ಪುಟ:Chirasmarane-Niranjana.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೩೭

    ಒಮ್ಮೆ ಮಾಸ್ತರನ್ನು ಕಾಣಲು ಬಂದಾಗ ಜೇಲರು ಕೇಳಿದರು:
    "ನಿಮ್ಮಗಿನ್ನೂ ವಿಷಯ ಗೊತ್ತಿಲ್ಲಾಂತ ತೋರ್ತದೆ."
    ಮಾಸ್ತರು ಕುತೂಹಲ ತೋರಿದರು.
    "ಇಲ್ಲ ಏನು ವಿಷಯ?"
    "ಕಲ್ಲಿಕೋಟೆಯಲ್ಲಿ ಕಯ್ಯೂರು ಕೈದಿಗಳ ರಕ್ಷಣಾ ಸಮಿತಿ ಅಂತ ಮಾಡಿದ್ದಾರೆ.
 ಪೇಪರಲ್ಲಿ ಬಂದಿದೆ."
    ಮಾಸ್ತರ ಮುಖ ಅರಳಿತು.
   "ಹಾಗೇನು?"
   "ಸಮಿತಿಯವರು ಪ್ರಖ್ಯಾತ ವಕೀಲರನ್ನು ನೇಮಿಸ್ತಾರಂತೆ. ಅಂತೂ ಪ್ರಚಂಡರು
 ನೀವು.ಈ ಊರಲ್ಲಿ ಗೋರಿ ತೋಡಿದರೆ ಇನ್ನೆಲ್ಲೋ ಪ್ರತ್ಯಕ್ಷವಾಗ್ತೀರಲ್ಲ!"
     ಮಾಸ್ತರು ನಕ್ಕರು:
   "ಸ್ವಲ್ಪ ಆ ಪೇಪರು ಕಳಿಸ್ತೀರಾ?"
   ಜೇಲರು ಭುಜ ಕುಣಿಸಿ ಹೇಳಿದರು:
   "ಇಲ್ಲ, ಅದೊಂದು ವಿಷಯ ಕೇಳ್ಬೇಡಿ:
   ...ಹಾಗೆ ಹೇಳಿದವರು ಒಂದು ಇಂಗ್ಲಿಷ್ ಪೇಪರಿನೊಡನೆ ಸಂಜೆ ಬಂದು,
 ಅದನ್ನು ಮಾಸ್ತರಿಗೆ ಕೊಟ್ಟರು.
    "ಕೊನೇ ಕಾಲಮಿನಲ್ಲಿದೆ,ಓದಿ ನೋಡಿ."
    "ಅಲ್ಲಿದ್ದುದು ಒಟ್ಟು ನಾಲ್ಕೇ ಸಾಲು.ಜೇಲರು ಎಷ್ಟು ಹೇಳಿದ್ದನೋ ಅಷ್ಟೆ.
 ಅದನ್ನೋದಿ ಬೇರೆಯೂ ಪುಟಗಳತ್ತ ಒಂದು ನಿಮಿಷ ಕಣ್ಣೋಡಿಸಿ ಪತ್ರಿಕೆಯನ್ನು
 ಮಾಸ್ತರು ಹಿಂದಿರುಗಿಸುತ್ತ "ಥ್ಯಾಂಕ್ಯಾ!" ಎಂದರು.
         ಜೇಲರು ಬಾಯ್ದೆರೆಯಾಗಿ ಹೇಳಿದ್ದ ವಾರ್ತೆಯನ್ನು ತಿಳಿದೇ ಕೈದಿಗಳಿಗೆ
    ಸಂತೋಷವಾಗಿತ್ತು.ಪತ್ರಿಕೆಯಲ್ಲಿ ಪ್ರಕಟವಾಗಿದ್ದುದು ನಿಜವೆಂದು ತಿಳಿದಾಗ
  ನೆಮ್ಮ ದಿಯಾಯಿತು."ಸಮಿತಿ ಮಾಡಿದೋರು ಯಾರು? ಯಾರ ಹೆಸರಿದೆ?" ಎಂದು
 ಎಲ್ಲರೂ ಕೇಳಿದರು.
       ಧಾಂಡಿದ ಹೇಳಿದ:
      "ಆ ವಿವರವೆಲ್ಲ ಪತ್ರಿಕೆಯಲ್ಲಿ ಹಾಕ್ತಾರೇಂತ ತಿಳಿದಿರೇನು? ನಮ್ಮ ಸುದ್ದಿ
  ಯಾವಾಗಲೂ ಕೊನೇ ಪುಟದ ಕೊನೇಲೇ..."
   ...ಆದಾದ ಸ್ವಲ್ವ ದಿನಗಳಲ್ಲೇ ಕಯ್ಯೂರಿನ ಮೊಕದ್ದಮೆಯ ವಿಜಾರಣೆಗಾಗಿ
  ವಿಶೇಷ ನ್ಯಾಯಾದೀಶರೊಬ್ಬರ ನೇಮಕವಾಯಿತೆಂಬ ವಾರ್ತೆ ಬಂತು.