ಪುಟ:Chirasmarane-Niranjana.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ಕೈದಿಗಳು ವಂದಿಸುವ ಸಂಪ್ರದಾಯವನ್ನೂ ಆಚರಿಸದೆ ಹೊರ ಹೋಗುತ್ತಿದ್ದಾಗ, ಇಂಥವರೇ ಮುಖಂಡರಿರಬಹುದೆಂದು ತಾವು ಊಹಿಸಿದ್ದವರನ್ನು ನ್ಯಾಯಾಧೀಶರು ಮತ್ತೆ ಮತ್ತೆ ನೋಡಿದರು. .....ಊಟ ಹಾಕಿಸುವ ಯೋಚನಯೇ ಇಲ್ಲದೆ ಕೈದಿಗಳನ್ನು ನೇರವಾಗಿ ರೈಲು ನಿಲ್ದಾಣಕ್ಕೆ ಒಯ್ಯುವ ಸೂಚನೆ ಕಂಡಿದು.ಧಾಂಡಿಗ ಸಿಟ್ಟು ಬೆಂಕಿಯಾದವನಂತೆ ನಟಿಸುತ್ತ ಕೂಗಾಡಿದ;

 "ಈ ಆಟ ನಡೆಯೋಕಹಾಗಿಲ್ಲ. ಮೊದಲು ಊಟ, ಆಮೇಲೆ ಪ್ರಯಾಣ.ಅಬೂಬಕರ್! ಆರ್ಡರ್ ಕೊಡು-ಹಾಲ್ಟ್!"
  ಅಬೂಬಕರನ ಆದೇಶವಿಲ್ಲದೇಯೇ ಕೈದಿಗಳು ನಿಂತರು.ಪೋಲೀಸನೊಬ್ಬ ಬಂದೂಕಿನ ಹಿಡಿಯಿಂದ ಧಾಂಡಿಗನಿಗೆ ಹೊದೆದ;ಬಲಮುಷ್ಟಿಯಿಂದ ಮುಖಕ್ಕೆ ಗುದ್ದಿದ."ಥೂ!"ಎಂದ ಧಾಂಡಿಗ,ಉಗುಳಿನ ಆ ಪ್ರಸಾದಕ್ಕೆ ಮರುಕಾಣಿಕೆಯಾಗಿ ಮತ್ತೆ ಏಟುಗಳು ಬಿದ್ದುವು,ಇತರ ಕೈದಿಗಳೆಲ್ಲ ಇದನ್ನು ನೋಡುತ್ತ ಅವುಡು ಕಚ್ಚಿ ನಿಂತರು.
 "ನಡೀರಿ ಮುಂದಕ್ಕೆ" ಎಂದ ಅಧಿಕಾರಿ, ಆದರೆ ಕೈದಿಗಳು ಮುಂದಕ್ಕೆ ಅಡಿ ಇಡಲಿಲ್ಲ."ಊಟವಾದ್ಮೇಲೆ ಹೊರಡ್ತೇವಷ್ಟ,ನಾವು ಉಪವಾಸ ಬಿದ್ದು ಹಾದೀಲಿ ಸತ್ತರೆ,ಸಂಖ್ಯೆ ಅರವತ್ತಕ್ಕೆ ಕಡಿಮೆಯಾಗಿ ನಿಮ್ಮ ತಲೆಗೇ ಬಂದೀತು" ಎಂದ ಕೋರ,ಹಾಗೆ ಹೇಳುವಾಗ ಮಾಸ್ತರತ್ತ ನೋಡಿದ.

ಅದರ ಪರಿಣಾಮ,ಮತ್ತೆ ಕೂಡುದೊಡ್ಡಿಗೆ ನಡಿಗೆ.ಅಲ್ಲಿ ಸ್ವಲ್ಪ ಹೊತ್ತಿನ ಒಳಗಾಗಿಯೇ ಅತಿ ಕೆಟ್ಟ ಅಕ್ಕಿಯಿಂದ ಬೇಯಿಸಿದ ಗಂಜಿ ನೀರಿನ ಊಟ.

 ಧಾಂಡಿಗ ನಾಲಿಗೆ ಚಪ್ಪರಿಸುತ್ತ,"ಮೃಷ್ಟಾನ್ನ ಭೋಜನ"ಎಂದು ಉದ್ಗರಿಸಿ,ಕೃತಕವಾಗಿ ತೇಗಿ,"ಮಂಗಳೂರಿಗೆ ಅಲ್ಲದಿದ್ರೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಇನ್ನು!"ಎಂದ.
 "ನಿನ್ನ ಉಪಕಾರ ಇಷ್ಟಾದರೂ ಆಯ್ತು ಮಹಾರಾಯ" ಎಂದ ಪ್ರಭು.

"ಇಂಥ ಎಷ್ಟೋ ಉಪಕಾರ ಮಾಡ್ಬೇಕೂಂತ ನನಗೆ ಮನಸ್ಸಿನಲಿದೆ.ಆದರೆ ಏನು ಮಾಡೋಣ ಹೇಳು?ಉದಾಹರಣೆಗೆ ಬೀಡಿ.ಸಾಧ್ಯವಿದ್ದರೆ ಎಲ್ಲರಿಗೂ ನಾನೀಗ ಒಂದೊಂದು ಬೀಡಿ ಕೊಡಿಸ್ತಿದ್ದೆ,ಅಬೂಬಕರ್ ತಲಚೇರಿಲಿದ್ದಾಗ ಚೆನ್ನಾಗಿ ಬೀಡಿ ಕಟ್ತಿದ್ನಂತೆ. ಈಗ ಮರೆತಿದ್ದಾನೋ ಏನೋ ಏ, ತರಗೆಲೆ ತಂದ್ಕೊಡ್ತೇನೆ,ಬೀಡಿ ಕಟ್ಟೊದಕ್ಕಾಗ್ತದೇನೋ?" ಆ ಮಾತುಗಳಿಂದ ಹೊರಟು ಹರಿಯುತ್ತಿದ್ದ ನಗೆಯ ಹೊನಲಿನಲ್ಲಿ