ಪುಟ:Chirasmarane-Niranjana.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೪೫

   "ಮೂಲ ವಿಷಯ ಏನಂಬೋದು-ಆ ಒಕ್ಕಣೆ-ಇದ್ದಕ್ಕಿದ್ದ ಹಾಗೇ ಕೈದಿಗಳಿಗೆ
 ಅರ್ಥವಾಗಬೇಕಾದ್ದು ಆಗತ್ಯ ಖಾವಂದರೆ."
   "ಮಲೆಯಾಳದಲ್ಲಿ ವಿಷಯ ಕೊಟ್ಟರೆ ನಮಗೆ ಅರ್ಥವಾಗದಲ್ಲ!"
   ರಾಜರಾಯರು ಸಮ್ಮನಿದ್ದರು.ಅದನ್ನು ಕಂಡು ನ್ಯಾಯಾಧೀಶರು ಹೇಳಿದರು:
   "ಹೊಸದಾಗಿ ಈ ಸಲ ನೀವು ಹೇಗೆ ಹೇಳ್ತಿರೋದು ಆಶ್ಚರ್ಯವೇ!
 ಇಂಗ್ಲಿಷಿನಲ್ಲಿ ನಾವು ದಾಖಲೆಗಳನ್ನು ಬರೆದಿಡೋದು ಪದ್ಧತಿ,ನಿಮ್ಮ ಆಕ್ಷೇಪವನ್ನು
 ತಳ್ಳಿಹಾಕಿದೆ!"
    ಪೋಲೀಸು ವಕೀಲರತ್ತ ನೋಡಿ,"ಮೂಂದುವರಿಸಿ"ಎಂದು ನ್ಯಾಯಾಧೀಶರು
 ಸೂಚನೆ ಇತ್ತರು.
    ಮತ್ತೆ ನಿಧನವಾದ ಒರಟು ಧ್ವನಿ ಕೀಳಿಸಿತು.
    ರಾಜಾರಾಯರು ನಗುತ್ತ ಕುಳಿತರೂ ಹೆಚ್ಚಿನ ಕೈದಿಗಳು ತಮಗೆ
 ಸೋಲಾಯಿತೆಂದು ಸಿಟ್ಟಾದರು.ಮೊದಲ ಸಾಲಿನಲ್ಲೇ ಇದ್ದ ಅಪ್ಪು ಈ
 ಪ್ರಹಸನವನ್ನು ಕಂಡು ತುಚ್ಛೀಕಾರದ ನೋಟ ಬೀರುತ್ತ, ಎಡಕ್ಕೂ ಬಲಕ್ಕೂ
 ಸುತ್ತಲೂ ನೋಡಿದ.
    ನ್ಯಾಯಾಧೀಶರು ಕುರ್ಚಿಯ ಬೆನ್ನಿಗೊರಗಿ,ಅದರ ಕೈಗಳ ಮೇಲೆ ತಮ್ಮ
 ಮೊಣಕ್ಕೆಗಳನ್ನಿಟ್ಟರು.ಬಲ ಅಂಗೈಯ ಮೇಲೆ ಗಲ್ಲವನ್ನೂರಿದರು.ಈಗ ಅವರು
 ಮತ್ತೂ ಕುಳ್ಳಾಗಿ ತೋರಿ,ಕುರ್ಚಿಯ ಮೇಲಿರಿಸಿದ ಕರ್ಪೂರದ ಬೊಂಬೆಯಂತೆ
 ಕಂಡರು.
   ಆ ವಿವರದಲ್ಲಿ,ಕಯ್ಯೂರು ಘಟನೆಯನ್ನು ಕುರಿತು ಪುನಃಪುನಃ ಬೇಸರ
 "ಹುಟ್ಟಿಸುವಂತೆ ಬರೆದ ವರದಿಗಳಿದ್ದುವು.ಸರ್ಕಾರವನ್ನು ಉರುಳಿಸುವುದಕ್ಕೂ
 ಜಮೀನ್ದಾರರನ್ನು ಕೊಲೆಮಾಡುವುದಕ್ಕೂ ನಡೆಸಿದ ಒಳಸಂಚಿನ ಕತೆಯಿತ್ತು.ಈ
 ಪಿತೂರಿಯಲ್ಲಿ ಕಯ್ಯೂರಿನವರು ಮಾತ್ರವಲ್ಲದೆ ಸುತ್ತುಮುತ್ತಲಿನ ವಿಸ್ತಾರ
 ಪ್ರದೇಶದ ಜನರೂ ಪಾಲುಗೊಂದಿದ್ದರೆಂಬ ಅಂಶವಿತ್ತು...
    ರಾಜಾರಾಯರ ಹೊರತಾಗಿ ಆ ಫಿರ್ಯಾದು ಏನೆಂದು ಪೂರ್ಣ ತಿಳಿದವರು
  ಮಾಸ್ತರೊಬ್ಬರೆ.ಅವರು ಪ್ರತಿಯೊಂದು ಅಂಶವನ್ನೂ ಕಿವಿಗೊಟ್ಟು ಕೀಳಿದರು.
  ಉಳಿದವರು ಬೇಸರಗೊಂಡು ಆಕಳಿಸಿದರು.ಬೇಡಿಗಳನ್ನು ಬಿಚ್ಚಿದ್ದ ಕೈಗಳನ್ನೆತ್ತಿ
  ಗಡ್ಡ ತಲೆಗಳನ್ನು ತುರಿಸಿಕೊಂಡರು.
    ವಿರಾಮದ ಹೊತ್ತಿಗೆ ಅದನ್ನೋದುವುದು ಮುಗಿಯಿತು.ಆದರೆ ಬೆಳಗ್ಗೆ ಗಂಜಿ
  ಕುಡಿದು ಬಂದಿದ್ದ ಕೈದಿಗಳು,ಸಶಸ್ತ್ರ ಪೋಲೀಸರ ಸರ್ಪಗಾವಲಿನಲ್ಲಿ