ಪುಟ:Chirasmarane-Niranjana.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೪೮ ಚಿರುಕಂಡರಾಗಲೀ ಅವರ ಸಂಗಡಿಗರಾಗಲೀ ಇಲ್ಲದೆಯೇ ಹಬ್ಬ ಕಳೆಯಿತು.ಕಯ್ಯೂರು ಚೇತರಿಸಿಕೊಂಡಿತ್ತು ನಿಜ. ಪತ್ರಿಕೆಯೋದುವ,ಚರ್ಚಿಸುವ,'ಸಾಹಿತ್ಯ'ವನ್ನು ಪ್ರಸಾರಮಾಡುವ ಚಟುವಟಿಕೆಗಳು ಗುಪ್ತವಾಗಿ ಮತ್ತೆ ನಡೆಯುತ್ತಿದ್ದುದೂ ನಿಜ. ಆದರೂ ತಮ್ಮವರೇ ಆದ ಅರವತ್ತು ಜನರಿಲ್ಲದೆ ಕಯ್ಯೂರು ಬಡವಾಗಿತ್ತು.

 .... ಆ ಆರವತ್ತು ಜನ ಮಂಗಳೂರಿನ ಸೆರೆಮನೆಯಲ್ಲಿ ದಿನಕಳೆಯುತ್ತಿದ್ದರು, ಮೇಲಿನ ನ್ಯಾಯಸ್ಥಾನದ ವಿಚಾರಣೆಯನ್ನು ಇದಿರುನೋಡುತ್ತ. ಆ ದಿನ ಒಂದಲ್ಲ ಕಾರಣಕ್ಕಾಗಿ ಮುಂದೆ ಬೀಳುತ್ತಿತ್ತು. ಇನ್ನೇನು ವಿಚಾರಣೆ ಮೊದಲಾಗಬೇಕು ಎನ್ನುವಷ್ಟರಲ್ಲಿ ವೃದ್ದ ನ್ಯಾಯಾಧೀಶರು ನಿವೃತ್ತಿಗೆ ಮುನ್ನ ರಜೆ ಪಡೆದರು. ಬಳಿಕ ಕ್ರಿಸ್ಮಸ್ ಬಂತು. ಹೊಸ ವರ್ಷದಲ್ಲಿ ಹೊಸ ನ್ಯಾಯಾಧೀಶರು ತಡವಾಗಿ ಬಂದರು. ಬಂದವರೂ ಮೊದಲು, ಬೇರೆ ಮೂರು ನಾಲ್ಕು ಮೊಕದ್ದಮೆಗಳನ್ನು ಮುಗಿಸಿದರು.
  ಈ ಸಲ ಕಯ್ಯೂರು ಕೈದಿಗಳು ನ್ಯಾಯಸ್ಥಾನ ಸೇರಿದುದು ಬೆಟ್ಟವನ್ನೇರ. ಅದು ಬಾವುಟ ಗುಡ್ಡ, ಅಲ್ಲಿ ನಿಂತರೆ, ಮರಗಳ ಕೆಳಗೆ ವಿರಮಿಸುತ್ತಿದ್ದ ಉದ್ಯಾನದ ಊರಿನಂತಿತ್ತು ಮಂಗಳೂರು. ಪಶ್ಚಿಮದಲ್ಲಿ, ವಿಶಾಲವಾದ ಬೋರ್ಗರೆಯುವ ನೀಲಿ ಸಮುದ್ರ, ಅಂತೂ ಆ ಜಾಗ ನ್ಯಾಯದಾನದ ಕೈಲಾಸ ಪರ್ವತವೇ!
  ಕೈದಿಗಳಿಗೆ ಈ ಅನುಭವ ಹಿಂದಿನದಕ್ಕಿಂತ ಭಿನ್ನವಾಗಿತ್ತು, ಇಲ್ಲಿ ಹೆಚ್ಚು ಚಟುವಟಿಕೆಯನ್ನು ಅವರು ಕಂಡರು. ಮೊದಲ ದಿನ ಆ ಊರಿನ ವಿದ್ಯಾರ್ಥಿಗಳು, ಬೇರೆ ಹಲವರು, ಕೆಲ ಕಾರ್ಮಿಕರು, ಕಯ್ಯೂರಿನಿಂದ ಬಂದಿದ್ದ ಕೆಲವರು ರೈತರು, ನ್ಯಾಯಸ್ಥಾನದ ಹೊರಗೆ ಗುಂಪುಕಟ್ಟಿನಿಂತ ಪ್ರೇಕ್ಷಕರಾದರು. ಪತ್ರಿಕಾಪ್ರತಿನಿಧಿಗಳೂ ಅಲ್ಲಿದ್ದರು.ನ್ಯಾಯಸ್ಥಾನ ಅಂದರೆ ಸರಕಾರವೇ ನೇಮಿಸಿದ ಜ್ಯೂರಿಗಳು ಬೇರೆ. ಇದರಿಂದ ವಿಚಾರಣೆಯ ಮೊದಲ ದಿನ ಕಳೆ ಕಟ್ಟಿತು.
  ಆದರೆ ಹೀಗಾದುದು ಅದೊಂದು ದಿನ ಮಾತ್ರ. ಅನಂತರದ ದಿನಗಳು ಮತ್ತೆ ಬೇಸರಕ್ಕೆ ಕಾರಣವಾದುವು. ಪ್ರೇಕ್ಷಕರು ಕಡಮೆಯಾದರು. ಅಲ್ಲಿ ನಡೆದುದೆಲ್ಲ ಹಿಂದಿನ ನ್ಯಾಯಸ್ಥಾನದ ಪುನರಾವೃತ್ತಿಯೇ.
  ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಈಗ ಮದರಾಸಿನಿಂದ ಪಿಳ್ಳೆಯೂ ಬಂದಿದ್ದರು. ಓರಣವಾಗಿ ಪೋಷಕು ಧರಿಸುವ ಅವರ ರೀತಿ, ಇಬ್ಬಾಗಮಾಡಿ ಹಿಂದಕ್ಕೆ ಬಾಚಿದ ಕ್ರಾಪು, ಸದಾ ಎಚ್ಚರವಿರುತ್ತಿದ್ದ ಕಣ್ಣುಗಳು ಎಲ್ಲರ ಗಮನವನ್ನೂ ಸೆಳೆಯುವಹಾಗಿದ್ದುವು. ರಾಜಾರಾಯರ ಜತೆ ಕೂಡಿ ದಕ್ಷತೆಯಿಂದ ಅವರು ಕೈದಿಗಳ