ಪುಟ:Chirasmarane-Niranjana.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ೨೪೬                                                                         ಚಿರಸ್ಮರಣೆ
 ನ್ಯಾಯಾಸ್ಧಾನದ ನೆಲದ ಮೇಲೆ ಕುಳಿತರು.
    ಮಾಸ್ತರೊಡನೆ ಎರಡು ನಿಮಿಷ ಮಾತನಾಡಿ ರಾಜಾರಾಯರು ಹೊರ ಹೋಗಿ
 ಚಹ ಕುದಿದು ಬಂದರು.
    ಮತ್ತೊಮ್ಮೆ ನ್ಯಾಯಾಧೀಶರು ವೇಗವಾಗಿ ಪುಟ್ಟ ಹೆಜ್ಜೆಗಳನ್ನಿಡುತ್ತ
  ವೇದಿಕೆಯನ್ನೇರಿದಂತೆ,ಕೈದಿಗಳೆಲ್ಲ ಎದ್ದು ನಿಂತರು.ಅಭ್ಯಾಸಬಲದಿಂದ
  ಅಬೂಬಕರ್ ತಾವು ನಿಂತ ಸಾಲು ಸರಿಯಾಗಿದೆಯೇ ಎಂದು ನೋಡಿದ.
     ಬಳಿಕ ನಡೆದುದು ಪೋಲೀಸ್ ಅಧೀಕಾರಿಯ ಸಾಕ್ಷ್ಯ.ಆತ,ಧೂರ್ತನಾಗಿ
   ಕ್ರೂರಿಯಾಗಿ ಕಯ್ಯೂರಿನಲ್ಲಿ ವರ್ತಿಸಿದ್ದ ವ್ಯಕ್ತಿ.ಸರಕಾರವನ್ನು ರೈತರ
   ಬಂಡಾಯದಿಂದ ಪಾರುಮಾಡಿದ ವೀರ ತಾನೆಂಬ ಅಹಂಭಾವದ ನೋಟದಿಂದಲೆ
   ಆತ ನ್ಯಾಯಾಧೀಶರು ಮತ್ತು ವಕೀಲರ ಕಡೆ ನೋಡಿದ.ಅಲ್ಲಿ ಬಂದು ಹಾಗೆ 
   ಹೇಳಿಕೆ ಕೊಡಲು ತಾನು ಉದಾರ ಮನಸ್ಸಿನಿಂದ ಒಪ್ಪಿಕೊಂಡ ಮಹನ್
   ವ್ಯಕ್ತಿಯೆಂಬಂತೆ ವರ್ತಿಸಿದ.
     ಈಗ ನ್ಯಾಯಾಧೀಶರು ಮೇಜಿನ ಮೇಲೆ ಬಾಗಿ,ಸರಕಾರಿ ವಕೀಲರ
   ಪ್ರಶ್ನೆಗಳಿಗೆಲ್ಲ ಪೋಲೀಸ್ ಅಧಿಕಾರಿ ಕೊಟ್ಟ ಉತ್ತರಗಳನ್ನು ತಾವೂ ಬರೆದು
   ಕೊಂಡರು.
     ಅಷ್ಟುಹೊತ್ತಿಗಾಗಲೆ ಸಂಜೆಯಾಯಿತು.ಆ ದಿನದ ವಿಚಾರಣೆ ಮುಗಿದು,
  ಕೈದಿಗಳು ಮತ್ತೆ ನಗರದ ಬೀದಿಗಳನ್ನು ಹಾದು ಜೈಲು ಸೇರಿದರು.
    ...ಮಾರನೆಯ ದಿನ ಆರೋಪಿಗಳ ಕಡೆ ವಕೀಲರು ಪೋಲೀಸ್
  ಅಧಿಕಾರಿತಯನ್ನು ಕುರಿತು ಪಾಟೀಸವಾಲು ನಡೆಸಿದರು.ರಾಜಾರಾಯರು ಕುಣಿ
  ಕುಣಿದು ಪ್ರಷ್ನೆಯ ಬಾಣಗಳನ್ನೆಸೆಯುತ್ತಿದ್ದ ವೈಖರಿ,ಅಧಿಕಾರಿ ಸಿಟ್ಟಿಗೆದ್ದು ಆತನ
  ಕರಿಯ ಮುಖ್ಯವೂ ಕೆಂಪಗಾಗುತ್ತಿದ್ದುದು,ನೋಡುವ ಹಾಗಿದ್ದುವು.
  ಅದೇನೆಂಬುದೆಲ್ಲ ಅರ್ಥವಾಗದಿದ್ದರೂ ಕೈದಿಗಳು ಬೇಸರಗೊಳ್ಳದೆ
  ಉತ್ಸಾಹದಿಂದಲ್ಲೇ ಇದ್ದರು.ಕೋಳಿಯ ಅಂಕದಲ್ಲಿನ ಪ್ರೇಕ್ಷಕರಾದರು ಅವರು.
  ಸರಕಾರಿ ವಕೀಲ ದುಗುಡದಿಂದ ಮಾತನಾಡಿದಾಗಲೆಲ್ಲ ಕೈಚಪ್ಪಾಳೆ ತಟ್ಟೋಣವೆ
  ಎನ್ನುವಷ್ಟು ಆ ಪ್ರೇಕ್ಷಕರು ಸಂತೋಷಪಟ್ಟರು.
    ಆ ಸಂಜೆ, ಸಾಕ್ಶ್ಯಗಳನ್ನು ತರಲು ಹತ್ತ್ತುದಿನಗಳ ಅವಧಿ ಬೇಕೆಂದು ಸರಕಾರಿ
  ವಕೀಲರು ನ್ಯಾಯಸ್ಧಾನವನ್ನು ಕೀಳಿಕೊಂಡರು.
    ರಾಜಾರಾಯರ ಆಕ್ಷೇಪವನ್ನು ತಳ್ಳಿಹಾಕಿ ಸರಕಾರಿ ವಕೀಲರ ಅಪೇಕ್ಷೆಯನ್ನು
  ನ್ಯಾಯಸ್ಧಾನ ಮಂಜೂರು ಮಾಡಿತು.