ಪುಟ:Chirasmarane-Niranjana.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೩೮ ಚಿರಸ್ಮರಣೆ

      "ಇನ್ನು ವಿಚಾರಣೆ ತಡವಾಗಲಾರದು;ಅಲ್ಲವಾ ಮಾಸ್ತರೆ" ಎಂದು ಕುಂಞಂಬು
  ಕೇಳಿದ.
       "ತಡವೇನೋ ಆಗಲಾರದು.ಆದರೆ ಇದೊಂದೇ ನ್ಯಾಯಸ್ದಾನದಲ್ಲಿ
  ಮುಗೀತದೇಂತ ತಿಳೀಬೇಡಿ.ಇದು ಒಂದಂಕದ ನಾಟಕ ಅಲ್ಲವೇ ಅಲ್ಲ" ಎಂದರು
 ಮಾಸ್ತರು.
      ಅಂತೂ ಈ ಮೊಕದ್ದಮೆ ಬೇಗನೆ ಇತ್ಯಥವಾಗದೆಂಬುದು ಎಲ್ಲರಿಗೂ
 ಸ್ವಷ್ವವಾಯಿತು.ಸುಳ್ಳು ಹೇಳಿ,ಇಲ್ಲದ ಆಸೆ ಹುಟ್ಟಿಸಿ,ನಿರಾಸೆಯಾದಾಗ ನೋವು
 ಹೆಜಾಗಲು ಕಾರಣವಾಗುವುದರ ಬದಲು,ಕಹಿಯಾದ ನಿಜವನ್ನೇ ಹೇಳಿ ಅವರ
 ಹೃದಯಗಳನ್ನು ಮತ್ತಷ್ವು ದೃಡಗೊಳಿಸಲು ಯತ್ನಿಸುವುದೇ ಸರಿ ಎಂದು ಮಾಸ್ತರು
 ನಂಬಿದ್ದರು.
     ಬೇಸರದ ಮೋಡಗಳು ದಟ್ಟ್ಕೆಸಿದಾಗ,ಅವರಿಗೆಲ್ಲ ಸಂಕಟವಾಗುತ್ತಿತ್ತು. ಈ
 ಮಂಗಳೂರು ಕಯ್ಯೂರಿನಿಂದ ಬಲು ದೂರ.ಅಲ್ಲೇ ಎಲ್ಲಾದರೂ ಸಮೀಪದಲ್ಲಿ
 ವಿಚಾರಣೆ ನಡೆದಿದ್ದರೆ,ಸಂಬಂದಿಕರೊಡನೆ ಹೆಚ್ಚಿನ ಸಂಪರ್ಕ ಸಾದ್ಯಿವಿರುತ್ತಿತ್ತು.
 ಕಯ್ಯೂರಿನ ಕಡೆಯಿಂದ ಬೀಸುವ ಗಾಳಿಯೇ ಸಾಕಾಗುತ್ತಿತ್ತು ಅವರಲ್ಲಿ ಚೈತನ್ಯ
 ತುಂಬಲು.
      ಅಲ್ಲದೆ,ಆ ದಿನ ಬಂದಿಸಿದಾಗ,ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದ ಕೆಲ ರೈತರನ್ನೂ
  ಹಿಡಿದಿದ್ದರು. ಈಗ ಅವರ ವಿಷಯದಲ್ಲಿ ವಿಶೇಷ ಗಮನ ಕೊಡುವುದು
 ಅಗತ್ಯವಾಯಿತು.ಪ್ರಮುಖರಲ್ಲ ಅವರ ಜತೆಯಲ್ಲೇ ಹೆಚ್ಚಾಗಿ ಇರುತ್ತಿದ್ದು,
 ಅವರಲ್ಲಿ ಧೈಯವನ್ನೂ ಉತ್ಯಾಹವನ್ನೂ ತುಂಬಿದರು.
       ಅಲ್ಲಿ ಜೀವನದ ಹಲವು ರಸ ನಿಮಿಷಗಳನ್ನು ಒದಗಿಸುತ್ತಿದ್ದವನು ಧಾಂಡಿಗ,
 ಪಹರೆಯವರೊಡನೆ ಸ್ನೇಹ ಬೆಳೆಸಿ,ಊರಿನವರು ಭೇಟಿಗೆ ಬಂದಾಗ ದುಡ್ಡು
 ಕೊಡಿಸುವೆನೆಂದು ಹೇಳಿ,ದಿನಕ್ಕೊಂದು ಕಟ್ಟು ಬೀಡಿ ದೊರೆಯುವಂತೆ ಆತ
 ಮಾಡಿದ.ಹಿಂದೆ ಅತಿಯಾಗಿ ಸೇದುತ್ತಿದ್ದ ಮಾಸ್ತರು ಈಗ ಮುಟ್ಟುತ್ತಲೇ ಇರಲಿಲ್ಲ.
 ಬೇರೆ ಕೆಲವರಿಗೆ ಸೇದುವ ಅಭ್ಯಾಸವಿರಲಿಲ್ಲ.ಅಂತೂ ಬೀಡಿ ಬೇಕೆನಿಸಿದವರಿಗೆ
 ಧಾಂಡಿಗ ನಾಯಕನಾದ.ಅತಿ ಕಡಿಮೆ ಬೀಡಿಗಳನ್ನು ಅತಿ ಹೆಚ್ಚು ಜನ-ಗುಪ್ತವಾಗಿ
 ಸೇದುವುದು ಸಾದ್ಯವಾಗುವಂತೆ ಆತ ದಕ್ಷತೆಯಿಂದ ವ್ಯವಸ್ದೆ ಮಾಡಿದ.
      ಮನುಷ್ಯನ ಅನಿವಾರ್ತ ಅವಶ್ಯಕತೆಗಳ ವಿಷಯ ದಾಂಡಿಗ  ಭಾಷಣ
  ಕೊಡುವುದಿತ್ತು.