ಪುಟ:Chirasmarane-Niranjana.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

   "ಓಹೋ!"
   "ನಮ್ಮ ಸರ್ಕಾರ ಬಂದ ಕೂಡ್ಲೆ ನ್ಯಾಯಾಸ್ಧಾನದೋರು ಈ ಗಡಿಯಾರ ಚಾರಿತ್ರಿಕ ವಸ್ತೂಂತ ನಮಗೆ ವಾಪಸ್ಸು ಕೋಡ್ತಾರೆ."
   ಆ ಮಾತು ಕೇಳಿ ಮಾಸ್ತರನ್ನು ಮೊದಲ್ಗೊಂದಡು ಎಲ್ಲರು ನಕ್ಕರು.
   ಧಾಂಡಿಗ ಮತೋಮ್ಮೆ ಹೊರಗಿಣಿಕೆ ಅಂದ:
   ಆಹಾ!ಬಂದರು!ನೋಡೋ ಅಬೂಬಕರ್, ಹ್ಯಾಗೆ ಬರ್ತಿದ್ದಾರೆ !
   ಲೆಫ್ಟ್-ರೈಟ್,ಲೆಫ್ಟ್-ರೈಟ್,ಢಂ-ಪುಸ್ಕ್."
   ಎಲ್ಲರ ನೋಟುಗಳೂ ಅತ್ತ ತಿರುಗಿದವು.ಸಶಸ್ತ್ರ ಪೋಲೀಸರ ದೋಡ್ದ
 ಪಡೆಯೇ ಅವರತ್ತ ಬರುತ್ತಿತ್ತು.  
   ಮಾಸ್ತರು ಎದ್ದು ನಿಂತು ಹೇಳಿದರು:
   "ಏಳಿ ಸಂಗಾತಿಗಳೇ! ವಿಚಾರಣೆಯ ನಾಟಕದ ಮೊದಲ ಅಂಕ ಈಗೆ 
   ಶುರು.ನಾವೀಗ ನ್ಯಾಯಸ್ಧಾನಕ್ಕೆ ಹೋಗ್ಬೇಕು."
   ಮತ್ತೆ ಕೈಕೋಳ. ಹಿರಿದ ಬಂದೂಕಗಳ ಜೋಡು ಸಾಲುಗಳ ನಡುವೆ ಒಬ್ಬರ      ಬೆನ್ನಿಗೊಬ್ಬರು ಅಂಟಿಕೊಂಡು ನಡಿಗೆ...
   ಊರಿನ ಜನರೂ ಬಂದು ನೆರೆದರು,ಯಾವ ಭಾವನೆಯನ್ನೂ ಒಡೆದು ತೋರಿಸದ ನೋಟಗಳು ಕೆಲವು ಕುಹಕದ ಕೊಂಕಿನ ಮುಖಭಾವಗಳು ಕೆಲವು...

ಆ ಪ್ಪುಟ್ಟ ನ್ಯಾಯಸ್ಧಾನದಲ್ಲಿ ಅಷ್ಟೊಂದು ಜನ ಕೈದಿಗಳು ನಿಲ್ಲಲು ಜಾಗ ಇರಲಿಲ್ಲ. ಎತ್ತರದ ಸ್ಧಳದಲ್ಲಿ ಒಂಟಿಯಾಗಿ ಕುಳಿತಿದ್ದ ವಯಸ್ಸಾದ ನ್ಯಾಯಾಧೀಶರು,ಮನೆ ಜಗಲಿಯ ಮೇಲೆ ಓಡಾದುವ ಒಕ್ಕಲಗಿತ್ತಿಯ ಮಕ್ಕಳನ್ನು ಕಾಣುವಂತೆ,ಆ ಕೈದಿಗಳತ್ತ ನೋಡಿದರು.ಮುಖಂಡರು ಯಾರು ಎಂಬುದನ್ನು ನಿರ್ಧರಿಸಲಾಗದೆ,ಎಲ್ಲರಿಗಿಂತ ಚಿಕ್ಕವನಾದ ಕುಟ್ಟಿಕೃಷ್ಣನ ಮೇಲೆ ದೃಷ್ಟಿ ನೆಟ್ಟರು. ಬಳಿಕ ಪೋಲಿಸರು ಅಧಿಕಾರಿಯತ್ತ ನೋಡಿ,"ಕೊಡಿ ಇಲ್ಲಿ ಎಲ್ಲಿ ಸಹಿ ಹಾಕ್ಬೇಕು? ತಡಮಾಡ್ಬೇಡಿ" ಎಂದರು.ಹೊರಗೆ ಗುಂಪು ಸೇರಿದ್ದ ಜನರತ್ತ ಸಿಟ್ಟಿನಿಂದ ನೋಡಿ,ಅವರನ್ನು ಚದುರಿಸುವಂತೆ ಆದೇಶವಿತ್ತರು.

  ಅರವತ್ತು ಕೈದಿಗಳ ಹೆಸರುಗಳನ್ನೂ ಓದಿದುದಾಯಿತು,ಒಬ್ಬೊಬ್ಬರಾಗಿ ಕೈದಿಗಳು ಹೂಂಗುಟ್ಟಿದರು.ಅವರಿಗೆಲ್ಲ ಹದಿನೈದು ದಿನಗಳ ರಿಮಾಂಡುಕೊಟ್ಟು ಮಂಗಳೂರಿನ ಸಬ್ ಜೈಲಿನಲ್ಲಿಡುವಂತೆ ನ್ಯಾಯಾಧೀಶರು ಬರೆದರು."ಸರಿ ತಾನೆ?" ಎಂದು ಅಧಿಕಾರಿಯನ್ನು ಕೇಳುತ್ತ ಸಹಿ ಮಾಡಿದರು."ಅವರಿಗೆ ಊಟ ಹಾಕಿಸುವ ಹಾಗಿದ್ದರೆ ಅದನ್ನೂ ಮುಗಿಸಿ ಕರಕೊಂಡು ಹೋಗಿ"ಎಂದರು,ಅಲ್ಲಿಗೆ ಆ ದೃಶ್ಯ ಮುಗಿಯಿತು.