“ನ್ಯಾಯದಿ ಹಾದಿ" ಎಂದು ಧಾಂಡಿಗ ಮಾಸ್ತರ ಮಾತಿಗೆ ಭಾಷ್ಯ ನುಡಿದ. ಬೀದಿಯ ಅಂಗಡಿಗಳಿಂದಲ್ಲ ಈ ಮೆರವಣಿಗೆಯನ್ನು ಜನ ನೋಡಿದರು. ಕಯ್ಯೂರಿನ ಆ ರೈತರಿಗಿದು ಅಪರಿಚಿತ ಊರು, ಅರ್ಥವಾಗದ ಭಾಷೆ, ನೋಡುತ್ತಿದ್ದವರೆಲ್ಲ ತಮಗಿಂತ ಭಿನ್ನರಾಗಿದ್ದ ಜನರು.
ತುಳು-ಕೊಂಕಣಿ-ಕನ್ನಡ ಭಾಷೆಗಳಲ್ಲಿ ಸುತ್ತುಮುತ್ತಲಿನಿಂದ ಮಾತುಗಳು ಕೇಳಿಸಿದುವು:
“ಇವರು ಯಾರು?"
"ಕೆಂಪು ಬಾವುಟದವರೋ?”
"ಕಳ್ಳರೋ ಏನೋ?"
ಅದು ಅರ್ಥವಾಗುತ್ತಿದ್ದ ಮಾಸ್ತರು ಪ್ರಭುವಿಗೆ ಹೇಳಿದರು:
“ನಾವು ಕಳ್ಳರಲ್ಲಾಂತ ಕನ್ನಡದಲ್ಲಿ ಸ್ವಲ್ಪ ಹೇಳಪ್ಪ
ಬೇರೆ ಸಲಹೆಯೂ ಬಂತು.
"ಕಣ್ಣ ಒಂದು ಹಾಡು ಹೇಳಿ, ಅವರಿಗೆ ಅರ್ಥವಾಗದೆ.”
ಪ್ರಭು ಬಾಯಿ ತೆರೆಯುವುದಕ್ಕೆ ಮುಂಚೆ ಕಣ್ಣ ಹಾಡಿದ. ಅಧಿಕಾರಿ ಅವನೆಡೆಗೆ ನುಗ್ಗಿ ಆತನ ತಲೆಯ ಮೇಲೆ ಹೊಡೆದ, ಮುಖಕ್ಕೆ ಗುದ್ದಿದ. ಎರಡು ನಿಮಿಷ ಗದ್ದಲವಾಯಿತು. ಮತ್ತೆ ಶಾಂತಿ ನೆಲೆಸಿ ಮೆರವಣಿಗೆ ಜೈಲಿನತ್ತ ಸಾಗಿತ್ತು. ಆದರೆ ಅದಕ್ಕಿಂತ ಮುಂಚಿತವಾಗಿ, ಕಯ್ಯೂರಿನ ಕ್ರಾಂತಿಕಾರರನ್ನು ಸೆರೆಹಿಡಿದು ತಂದರೆಂಬ ಸುದ್ದಿ ನಗರದ ನಾಲ್ಕು ಮೂಲೆಗಳಿಗೆ ಧಾವಿಸಿತು....
ಆ ಅರವತ್ತು ಜನರಿಗೆ ಕೊಡಿಯಾಲಬೈಲಿನಲ್ಲಿದ್ದ ಸಬ್ ಜೈಲಿನ ಎತ್ತರದ ಗೋಡೆಗಳ ದರ್ಶನವಾದಾಗ ಕತ್ತಲಾಗಿತ್ತು. ಹೆಬ್ಬಾಗಿಲಿನ ಕಿಂಡಿಯೊಳಗಿನಿಂದ ಬಾಗಿಸಿ ಬಾಗಿಸಿ ಕೈದಿಗಳನ್ನು ಒಬ್ಬೊಬ್ಬರಾಗಿ ಒಳಕ್ಕೆ ತಳ್ಳಿದರು.
೫
ಸರಕಾರಕ್ಕೆ ಸಾವಿರ ಜವಾಬ್ದಾರಿ. ವಿವಿಧ ಯುದ್ಧರಂಗಗಳಿಗೆ ಭಾರತದ ಹೆಸರಿನಲ್ಲಿ ಸೈನ್ಯ-ಸಾಮಗ್ರಿ ಹೋಗಬೇಕು. ಅದನ್ನು ಸುಗಮಗೊಳಿಸಲು ಬೆಲ್ಲದಂತಹ ಮಾತನ್ನಾಡಿ ರಾಷ್ಟ್ರೀಯ ಮುಖಂಡರ ಮನ ಒಲಿಸಬೇಕು. ಅದು ಸಾಲದೆಂದು, ದೇಶದ ಹಲವು ನೂರು ಕಡೆ ಕಾನೂನು ನಮ್ಮದಿಯ ವಿಶೇಷ ರಕ್ಷಣೆ ಆಗಬೇಕು. ಸರಕಾರದ ದೃಷ್ಟಿಯಲ್ಲಿ ಕಯ್ಯೂರು ಪ್ರಕರಣಕ್ಕೆ ಅತ್ಯಂತ ಮಹತ್ವವಿತ್ತು. ಒಬ್ಬ ಪೋಲೀಸ ಸತ್ತನೆಂದೇನೂ ಅದು ತಲ್ಲಣಗೊಂಡಿರಲಿಲ್ಲ. ಸಾಮ್ರಜ್ಯಶಾಹಿಯ