ಪುಟ:Chirasmarane-Niranjana.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ರೈತಮುಖಂಡ ಅಪ್ಪು ಮತ್ತು ಸ್ವಯಂ ಸೇವಕ ದಳದ ನಾಯಕ ಅಬೂಬಕರ್ ಇವರಿಬ್ಬರ ಬಂಧನವಾಯಿತೆಂಬ ವಾರ್ತೆಯೂ ಪ್ರಕಟವಾಗಿತ್ತು . ಮಂಗಲವಾಡಿ ನಿಲ್ದಾಣ, ಬಿಸಿಲು ಸ್ವಲ್ಪ ಕಡಮೆಯಾಗಿ ಕಡಲ ಕಡೆಯಿಂದ ಮೆಲ್ಲನೆ ಗಾಳಿ ಬೀಸತೊಡಗಿತ್ತು.

"ಮಾಸ್ತರೆ, ಕಣ್ಣನಿಗೆ ಗಂಟಲು ತುರಿಸ್ತದಂತೆ" ಎಂದ ಧಾಂಡಿಗ.
ಧಾಂಡಿಗನ ಸೂಚನೆಗೆ ತನ್ನ ವಿರೋಧವಿಲ್ಲ ಎನ್ನುವಂತೆ ಕಣ್ಣ ಮಾಸ್ತರ ದುಃಖ ನೋಡಿದ.
      "ಹಾಗಾದರೆ ಕೇಳಿನೋಡು" ಎಂದರು ಮಾಸ್ತರು. 

"ಜಮಾದಾರ ಸಾಹೇಬರೆ, ಒಂದೆರಡು ಹಾಡು ಹಾಡ್ಬಹುದೆ?" ಎಂದು ಕಣ್ಣ ಗಟ್ಟಿಯಾಗಿ ಕೇಳಿದ.

      ಆದರೆ ಅಲ್ಲಿ ಜಮಾದಾರ ಇರಲಿಲ್ಲ, ತಾನೇ ಮುಖ್ಯಸ್ಥನೆಂದು ತಿಳಿದಿದ್ದ ನಡುವಯಸ್ಸಿನ ಪೋಲೀಸನೊಬ್ಬ ಗರ್ಜಿಸಿದ: "ಕೂಡದು! ಇದೇನು ಸಂಗೀತ ಕಚೇರೀಂತ ತಿಳಿದಿರೊ?

" ಪ್ರಭು ರಾಗವೆಳೆದ:

"ಇಲ್ಲ ಸರ್, ಒಂದೇ ಒಂದು ಸಿನಿಮಾ ಹಾಡು."
 ಪೋಲೀಸರು ಸುಮ್ಮನಿದ್ದರೆಂದು, 'ಜ್ಞಾನಾಂಬಿಕಾ' ಚಿತ್ರದೊಂದು ಹಾಡನ್ನು ಕಣ್ಣ ಆರಂಭಿಸಿದ.
"ಮೆಲ್ಲಗೆ ಹಾಡು! ಹೊರಗೆ ಕೇಳಿಸ್ಬಾರದು!" ಪೋಲೀಸನ ಆಜ್ಞೆ, 
      ಮೆಲುದನಿಯಲ್ಲೇ ಹಾಡಿದ ಕಣ್ಣ, ಅದಾದ ಮೇಲೊಂದು ಜನಪದ ಹಾಡು. ಹಳ್ಳಿಯ ಬೆಡಗಿಯನ್ನು ಒಲಿಸಲು ಸೊಗಸುಗಾರನೊಬ್ಬ ಕಟ್ಟಿದ ಕವಿತೆ. ಆ ಬಳಿಕ ಒಂದರಮೇಲೊಂದು.ಹೊಸ ಕವಿಗಳ-ಹೊಸ ವಿಚಾರದ ಹಾಡುಗಳು. ಶೋಕ-ಸಂತಾಪದ, ಕ್ರೋಧ-ಆಹ್ವಾನದ ಗೀತೆಗಳು. ಸ್ವರವೇರಿತು. ಕಿಟಕಿಗಳಿಂದ ಹೊರಬಿದ್ದು,ಚಲಿಸುತ್ತಿದ್ದ ಗಾಡಿಗೆ ಹಿಮ್ಮುಖವಾಗಿ ಅದು ಹರಿಯಿತು,ಹಾದಿ ತಿರುಗಿಕೊಳುತ್ತಿದ್ದಲಿ ಇತರ ಪ್ರಯಾಣಿಕರಿಗೂ ಕೇಳಿಸಿತು-ಒಳಗೆ ಸಂಕೋಲೆಗಳಲ್ಲಿ ಬಂಧಿತರಾಗಿದ್ದವರನ್ನು ಒಂದಾಗಿ ಬೆಸೆಯಿತು.
ಇಬ್ಬರು ಮೂವರು ಪೋಲೀಸರು ಕೂಗಿದರು:
"ಇನ್ನು ಸಾಕು!"
"ಆಗಲಿ,ಕೊನೇದು ಒಂದೇ."

" ಅದು ಮುನ್ನಡೆಯ ಗೀತ. ಕಣ್ಣನ ಕಂಠದೊಡನೆ ಎಲ್ಲ ಕೈದಿಗಳ ಸ್ವರಗಳೂ