ಪುಟ:Chirasmarane-Niranjana.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಚಿರಸ್ಮರಣೆ

   "ಶುರು ಮಾಡೋಣವೆ?"
   ಕ್ಷೀಣ ಸ್ವರ. ಒಡಲ ಒಳಗಿಂದ ಬಂದುದಲ್ಲ. ವಿಚಾರಣೆಯ ದರ್ಪ-ವೈಭವ-
 ಭಯೋತ್ಬಾದಕ ಗಾಂಭೀರ್ಯಗಳನ್ನು ಚಿತ್ರಿಸಿ ಬಂದಿದ್ದ ಹಲವರು ಕೈದಿಗಳಿಗೆ
 ಇದೆಲ್ಲ ಸಪ್ಪೆಯಾಗಿ ತೋರಿತು. ಈ ವಿಚಾರಣೆಯಲ್ಲಿ ಹೆದರುವಂಧದೇನೂ ಇಲ್ಲ.
 ಕೆಲವು ದಿನಗಳಲ್ಲಿ ತಾವೆಲ್ಲ ಇಲ್ಲಿಂದ ಹೊರಗೆ ನಡೆದುಹೋಗಬಹುದು-ಎಂದು
 ಅವರು ಭಾವಿಸಿದರು. ಆದರೆ ಅಪ್ಪು ಮತ್ತಿತರರನ್ನು ಬೇರೆ ಸಂಕಟಗಳು
 ಬಾಧಿಸುತ್ತಿದ್ದುವು; ಇಲ್ಲಿ ತಮ್ಮವರು ಯಾರೂ ಇಲ್ಲ.ಕಯ್ಯೂರಲ್ಲೇ ಈ ವಿಚಾರಣೆ
 ನಡೆದಿದ್ದರೆ ಆಗ ಸಾಧ್ಯವಿತ್ತು,ಜನ ಬಂದು ಕಿಕ್ಕಿರಿದು ನೆರೆದ ನ್ಯಾಯಸ್ಧಾನ! ಇಲ್ಲಿ
 ಏನೂ ಇಲ್ಲ.ಬಲು ಮುಖ್ಯವಾದ ಐತಿಹಾಸಿಕವಾದ ವಿಚಾರಣೆಯೊಂದು,
 ನೋಡುವವರಿಲ್ಲದೆ ಕೇಳುವವರಿಲ್ಲದೆ ಆರಂಭವಾಗಿತ್ತು. ಮಾಸ್ತರು-ಚಿರುಕಂಡ
 ಬೇರೆ ಯೋಚನೆ ಮಾಡುತ್ತಿದ್ದರು.ಇನ್ನು ದಿನವೂ ತಾವಿಲ್ಲಿಗೆ ಬರಬೇಕು.ಅಗ
 ಕಯ್ಯೂರಿನ ತಮ್ಮವರೊಡನೆ ನಿತ್ಯ ಸಂಪರ್ಕ ಬೆಳೆಸಲು ತಾವೇನಾದರೂ
 ಮಾಡಬಹುದೆ? ಇಲ್ಲಿ ಯರೂ ಬಂದೇ ಇಲ್ಲವೆ?ಕಟ್ಟಡದ ಹೊರಗೆ ಅಲ್ಲಿ
 ಇಲ್ಲಿ ಕೆಲವರಿದ್ದರು.ಅವರಲ್ಲಿ ಕೆಲ್ಲವರು ಗೂಢಚಾರರಿರಬಹುದು.ಉಳಿದವರು?
 ಪೋಲೀಸರಿಗೂ ಅಂಜದೆ ಇಲ್ಲಿ ತಮ್ಮೊಡನೆ ಮಾತನಾಡಬಲ್ಲವರು ಯರು-
 ಯರು?
    ಇದುಕಯ್ಯೂರು ಪೋಲೀಸು ಕೊಲೆ ಮೊಕದ್ದಮೆ.
    ಶಾಲೆಯಲ್ಲಿ ಹಾಜರಿ ತೆಗೆದುಕೊಳ್ಳುವ ಹಾಗೆ ಅರವತ್ತು ಕೈದಿಗಳ
  ಹೆಸರುಗಳನ್ನೂ ಓದಿದ್ದಾಯಿತು.ಮುಂದಿನ ಎರಡು ಹೆಸರುಗಳನ್ನು ನ್ಯಾಯಾಸ್ಧಾನದ
  ಗುಮಾಸ್ತೆ ಓದಿದಾಗ,ಕೆಲ ಕೈದಿಗಳು ಪರಸ್ವರ ಮುಖ ನೋಡಿಕೊಂಡು ನಸುನಕ್ಕರು.
    ಇಂಗ್ಲೀಷಿನಲ್ಲಿ ನ್ಯಾಯಾದೀಶರೆಂದರು:
    "ಅಪಾದನೆಯ ವಿವರನ್ನೋದಿ."
    ಅಷ್ಟು ಜನರ ಮೇಲೆ ಸರಕಾರದ ಪೋಲೀಸರು ನ್ಯಾಯಾಸ್ಧಾನಕ್ಕೆ ಕೊಟ್ಟ ದೂರು.
  ಸರಕಾರಿ ವಕೀಲರು ಮೂವತ್ತು ನಾಲ್ವತ್ತು ಪುಟಗಳಷ್ಟು ಬರೆದು ತಂದಿದ್ದುದನ್ನು
  ನಿಧಾನವಾಗಿ ಒಂಟಿ ಧ್ವನಿಯಲ್ಲಿ ಓದತೊಡಗಿದರು.ಇಂಗ್ಲಿಷ್ ಭಾಷೆ.
     ಕೈದಿಗಳ ಪರ ವಕೀಲರು ಆಕ್ಷೇಪವೆತ್ತಿದರು:
     "ಇದಕ್ಕೆ ನನ್ನ ಆಕ್ಷೇಪವಿದೆ, ಖಾವಂದರೆ.ಆಪಾದನೆಯ ವಿವರ ಏನು
  ಎಂಬೋದು ಆರೋಪಿಗಳಿಗೆ ಅರ್ಧವಾಗ್ತಾ ಇಲ್ಲ."
    "ನೀವು ವಿವರಿಸಬಹುದಲ್ಲಾ!"ಎಂದರು ನ್ಯಾಯಾಧೀಶರು.