ಪುಟ:Chirasmarane-Niranjana.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ಚಿರಸ್ಮರಣೆ                                     ೨೧೫
 
    "ನೀನಾಕಪ್ಪ ಹೆದರ್ತಿಯಾ? ನಾವಿಷ್ಟು ಜನ ಇರುವಾಗ ಯಾಕಪ್ಪ ಹೆದರ್ಕೆ?" 
    ತಮ್ಮ ಮಾನ ಏಕವಚನದ ಮಟ್ಟಕ್ಕಿಳಿಯಿತಲ್ಲ ಎಂದು ನಂಬಿಯಾರರು
 ಉಗುಳು ನುಂಗಿ, ತಣ್ಣಗಾದರು.
    ಅತಿಥಿಸತ್ಕಾರ ಮಾಡಿ ಬಳಲಿದ ಜಮೀನ್ದಾರರ ಗೋಳು ನೋಡಿ ಮುಗುಳು 
 ನಕ್ಕು, ಸಶಸ್ತ್ರ ದಳದವರಿಗಿಂತ ತಾನು ಮೇಲೆಂದು ತೋರಿಸಿಕೊಳ್ಳುತ್ತ, ಪೋಲೀಸ್
 ಅಧಿಕಾರಿಯೆಂದ:
   "ನಾನೇನೋ ನಾಳೆ ಹೊರಡ್ತೇನೆ. ಮುಂದಿನ ಕೆಲಸಕ್ಕೆ ಏರ್ಪಾಟು ಮಾಡ್ಬೇಕು.
 ಅಂತೂ ನಿಮಗೆ ಸ್ವಲ್ಪ ಭಾರ ಕಡಿಮೆಯಾಗ್ತದೆ."
   ನಗಬೇಕೆಂದು ನಂಬಿಯಾರರು ಯತ್ನಿಸಿದರು; ಆದರೆ ಅದರ ಬದಲು ಅಳು
 ಬಂತು.
   "ಆ ನಂಬೂದಿರಿ ನೋಡಿ. ಬರಲೇ ಇಲ್ಲ. ನೀಲೇಶ್ವರದಲ್ಲೇ ಇದ್ದಾನೆ" ಎಂದು
 ತನ್ನ ವ್ಯವಸಾಯ ಬಂಧುವನ್ನು ಅವರು ಜರೆದರು, ಬಂದವರನ್ನು ನೋಡಿಕೊಳ್ಳುವ
 ಜವಾಬ್ದಾರಿಯಿಂದ ನಂಬೂದಿರಿ ನುಣುಚಿಕೊಂಡನೆಂದು ನಂಬಿಯಾರರಿಗೆ
 ಬ್ರಹ್ಮಾಂಡ ಕೋಪ ಬಂದಿತ್ತು.
    ಪೋಲೀಸ್ ಅಧಿಕಾರಿ ಸ್ವಲ್ಪ ತಗ್ಗಿಸಿ ಅಂದ:
    "ಏನಿದ್ದರೂ ಮಳೆಗಾಲದವರೆಗೆ. ಮಳೆ ಬಂದ ಮೇಲೆ ಸಶಸ್ತ್ರದಳ ಇಲ್ಲಿ
 ಇರೋದಕ್ಕಾಗೋದಿಲ್ಲ."
    ಆದರೆ, ಮುಂಗಾರು ಮಳೆ ಬರಲು ದೀರ್ಘವಾದೊಂದು ತಿಂಗಳಿತ್ತು ಇನ್ನೂ.
 ನಂಬಿಯಾರರು ಮನೆಯಿಂದ ಹೊರಬಿದ್ದಾಗಲೆಲ್ಲ ಕರಿ ಮೋಡ ಕಾಣಿಸುವುದೇನೋ
 ಎಂದು ಪಶ್ಚಿಮದತ್ತ ನೋಡಿದರು.
                         ೩
 ಮೈಯೆಲ್ಲ ಕಣ್ಣಾಗಿ, ಎದುರು ಬಂದ ಅಪರಿಚಿತರೆಲ್ಲ ಗೂಢಚಾರರೇ ಎಂದು 
 ಸಂಶಯಪಡುತ್ತ, ಹಗಲು ಗುಡ್ಡಕಾಡುಗಳ ಹಾದಿಯೂ ರಾತ್ರೆ ರಾಜಮಾರ್ಗದ
 ಮೇಲೂ ನಡೆಯುತ್ತ, ಅಪ್ಪು ಮತ್ತು ಅಬೂಬಕರ್ ತಲಚೇರಿ ಸೇರಿದರು.
 ಅಬೂಬಕರ್ ಕೂಲಿಕಾರ ಚಳವಳಿಯ ಯೋಧನಾಗಿ ರೂಪುಗೊಂಡಿದ್ದ ಊರು.
 ಕತ್ತಲಾಗುವವರೆಗೂ ಕಾದಿದ್ದು, ಬಳಿಕ ರಾತ್ರೆ ಶಾಲೆಗೆ ಅವರು ಸುದ್ದಿ ಕಳುಹಿದರು.
 ಅಲ್ಲಿಂದ ಆಬೂಬಕರನ ಜತೆಗಾರನಾಗಿದ್ದವನೊಬ್ಬ ಬಂದ. ಪತ್ರಿಕೆಗಳ ಮೂಲಕ
 ಆಗಲೇ ಎಲ್ಲವನ್ನೂ ತಿಳಿದಿದ್ದ ಆತನಿಗೆ ಏನನ್ನೂ ವಿವರಿಸಬೇಕಾದುದಿರಲಿಲ್ಲ.