ಪುಟ:Chirasmarane-Niranjana.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

  ರಾಜಾರಾಯರು ಎದುರು ಪಕ್ಷದವರಿಗೆ ತಮ್ಮ ತೊಂದರೆಗಳ ಗುಟ್ಟು ಬಿಡದೆ ಇದ್ದರೂ ಮಾಸ್ತರು-ಚಿರುಕಂಡ–ಅಪ್ಪು ಇವರೊಡನೆ ಸಪ್ಪೆಮೋರೆಯಿಂದ ಮಾತಾಡಿದರು.
  "ಸೆಷನ್ನ್ ನಲ್ಲಿ ನೋಡಿಕೊಳ್ಳೋಣ.ನಮ್ಮ ಸಾಕ್ಷಿಗಳನ್ನು ಸೆಷನ್ಸ್ ಗೆ ತರ್ತೇವೇಂತ ಹೇಳ್ತೇನೆ, ಆಗದೆ?"
  ಬೇರೆ ಯಾವ ಹಾದಿಯೂ ಇಲ್ಲದೇ ಮಾಸ್ತರೆಂದರು: 
   "ಹಾಗೇ ಮಾಡಿ."
   ಆದರೆ ಒಂದು ತಮಾಷೆ ನಡೆಯಿತು. ತಮ್ಮ ಕೆಲಸ ಸುಲಭವಾಗಲೆಂದು ನ್ಯಾಯಾಧೀಶರು ರಾಜಾರಾಯರನ್ನು ಕರೆದು ಹೇಳಿದರು:
  "ಯಾಕಪ್ಪಾ ಸುಮ್ಮನೆ ಉದ್ದ ಬೆಳೆಸ್ತೀರಾ? ಸೆಷನ್ಸ್ ಗೆ ದಾಟಿಸಿದರೆ ಮುಗಿದು ಹೋಯ್ತು ನನ್ನ ಕೆಲಸ; ಅಲ್ಲಿ ಏನು ಬೇಕಾದರೂ ಮಾಡ್ಕೊಳ್ಳಿ. ಡಿಫೆನ್ಸ್ ಸಾಕ್ಷಿಗಳನ್ನು ಇಲ್ಲಿಗೇ ತರಬೇಕೂಂತ ಯಾಕೆ ಹಟ ಹಿಡಿತೀರಿ?ನಿಮ್ಮವರಿಗೆ ಸ್ವಲ್ಪ ಹೇಳಿ. ಎಲ್ಲರೂ ಸೇರಿ ಇದನ್ನು ಬೇಗನೆ ಮುಗಿಸೋಣ."
  ರಾಜಾರಾಯರು ಈ ಸಲ ಮನಸ್ಸಿನೊಳಗೇ  ನಕ್ಕು, ಒಂದು ಕ್ಷಣ ಗಂಭೀರವಾಗಿದ್ದು ಯೋಚಿಸಿದವರಂತೆ ನಟಿಸಿ ಅಂದರು:
  "ಆಗಲಿ, ಹಾಗೇಂತ ತಮ್ಮ ಅಪೇಕ್ಷೆಯಾದರೆ ನನ್ನ ಆಕ್ಷೇಪವಿಲ್ಲ!" ....ನ್ಯಾಯಸ್ಥಾನ  ಆಪಾದನೆಗಳನ್ನು ರೂಪಿಸಿತು. 
  ಮತ್ತೊಂದು ದಿನ ರಾಜಾರಾಯರ 'ಆಕಸ್ಮಿಕ'ದ ವಾದ ನಡೆಯಿತು. ಅದನ್ನು ಸಮರ್ಥಿಸಿ, ತಾವು ಅಪರಾಧಿಗಳಲ್ಲವೆಂದು ಕೈದಿಗಳು ಕೊಟ್ಟ ಹೇಳಿಕೆ ದಾಖಲಾಯಿತು.
  ಕಯ್ಯೂರು ಪೋಲೀಸ್ ಕೊಲೆ ಮೊದ್ದಮೆಯನ್ನು 'ಸೆಷನ್ಸ್'ನ್ಯಾಯಸ್ಥಾನಕ್ಕೆ ಒಪ್ಪಿಸಿ,ವಿಶೇಷ ನ್ಯಾಯಾಧೀಶರು ಆಜ್ಞೆ ಬರೆದರು. 
  ....ಆ ಆಜ್ಞೆ ಏನೆಂಬುದನ್ನು ಮಾಸ್ತರು ವಿವರಿಸಿದಾಗ ಕೋರನೆಂದ: "ಇನ್ನೊಂದು ಕೋರೋಟಿನಲ್ಲಿ ಇದೇ ನಾಟಕ ಪುನಃ ಆಡ್ಬೇಕಾ?ಥೂ ಇವರ! ಇದೆಂಥ ವಿಚಾರಣೆಯೋ!"
                                
                                     ೭ 

ಆ ವರ್ಷ ಒಣಂ ಹಬ್ಬಕ್ಕೆ ಊರಿಗೆ ಮರಳುವೆವು ಎಂದು ಹೇಳಿದ್ದ ಅಪ್ಪು, ಮೊದಲ ಬಾರಿ ತನ್ನ ತಮ್ಮ ಭೇಟಿಗೆ ಬಂದಿದ್ದಾಗ. ಆದರೆ ಕಯ್ಯೂರಿನಲ್ಲಿ ಈ ಸಾರೆ,ಅಪ್ಪು.