ಪುಟ:Chirasmarane-Niranjana.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೯ ಚಿರಸ್ಮರಣೆ ರಕ್ಷಣೆಯಲ್ಲಿ ನಿರತರಾದರು.

  ಈ ಮೇಲಣ ನ್ಯಾಯಾಧೀಶರ ಹಿಂದೆ ಗೋಡೆಯ ಮೇಲೆ, ಪಂಚಮ ಜಾರ್ಜರ ಚಿತ್ರವಿತ್ತು. ತಲೆಯ ಮೇಲುಗಡೆ ಶ್ರೀಮಂತವಾಗಿ ತೋರುತ್ತಿದ್ದ ಅರಿವೆಯ ಜಾಲರಿ ಪಂಕ. ನ್ಯಾಯಾಧೀಶರ ತುಂಬಿಕೊಂಡಿದ್ದ ಆಗಲ ಮುಖಕ್ಕಿಂತ ಹಿರಿದಾಗಿತ್ತು ಅವರ ಶುಭ್ರ ರುಮಾಲು. ಹಣೆಯ ಮೇಲೆ ಮೂರುನಾಮ. ಅವು ಮೇಲಕ್ಕೇರಿ ರುಮಾಲಿನೊಳಗೆ ಅವಿತಂತೆ ಕಾಣಿಸುತ್ತಿತು, ಯಾರು ಏನೇ ಅಂದರೂ ಅವರು, "ಹೌದು,ಹೌದು" ಎಂದು ತಲೆಯಾಡಿಸಿ ಸುಮ್ಮನಾಗುತ್ತಿದ್ದರು.
  ಈ ಸಲ ಪೋಲೀಸರ ಪರ ಸಾಕ್ಷಿಗಳ ಸಂಖ್ಯೆ ಇಳಿಮುಖಾವಾಯಿತು. ಹಿಂದೆ ಹೇಳುದುದಕ್ಕೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿಯಬಹುದೆಂಬ ಶಂಕೆಯಿಂದ, ಕೆಲವರನ್ನು ಅವರು ಬಿಟ್ಟುಬಿಟ್ಟಿದ್ದರು. ಆರೋಪಿಗಳ ಪರವಾಗಿ ಹತ್ತು ಜನ ಗಂಡಸರು ಮತ್ತು ಹೆಂಗಸರು ಸಾಕ್ಷ್ಯ ಕೊಟ್ಟರು. ಅವರ ಮಾತಿನಲ್ಲಿ ದೃಢತೆಯಿತ್ತು. ಘಟನೆಯಾದಾಗ ಆ ಜಾಗದಲ್ಲಿ ಎಷ್ಟೋ ಜನ ಆರೋಪಿಗಳು ಇರಲೇ ಇಲ್ಲವೆಂದು, ಪೋಲೀಸರ ಸಾವು ಆಕಸ್ಮಿಕವೆಂದು, ರೈತ ಸಂಘಟನೆ ಕ್ರಮಬದ್ದ ವಾಗಿತ್ತೆಂದು ವಕೀಲದ್ವಯರು ತೋರಿಸಿಕೊಟ್ಟರು.
  ಸರಕಾರ ವಕೀಲರ ಮರುಸವಾಲುಗಳಿಗೆ, ಬೆದರಿಕೆ-ಗರ್ಜನೆಗಳಿಗೆ, ఆ ಸಾಕ್ಷಿಗಳು ಯಾರೂ ಮಣಿಯಲಿಲ್ಲ.
  ಅಂತಹ ಘಳಿಗೆಯಲ್ಲೆಲ್ಲ ಹೆಚ್ಚಿನ ಕೈದಿಗಳಿಗೆ ಅನಿಸುತ್ತಿತ್ತು: "ನಮಗೆ ಜಯ ಖಂಡಿತ. ಬೇಗನೆ ನಾವೆಲ್ಲ ವಾಪಸಾಗುವುದು ಖಂಡಿತ!" ಆದರೆ ಮಾಸ್ತರು, ಚಿರುಕಂಡ, ಅಪ್ಪು ಮತ್ತಿತರರು ಮೌನವಾಗಿಯೇ ಇದ್ದರು. ಅವರು ಹೊರಗೆ ಹಸನ್ಮುಖಿಗಳಾಗಿ ತೋರುತ್ತಿದ್ದರೂ ಒಳಗೆ ಅಂಥದೇ ಎಂದು ಹೇಳಲಾಗದ ಕೊರಗು ಅವರನ್ನ ಬಾಧಿಸುತ್ತಿತು.
  ವಿಚಾರಣೆ ಮುಕ್ತಾಯವಾಗುವ ದಿನ ಬಂತು. ಆ ದಿನ ಆರೋಪಿಗಳ ಪರವಾಗಿ ಪಿಳ್ಳೆ ಎಣೆ ಇಲ್ಲದ ವಾಕ್ಪ್ರೌಢಿಮೆಯನ್ನು ತೋರಿದರು. ಸೂಜಿ ಬಿದ್ದರೂ ಸದ್ದಾಗುವ ಹಾಗೆ ನ್ಯಾಯಸ್ಥಾನ ನಿಶ್ಯಬ್ದವಾಗಿತ್ತು, ಇಂಗ್ಲಿಷಿನಲ್ಲಿದ್ದ ಆ ವಾದ ಕೈದಿಗಳಲ್ಲಿ ಮಾಸ್ತರೊಬ್ಬರಿಗೇ ಅರ್ಥವಾಯಿತು. ಉಳಿದವರು ಆಗಾಗ್ಗೆ ಮಾಸ್ತರ ಮುಖ ನೋಡಿದರು. ಹಾಗೆ ನೋಡಿ ಅಲ್ಲಿ ಕಂಡ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಪಿಳ್ಳೆ ಹೇಳುತ್ತಿದ್ದುದನ್ನು ಅರ್ಥಮಾಡಿಕೊಂಡರು.
  ಪಿಳ್ಳೆಯ ವಾದದಲ್ಲಿ ಎದೆಗಾರಿಕೆಯಿತು. ಮೊನಚಾದ ಬಾಣದ ಹಾಗಿತ್ತು ಒಂದೊಂದು ಮಾತೂ....ಅವರೆಂದರು: