಂತಲೂ ಹೆಚ್ಚು ನೋವುಂಟುಮಾಡಿದುವು.ಸಶಸ್ತ್ರದಳದವರು ಆ ಗುಂಪಿನಿಂದ ಮೂವತ್ತು ರೈತರನ್ನು ಆರಿಸಿದರು.ಆ ರೈತರಲ್ಲಿ ಚಿರುಕಂಡನ ತಂದೆಯೂ ಒಬ್ಬ.ಕುಂಞಂಬುವಿನ ಅಣ್ಣನೊಬ್ಬ.ಅವರೆಲ್ಲರನ್ನೂ ಸಂಘದ ಕಛೇರಿಯೊಳಕ್ಕೆ ತಳ್ಳಿ ಅದನ್ನೆ ಕೂಡುದೊಡ್ಡಿಯಾಗಿ ಮಾಡಿದರು.ಬಳಿಕ ಹಳ್ಳಿಯ ಸುತ್ತಲೂ ದಳದವರು ಕಾವಲುನಿಂತರು.
ಆ ಸರ್ಪಗಾವಲನ್ನೂ ಭೇದಿಸಿ ಇಬ್ಬರು ಸ್ವಯಂಸೇವಕರು ಹಳ್ಳಿಗೆ ಆ ರಾತ್ರೆ ಬಂದು, ವಿಷಯ ತಿಳಿದು, ಹಿಂತಿರುಗದೆ ಇರಲಿಲ್ಲ.
ಮಾರನೆಯ ಬೆಳಗ್ಗೆ ಮತ್ತೆ ತುತ್ತೂರಿ; ಲೆಫ್ಟ್-ರೈಟ್, ಲೆಫ್ಟ್-ರೈಟ್, ಅಬೌಟ್ಟರ್ನ್!...