ಪುಟ:Chirasmarane-Niranjana.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

     ಪೋಲೀಸರವನು ಓದಿ ಮುಗಿಸಿ, ಆಕಳಿಸಿದ. ಪತ್ರಿಕಯನ್ನು ಮಡಚಿ ಕೈದಿಗಳತ್ತ ಎಸೆದ,ಅದು ಕೈಬೇಡಿಗಳ ಜಣತ್ಕಾರದೊಡನೆ ಮಾಸ್ತರನ್ನು ತಲುಪಿತು. ಅವರು ಪುಟ ತಿರುವಿಹಾಕುತ್ತ ಮನಸ್ಸಿನಲ್ಲಿ ಓದಿದರು.
     ಚಿರುಕಂಡನಿಗೆ ರಾತ್ರಿ ಶಾಲೆಯ ನೆನಪು ಬಂತು,'ಅಲ್ಲಾದರೆ ಗಟ್ಟಿಯಾಗಿ ಓದುತ್ತಿದ್ದುದನ್ನು ರೈತರು ಕೇಳುತ್ತಿದ್ದರು.ಮುಂದೆಯೂ ಅಷ್ಟೆ,ಒಬ್ಬರು ಗಟ್ಟಿಯಾಗಿ ಓದಿ ಉಳಿದವರು ಕಿವಿಗೊಡುವುದೇ ಪದ್ಧತಿ,ಆದರೆ ಇಲ್ಲಿ ಅವರು ಸೆರೆಯಾಳುಗಳು....ಆ ಪೋಲೀಸರವನು...ಆತ ಯಾಕೆ ಪತ್ರಿಕೆ ಕೊಟ್ಟ?
   ಚಿರುಕಂಡನ ದೃಷ್ಟಿ ಆ ಪೋಲೀಸನ ಮೇಲೆ ನೆಟ್ಟಿತು, ಯುವಕ ವಿದ್ಯೆಯ ಕುರುಹಿತ್ತು ಕಣ್ಣುಗಳಲಿ.ಆತನೂ ಅರೆಮುಚ್ಚಿದ ಕಣ್ಣುಗಳಿಂದ ಒಬ್ಬೊಬ್ಬರನ್ನಾಗಿ ಕೈದಿಗಳನ್ನು ನೋಡುತ್ತಿದ್ದ. ಒಮ್ಮೆ ಆತನ ಮತ್ತು ಚಿರುಕಂಡನ ನೋಟಗಳು ಸಂಧಿಸಿದುವು.ಅರೆಕ್ಷಣ ಹಾಗೆಯೇ ಒಂದನ್ನೊಂದು ಇದಿರಿಸಿ ನಿಂತುವು,ಆತನ ಕುಟಿಗಳ ಮೇಲೆ ಸೂಕ್ಷ್ಮನಗೆ ಮೂಡಿದಂತೆ ಚಿರುಕಂಡನಿಗೆ ಕಂಡಿತು.
   ಆ ಭಾವನೆಯ ಹಿಂದೆಯೆ,ಇದು ಭ್ರಮೆಯೆಂದೂ ತೋರಿತು,ಮತ್ತೆ ವಿಚಾರ, ಇದ್ದರೂ ಇರಬಾರದೇಕೆ? ಕಯ್ಯೂರಿನಿಂದ ಸೈನ್ಯ ಸೇರಿದವರಲ್ಲೇ ತಮ್ಮವರಿರಲಿಲ್ಲವೆ? ಹಾಗೆಯೇ ಪೋಲೀಸು ಪಡೆಯಲ್ಲೂ ಎಲ್ಲರೂ ಸುಬ್ಬಯ್ಯನಂತೆಯೆ ಇರಬೇಕು-ಎಂದೇನು? 'ಹೆಚ್ಚಿನ ಪೋಲೀಸರೆಲ್ಲ ರೈತರ ಮಕ್ಕಳೇ ಎನ್ನುವುದು ಗಮನಾರ್ಹ,'ಪುಸ್ತಕದಲ್ಲಿ ಓದಿದ್ದ ವಾಕ್ಯ,ಆದರೆ ಅವರು ಜನರನ್ನು ಸೇರುವುದುಕ ಕೊನೆಯದಾಗಿ,ಕ್ರಾಂತಿಯ ವಿಜಯ ಸನ್ನಿಹಿತವಾಗುತ್ತ ಬಂದಂತೆ ಪೋಲೀಸರು ಮಿಲಿಟರಿ ಎಲ್ಲಾ, ಜನರ ಪಕ್ಷ ಸೇರುವರು...'
   ಮಾಸ್ತರು ಓದು ಮುಗಿಸಿ ಪತ್ರಿಕೆಯನ್ನು ಚಿರುಕಂನತ್ತ ಕಳುಹಿದರು,
   ಒಬ್ ಪೋಲೀಸ್ ಅದೇ ಅಗ ಆ ಪತ್ರಿಕೆ ಕಂಡವನಂತೆ ಆಜ್ಞಾಪಿಸಿದ:
   "ಯಾರದು? ಪತ್ರಿಕೆ ಓದಬಾರ್ದು!"
   ಅವನ ಪಕ್ಕದಲ್ಲೇ ಇದ್ದ ಪೋಲೀಸನೆಂದ:
   "ಹೋಗಲಿ ಬಿಡೋ."

ತಾವು ಓದಿದುದರ ಸಾರವನ್ನು ಮಾಸ್ತರು ಬಳಿಯಲ್ಲಿದ್ದವರಿಗೆ ಹೇಳಿದರು.ಅಷ್ಟು ಸುದ್ದಿ ಬಲು ಬೇಗನೆ ಎಲ್ಲರ ಸೊತ್ತಾಯಿತು.

   ಮದ್ರಾಸ್ ಅಧಿಪತ್ಯದಲ್ಲಿ ರೈತಸಂಘವನ್ನು ಕಾನೂನುಬಾಹಿರಗೊಳಿಸಿದ್ದರು,ಹೊಸದುರ್ಗ ತಾಲ್ಲೂಕಿನ್ಲ್ಲಿ ಸಭೆ ಮೆರವಣಿಗೆಗಳನ್ನು ನಿಷೇಧಿಸುವ ೧೪೪ನೆಯ ವಿಧಿ ಇನ್ನೂ ಒಂದು ತಿಂಗಳ ಕಾಲ ಜಾರಿಯಲ್ಲಿರಬೇಕೆಂದು ಆಜ್ಞೆಯಾಗಿತ್ತು.