ಪುಟ:Chirasmarane-Niranjana.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೪೩

   "ಅತ್ತೆಯೊಡನೆ ಬಂದಿದ್ದಳು ಆಕೆ.ಆ ಇಬ್ಬರು ಚಂದುವನ್ನೂ ಕಂಡರು.
 ಚಿರುಕಂಡನ ತಂದೆಯನ್ನೂ ಕಂಡರು.ತಾಯಿ ರೋದಿಸಬಹುದೆಂದು ಚಿರುಕಂಡ
 ಭಾವಿಸಿದ್ದ. ಕಂಬನಿಯೂ ವಯಸ್ಸಾದ ಆ ಕಣ್ಣುಗಳಲ್ಲಿ ಒತ್ತರಿಸಿ ಬಂದ ಹಾಗಿತ್ತು.
 ಅಷ್ಟನ್ನೆ ಸೆರಗಿನಿಂದೊತ್ತಿ ಆಕೆ ಹಿಂದಕ್ಕೆ ತಳ್ಳಿದಳು....ಇನ್ನು ಏಕಾಕಿನಿಯಾಗಿ ಆ
 ಹೆಂಡತಿ ಪಡುತ್ತಿದ್ದ ಸುಖವೊ!
    ಚಿರುಕಂಡನಿಗೆ ಹಿಡಿಸಲಾರದ ದು ಖವಾಯಿತು.ಆದರೆ ಅದನ್ನಲ್ಲ ಹತ್ತಿಕ್ಕಿ
  ಅತ ನಗುನಗುತ್ತ ಮಾತನಾಡಿದ.
     .....ಸುಮ್ಮ ನಿರುವಾಗಲೂ ನಗುವಂತೆಯೇ ಕಾಣುತ್ತಿದ್ದ ವಕೀಲರೂ ಬಂದು
  ಕರಪತ್ರಗಳ ವಿಷಯ ಹೇಳಿದರು.
     "ನಿಮ್ಮವರು ಧೈರ್ಯವಂತರು! ಇಷ್ಟೊಂದು ದಬ್ಬಾಳಿಕೆ ನರಬೇಟೆ ಎಲ್ಲಾ
  ಕಡೆ ನಡೀತಿದ್ದರೂ ಚಟುವತಿಕೆ ಸಾಗಿಸ್ತಾನೆ ಇದ್ದಾರಲ್ಲಾ!"
    ಹಾಗೆ, ಎಲ್ಲಿಯೋ ಇದ್ದ ಯಾರನ್ನೋ ಹೊಗಳಿದ್ದರು ವಕೀಲರು. ಆದರೆ
  ಅಲ್ಲಿ ಬಂಧಿತರಾಗಿದ್ದ ಅವರೆಲ್ಲರಿಗೆ ಅದರಿಂದ ಸಂತೋಷವೆನಿಸಿತು.
    ...ಅಂತೂ ಕೊನೆಗೊಮ್ಮೆ ವಿಚಾರಣ್ಣೆ ಶುರುವಾಯಿತು.ಜೈಲಿನಿಂದ ಕಯ್ಯೂರು
  ರೈತರು ಕೊಡಿಯಾಲಬೈಲಿನ ದಾರಿಯಲ್ಲಿ ಹಂಪನಕಟ್ಟೆ ಸೇರಿ ಮೈದಾನ ದಾಟಿ,
  ಕೆಂಪ್ಪುಗೋಡೆಯ ಕೆಂಪ್ಪು ಹಂಚಿನ ತಗ್ಗಾದ ಛಾವಣಿಯ ನ್ಯಾಯಾ ಸ್ಧಾನದತ್ತ
  ಸಾಗಿದರು.
    ಅಲ್ಲಿ ನಡುವಯಸ್ಸಿನ ಕುಳ್ಳನೆಯ ನ್ಯಾಯಾಧೀಶರೊಬ್ಬರು ಯಾವನೋ
  ನರೆಗೂದಲಿನ ಉಪಾಧ್ಯಾಯನಂತೆ ತಮ್ಮ ಎತ್ತರದ ಸ್ಧಾನದಲ್ಲಿ ಕುಳಿತರು..
  ಅವರೆದುರು ಆರು ಸಾಲುಗಳಲ್ಲಿ ಕೈದಿಗಳು ನಿಂತರು. ಗದ್ದಲವೇ ಇಲ್ಲದ
  ವಾತಾವರಣ. ಮಳೆಗಾಲದ ಕೊನೆಯಲ್ಲಿ ಕಣುತ್ತಿದ ಬಿಸಿಲು, ಸೆಕೆ,ಬೆವರು.
  ಬಾಗಿಲ ಆಚೆಗೆ ಇದ್ದ ಜವಾನ ರಾಟೆಯ ಹಗ್ಗವನ್ನೆಳೆಯತೊಡ್ಗಿದ.ನ್ಯಾಯಾಧೀಶರ
  ಮೇಲುಗಡೆ ಅರಿವೆಯ ಜಾಲರಿ ಪಂಕ ಚಲಿಸಿತು.ನ್ಯಾಯಾಧೀಶರ ಹಿಂಬದಿಯಲ್ಲಿ
  ಗೋಡೆಯನ್ನಲಂಕರಿಸಿತ್ತು, ಗತಿಸಿದ ವಿಕ್ಟೋರಿಯಾ ರಾಣಿಯ ಭಾವಚಿತ್ರ. ಕೆಳಗೆ
  ನ್ಯಾಯಾಧೀಶರೆದುರಲ್ಲಿ ಒಂದೆಡೆ ಪೋಲೀಸ್ ವಕೀಲರು, ಪೋಲೀಸ್ ಅಧಿಕಾರಿ;
  ಇನ್ನೊಂದಡೆ ರಾಜಾರಾಯರು, ಬೇರೆ ಕೆಲಸವಿಲ್ಲದೆ ವಿಚಾರಣೆ ನೋಡಲೆಂದು
  ಬಂದಿದ್ದ ಇಬ್ಬರು ಯುವಕ ವಕೀಲರು; ಅವರ ನಡುವೆ ನ್ಯಾಯಾಸ್ಧಾನದ
  ಗುಮಾಸ್ತೆಯರು; ಕಂದು ಹಾಳೆಗಳು, ಮಸಿ ಕುಡಿಕೆ, ಲೇಖನಿ.
    ನ್ಯಾಯಾಧೀಶರು ಕೇಳಿದರು: