ಪುಟ:Chirasmarane-Niranjana.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೨೩

     "ಅಷ್ಟು  ಮಾಡಿ."
      ..........
      ದಸ್ತಗಿರಿ  ಖಂಡಿತವೆಂದು  ಗೊತ್ತಿದ್ದರೊ  ಕಯ್ಯೂರು ಸೇರುವವರೆಗೆ  ತಾವು
   ಸುರಕ್ಷಿತವಾಗಿರಬೇಕೆಂದು ಅಪ್ಪು  ಮತ್ತು ಅಬೂಬಕರ್  ಬಯಸಿದರು.  ದೇವಕಿಯ
   ಜತೆಯಲ್ಲಿ  ತವರುಮನೆ  ಸೇರಿದ್ದ  ಜಾನಕಿಯನ್ನೂ  ಮಗುವನ್ನೂ  ಒಮ್ಮೆ
   ನೋಡಬೇಕು;ತನ್ನ  ತಾಯಿ, ಅಜ್ಜಿ, ತಮ್ಮಂದಿರನ್ನೂ  ಕಾಣಬೇಕು  ಎಂದು ಅಪ್ಪುವಿಗೆ
   ಬಯಕೆ. ತಾಯಿ  ಬೂಬಮ್ಮ  ನನ್ನೊಮ್ಮೆ  ಕಂಡರಾದೀತೆಂದು  ಅಬೂಬಕರನಿಗೆ  ಆಸೆ.
   ಅದರೆ  ಮನಸ್ಸಿನೊಳಗೆ  ಆ  ವಿಷಯ  ಚಿಂತಿಸಿ,  ಒಬ್ಬರಿಗೊಬ್ಬರು  ಹೇಳದೆ,  ಆ  
   ಭಾವನೆಗಳನ್ನೂ  ಇಬ್ಬರೂ  ಅದುಮಿ  ಹಿಡಿದರು.
       ಚರ್ವತ್ತೊರು  ತನಕ ರೈಲಿನಲ್ಲಿ ಒಂದು  ಕಯ್ಯೊರಿಗೆ  ಅವರು ನಡೆದರು.
     ಎದೆಯ  ಮೂಕ  ಅರ್ತನಾದದಿಂದ ಅವರಿಗೆ ಅಸಹನೀಯ  ಸಂಕಟವಾಯಿತು.
   ಕಯ್ಯೂರು  ಸಮೀಪಿಸಿದಂತೆ ಸೂರ್ಯನ  ಶಾಖ  ಹೆಚ್ಚಿತು. ರಣಗುಟ್ಟಿತು
   ಬಿಸಿಲು.ಹೇಳುವ  ಕೇಳುವವರಿಲ್ಲವೆಂದು ಹೊಲಗಳು  ಬಾಯ್ತೆರೆದು  ಮಲಗಿದ್ದುವು.
   ತಾವು ಅನಾಥ ಪ್ರಾಣಿಗಳೆಂಬಂತೆ, ಕಣ್ಣೆಗೆ ಬೀಳದ ಹಸುರನ್ನು ಹುಡುಕುತ್ತ  ಕೆಲ
   ಹೋರಿಗಳು ಅಲೆಯುತ್ತಿದ್ದುವು.
     ಇದೆಲ್ಲವನ್ನೊ  ದಿಟ್ಟಿಸುತ್ತ  ಅಪ್ಪು  ಮತ್ತು  ಅಬೂಬಕರ್ ಸಶಸ್ತ್ರದಳದ
   ಶಿಬಿರವಿದ್ದ  ಕಡೆಗೆ ನಡೆದರು.
    ಅವರನ್ನು  ದೊರದಿಂದಲೇ  ಮೊದಲು ಗುರುತಿಸಿದವರು ನಂಬಿಯಾರರ
  ಸೇವಕರು.  ಅವರು  ಒಡಿ ಹೋಗಿ  ದಳದ  ಅಧಿಕಾರಿಗೆ  ಸುದ್ದಿ  ಮುಟ್ಟಿಸಿದರು.
   "ಅಪ್ಪು  ಮತ್ತು  ಅಬೂಬಕರ್ ಬರ್ತಿದ್ದಾರೆ!"
   ಇದು ತಮ್ಮ ದಳದ  ಮೇಲೆ ಆಕ್ರಮಣವಿರಬಹುದೆಂದು ಆಧಿಕಾರಿ  ಧಿಗ್ಗನೆ
  ಎದ್ದು  ಕೇಳಿದ:
      "ಎಷ್ಟು  ಜನ?"
      "ಇಬ್ಬರೇ."
      "ಇಬ್ಬರು?"
      "ಹೊಂ."
      ಅಧಿಕಾರಿ, ಅಶ್ಚರ್ಯವೆನಿಸಿದರೂ ಸಂತೋಷಪಡುತ್ತ, ಅವರನ್ನು
    ಇದಿರುಗೊಳ್ಳಲು  ತನ್ನ ಸ್ಯೆನಿಕರಿಗೆ     ಇತ್ತ. ಹತ್ತು  ಜನ  ಬಂದೂಕನ್ನೆತ್ತಿ  ಹಿಡಿದು
    ಮೂಂದುವರಿದರು.