ಪುಟ:Chirasmarane-Niranjana.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಚಿರಸ್ಮರಣೆ ನೆಮ್ಮದಿಯಿಂದ ಇರಬೇಕೂಂತ ಬಯಸಿದರೆ, ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಆಳುವ ಸರಕಾರ ಅದರ ಮೇಲೆ ಪ್ರಯೋಗಿಸಿದ್ದು ಬ್ರಹ್ಮಾಸ್ತ್ರ.....!"

     ಅಲೆಯಲೆಯಾಗಿ ಹೊರಟ ಆ ಮಾತುಗಳೆಲ್ಲ ನ್ಯಾಯಸ್ಥಾನವನ್ನು 

ವ್ಯಾಪಿಸಿದುವು. ಅಲ್ಲಿ ಸ್ಥಳ ಸಾಲದೆ ಬಾಗಿಲು ಕಿಟಕಿಗಳಿಂದ ಹೊರಕ್ಕೆ ಹರಿದುವು.

ಮಾತು ತುಂಬಿದ ವಾತಾವರಣದಿಂದ ಉಸಿರು ಕಟ್ಟಿದ ನಾಯಾಧೀಶರು ತಾವು
ಕುಗ್ಗಿದೆವೆಂದು ಭ್ರಮೆಗೊಂಡು, ಮತ್ತೂ ನೇರವಾಗಿ ಕುಳಿತರು.

... ಆ ದಿನ ಕಳೆದು ಮತ್ತೊಂದು ದಿನ.

ಪಿಳ್ಳೆ ಮತ್ತು ರಾಜಾರಾವ್ ಕೈದಿಗಳತ್ರ ಬಂದು ಮಾತನಾಡಿದರು:
"ನಮ್ಮಿಂದ ಸಾಧ್ಯವಿರೋದೆಲ್ಲ ನಾವು ಮಾಡಿದ್ದೇವೆ."
ಚಿರುಕಂಡ ಕೇಳಿದ:"ತೀರ್ಪು ಯಾವತ್ತು?ಇನ್ನೇನಿದೆ?"
"ಯಾವತ್ತೂಂತ ನಾಳೆ ತಿಳಿಸ್ಬಹುದು. ವ್ಯವಹರಣೆಯನ್ನೆಲ್ಲ ಜ್ಯುರಿಗಳಿ
ಗೋಸ್ಕರ ಇವತ್ತು ನಾಯಾಧೀಶರು ಸೂಕ್ಷ್ಮಾವಲೋಕನ ಮಾಡ್ತಾರೆ" ಎಂದರು
ಪಿಳ್ಳೆ.
    ಮಾಸ್ತರು ಮಾತನಾಡಿದರು:
    "ಜ್ಯೂರಿ ಅಭಿಪ್ರಾಯ ಹ್ಯಾಗಿದ್ದೀತು?"
    "ಅದರಿಂದೇನೂ ಪ್ರಯೋಜನವಿಲ್ಲ ಮಾಸ್ತರೆ. ಅವರ ಅಭಿಪ್ರಾಯದ ಮೇಲೆ ನಾಯಾಧೀಶರು ತೀರ್ಪು ಕೊಡ್ತಾರೇಂತ ತಿಳಿದಿರಾ?"
    "ಹಾಗಲ್ಲ ಆದರೂ-"
    "ಅವರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಉಳಿದವರೆಲ್ಲಾ 'ದೋಷಿಗಳು' ಅಂತಲೇ

ಅಂದಾರು."

    ರಾಜಾರಾವ್ ಹೇಳಿದರು:
    "ತೀರ್ಪಿನ ದಿವಸ ಕಯ್ಯೂರಿನ ನಿಮ್ಮವರಿಗೆಲ್ಲ ಬರೋದಕ್ಕೆ

ಹೇಳೋಣವೇನು?" 'ಹೊಂ' ಎನ್ನಬೇಕೆಂದು ತೋರಿತು ಅಪ್ಪು ಮತ್ತಿತರ ಹಲವರಿಗೆ.

ಬಿಡುಗಡೆಯಾದರೆ ಆ ಕ್ಷಣವೆ ಬಾಂಧವರ ತೋಳತೆಕ್ಕೆಗೆ ಬೀಳುವುದು ಎಷ್ಟು
ಸುಖಕರ! ಮಾಸ್ತರು, ಸುಮ್ಮನಿದ್ದ ಚಿರುಕಂಡನ ಅಭಿಪ್ರಾಯವನ್ನೂ ಕೇಳಿದರು; ಅಪ್ಪುವನ್ನೂ ವಿಚಾರಿಸಿದರು. ಬಳಿಕ ಇಳಿದನಿಯಲ್ಲಿ ಅವರೆಂದರು:
"ಬೇಡ. ಅವರಿಗೆ ದಿನ ತಿಳಿಯಬಾರದು. ತೀರ್ಪು ಹ್ಯಾಗಿರುತ್ತೊ ಯಾರು
ಬಲ್ಲರು?"