ಪುಟ:Chirasmarane-Niranjana.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦ ಚಿರಸ್ಮರಣೆ ಅರ್ಥಮಾಡಿಕೊಂಡಳು. "ಇವರಲ್ಲಿ ಒಬ್ಬನನ್ನು ಮೊದಲು ನೋಡಿದ್ದೇನೆ, ಇನ್ನೊಬ್ಬ ಹೊಸಬ" ಎನ್ನುತ್ತ, ಗಂಜಿಗೆ ನೀರಿಡಲು ಒಳಹೋದಳು.

  "ಐದು ವರ್ಷಗಳಿಗೆ ಹಿಂದೆ ಈ ಮನೇಲೆ ಪಂಡಿತರನ್ನು ಕಂಡಿದ್ದೆ" ಎಂದ ಅಪ್ಪು, ಕ್ಷೀಣಸ್ವರದ ದೃಷ್ಟಿಗಳು ಪರಸ್ಪರರನ್ನು ನೋಡಿದುವು.ಪರಿಚಯದ ಮಾತಿನ ಅಗತ್ಯ ಯಾರಿಗೂ ತೋರಲಿಲ್ಲ. ಅವರು ಬೊಟ್ಟು ಮಾಡಿದ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾ ಅಪ್ಪು ಹೇಳಿದ:
  "ಮಾಸ್ತರನ್ನು ನೋಡೋದಕ್ಕೇಂತ ನೀಲೇಶ್ವರಕ್ಕೆ ಬಂದೆವು." 
  "ಕಯ್ಯೂರಿನ ಪರಿಸ್ಥಿತಿ? ಎಷ್ಟು ದಿವಸವಾಯ್ತು ನೀವು ಊರು ಬಿಟ್ಟು?"
  "ಘಟನೆಯಾದ ದಿನವೇ ನಾವು ಭೂಗತರಾದೆವು."
   ಆ ಮಾತಿನಲ್ಲಿ ಆತ್ಮಾಭಿಮಾನ ಸೂಕ್ಷ್ಮವಾಗಿ ಬೆರೆತಿತ್ತು.
   "ಅದು ಸರಿ. ಕಯ್ಯೂರಿನ ಸಂಪರ್ಕವಿಲ್ಲದೆ ಎಷ್ಟು ದಿವಸ ಆಯ್ತೂಂತ?"
   "ನಾಲ್ಕು ದಿವಸ."
   "ಹಾಗಾದರೆ ಕಯ್ಯೂರಿನ ಪರಿಸ್ಥಿತಿ ಕುರಿತು ನಿಮಗೆ ಹೇಳಬೇಕಾದ್ದು ನಾನು."
   ಆ ಮಾತು ಅಪ್ಪು ಅಬೂಬಕರ್ ಇಬ್ಬರನ್ನೂ ಗಾಬರಿಗೊಳಿಸಿತು. ಅಬೂಬಕರ್ ಕೇಳಿದ:
     "ಏನು ಸುದ್ದಿ? ಕಯ್ಯೂರಿನಲ್ಲಿ ಏನಾಗಿದೆ?"
     ಅವರು ಓದುತ್ತಿದ್ದ ಪುಸ್ತಕವನ್ನು ಮುಚ್ಚಿ, ಕುರ್ಚಿಯ ಬೆನ್ನಿಗೊರಗಿ ಎರಡೂ ಅಂಗೈಗಳನ್ನು ಜೋಡಿಸಿ,ನಿಧಾನವಾಗಿ ಮಾತನಾಡಿದರು. ಸಶಸ್ತ್ರ ದಳದವರು ಕಯ್ಯೂರಿನಲ್ಲಿ ನಡೆಸುತ್ತಿದ್ದ ದಬ್ಬಾಳಿಕೆಯ ಹೊಸಹೊಸ ಸ್ವರೂಪಗಳ ವಿವರ ಕೊಟ್ಟರು. ಉರಿಯುವ ಸಿಗರೇಟನ್ನು ಮೂಗಿಗೆ ತುರುಕುವುದು, ಉಗುರುಗಳಿಗೆ ಸೂಜಿ ಚುಚ್ಚುವುದು, ಕೈಕಾಲು ಬಿಗಿದು ಬಾಯಿಗೆ ಹೊಲಸನ್ನು ಸುರಿಯುವುದು...
    "ಅಷ್ಟೊಂದು ಜನ ಹೆಂಗಸರನ್ನು ನೀವು ಹೊರಕ್ಕೆ ದಾಟಿಸಿದ್ದು ಒಳ್ಳೆಯದಾಯ್ತು ಸಂಗಾತಿ.ಅದರ ವರದಿ ಕೇಳಿದಾಗ ನಾನು ಮೂಕನಾವೆ. ನೀವು ಹಾಗೆ ಮಾಡಿದ್ದು ಸಾಮಾನ್ಯ ವಿಷಯವಲ್ಲ; ಹಾಗೆ ಮಾಡಿದ್ದರಿಂದ ಮಾನಭಂಗದ ಸಂಖ್ಯೆ ಎಷ್ಟೋ ಕಿಮ್ಮಿಯಾಯ್ತು."
    ಬಾಡಿದ ತಮ್ಮ ಕಣ್ಣುಗಳು ಮತ್ತೆ ಸಜೀವವಾಗಿ ಹನಿಗೂಡಿದಂತೆ, ಅಪ್ಪು ಮತ್ತು ಅಬೂಬಕರರಿಗೆ ಅನಿಸಿತು.
   ಆದರೆ ಹೊಸ ಆಘಾತವಾಗಿ ಬಂದೆರಗಿತು ಮುಂದಿನ ಮಾತು.