ಪುಟ:Chirasmarane-Niranjana.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೨೬ ಚಿರಸ್ಮರಣೆ

          "ಆಂತೂ ಕಯ್ಯೂರಿಗೆ ನಾವು ವಾಪಸಾಗುವಾಗ ಕೋಳಿ  ಮರಿಗಳನ್ನೂ
       ಹೊಸದಾಗಿ ತಗೊಂಡು ಹೋಗ್ಲೇಕೊಂತ ಕಾಣ್ತದೆ!" ಎಂದು ಧಾಂಡಿಗ.
       ಆ ಮಾತು ಕೇಳಿ ಸಂಕಟದ ನಡುವೆಯೂ ಕೆಲವರು ನಕ್ಕರು.
       "ಸಾಯೋ  ಮನಷ್ಯನ  ಹಾಗೆ, ಈ  ಸರಕಾರ. ಯಮ  ಬಂದು ನಿಂತಾಗ
       ಚಡಪಡಿಸೋದು ಜಾಸ್ತಿ.... ನಮ್ಮವರೇ ಅದವರು ನಮ್ಮ ಜನರ ಮೇಲೆಯೇ
       ಬೀಳೋದಂತೊ ಎಷ್ಟು ಅಸಹ್ಯ! ಅಷ್ಟರಮಟ್ಟಿಗೆ ನಮ್ಮವರನ್ನು ಗುಲಾಮರಾಗಿ
       ಪಶುಗಳಾಗಿ ಮಾಡಿದ್ದಾರೆ....ಸರಕಾರ ಅನ್ನೋದು ಎಲ್ಲಿದೆ; ಅದು
       ಹ್ಯಾಗೆ ಕೆಲಸ  ಮಾಡ್ತದೆ,ಅಂತ ಈವರೆಗೊ  ನಾವು  ನೋಡಿದ್ಲಿಲ್ಲ. ಬರೇ
       ಜಮೀನ್ದಾರರಿಬ್ಬರೇ  ಕಣ್ಣಿಗೆ ಕಾಣ್ತಾ  ಇದ್ರು. ಅವರ  ರಕ್ಶಣೆಗಿರೋ ಶಕ್ತಿ
       ಎಂಥದೊಂತ ನಮಗೀಗ ಗೊತ್ತಾಯ್ತು. ಆ ಶಕ್ತೀನ ಮುರಿಯೋದಕ್ಕೆ ನಮ್ಮ
       ಶಕ್ತಿ ಹ್ಯಾಗಿರ್ಬೇಕು ಅನ್ನೋದು ತಿಳೀತು.ಅಂತೂ ನಮ್ಮ ಪಾಲಿಗೆ ಇದೊಂದು
       ಅಗ್ನಿಪರೀಕ್ಷೆ... ಇದರಲ್ಲಿ ನಾವು ಜಯಿಸಿ ಒಗ್ಗಟ್ಟಾಗಿ ಉಳಿದರೇನೇ ನಾಳೆ
       ಭೂಮಿಯ  ಮೇಲೆ  ಸ್ವರ್ಗ  ರಚಿಸೇವು...."
           ಧಾಂಡಿಗೆ ಎದ್ದು ಬಾಗಿಲ ಬಳಿ ಹೋಗಿ ಸರಳುಗಳ ಎಡೆಯಿಂದ ಎಡೆಯಿಂದ ಹೊಂಕ್ಕೆ
       ಇಣಿಕಿದ."ಇವತ್ತಾದರೂ ಮಾವನ ಮನಗೆ  ಕರಕೊಂಡು ಹೋಗ್ತಾರೋ ಇಲ್ಲವೋ"
       ಎಂದು ಗೊಣಗಿದ. ನಿಂತಲ್ಲಿಂದಲ್ಲೇ ಕತ್ತು ತಿರುಗಿಸಿ ಕೇಳಿದ:
          "ಟೈಮೆಷ್ಟು ಅಪ್ಪು"
         ಅಪ್ಪು ಅಭ್ಯಾಸಬಲದಿಂದ ಕೈ ನೋಡಿದ. ಆದರೆ ಎಲ್ಲಿತ್ತು ಕೈಗಡಿಯಾರ!
       ನಗುವ ಹಾಗಾಯಿತು. ಧಾಂಡಿಗ ಮತ್ತೂ ಕೇಳಿದ:
           "ಯಾಕೆ? ಕೈಗಡಿಯಾರ ಇಲ್ವೇನೋ? ಯಾರಿಗೆ ಕೊಟ್ಟೆ?"
           "ಕಿತ್ಕೊಂಡ್ರು."
           "ಆಹಾ! ಯಾರು ? ಪೋಲೀಸರೋ ?  ಅಧಿಕಾರಿನೋ ?"
           "ಅಧಿಕಾರಿ."
           "ಹಾಗಾದರೆ  ಬೇಸರವಿಲ್ಲ."
           ಯಾರೋ  ಒಬ್ಬನು ಕೇಳಿದ:
           "ಎನೊ ಹಾಗಂದರೆ?"
           "ಈ ಕೈಗಡಿಯಾರದಲ್ಲಿ ಟೈಮು ನೋಡಿಯೇ ಕ್ರಾಂತಿ ಶುರು ಮಾಡಿದ್ರೊಂತ
           ನ್ಯಾಯಾಸ್ಥಾನದಲ್ಲಿ ಆತ ಇದನ್ನು ಹಾಜರುಪಡಿಸ್ತಾನೆ."