ಪುಟ:Chirasmarane-Niranjana.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೫೩ ...ತೀರ್ಪು ಕೊಡುವ ದಿನ ಗೋತ್ತಾಯಿತು. ಆ ದಿನ ಸಮೀಪಿಸಿದಂತೆ, ಕೈದಿಗಳ ಮನಸ್ಸಿನ ನೆಮ್ಮದಿ ಇರಲಿಲ್ಲ. ತನ್ನ ನಗೆಮಾತುಗಳು ಈಗೀಗ ವಿಫಲವಾಗುತ್ತ ಬಂದ್ದುವೆಂದು ಧಾಂಡಿಗನೂ ಮುಖ ಬೀಗಿಸಿಕೊಂಡು ಸಿಳ್ಳು ಹಾಕುತ್ತ ಕುಳಿತ.

ಮನಸಿನ ದುಗುಡ ತಡೆಯಲಾರದೆ ಅಪ್ಪು ಕೇಳಿದ:
"ತೀರ್ಪು ಕೊಡೋದಕ್ಕೆ ಅವರು ಇಷ್ಟು ದಿನ ಯಾಕೆ ತಗೋಬೇಕು? ಇನ್ನೂ

ಅವರು ತೀರ್ಮಾನ ಮಾಡಿಲ್ಲ_ಅಂತಲೆ?"

 ಪ್ರಭು ಮಾತನಾಡಿದ:

"ತೀರ್ಪು ಬರೀಬೇಕಲ್ಲ! ಅದಿನ್ನೇನು ನೂರು ಪುಟವಿರ್ತದೋ ಸಾವಿರ ಪುಟ ಇರ್ತದೋ!"

 ಆ ಪರಿಸ್ಥಿತಿಯಲ್ಲೂ ತಿಳಿವಳಿಕೆಯ ಮಾತನ್ನು ಮಾಸ್ತರು ಆಡಿದರು:
"ಇಂಥ ಸಂದರ್ಭಗಳಲ್ಲಿ ನ್ಯಾಯಸ್ಥಾನದಲ್ಲಿ ನಡೆಯೋದೇ ಹೀಗೆ.ಈ

ಮೊಕದ್ದಮೆ ಹ್ಯಾಗಿರ್ಬೆಕು? ಏನು ತೀರ್ಪು ಕೊಡಬೇಕು?_ಅನ್ನೋದೆಲ್ಲಾ ಮೊದಲೇ ತೀರ್ಮನವಾಗಿರ್ತದೆ. ವಚಾರಣೆಯ ನಾಟಕವೆಲ್ಲ ಫೂರ್ತಿಯಾದ್ಮೇಲೆ

ತೀರ್ಪು ಹೇಳ್ತಾರೆ..."
ಒಬ್ಬ ರೈತನೆಂದ:
"ಈ ನ್ಯಾಯಸ್ಥಾನವೇ ಕೊನೇದೇನೂ ಅಲ್ಲವಲ್ಲ!"
 ಕೋರ ಧ್ವನಿ ತೆಗೆದ.
 "ಏನು? ಬೇರೊಂದು ಕೋರೋಟಿನಲ್ಲಿ ಇನ್ನೊಂದ್ಯಾರೆ ಇದೇ ನಾಟಕ
ಆಗಬೇಕು ಅಂತೀರಾ?"
  ಮಾಸ್ತರು ನಕ್ಕು ಹೇಳಿದರು:
"ಉಚ್ಚ ನ್ಯಾಯಸ್ಥಾನಸದಲ್ಲಿ ಬಹಳ ಸುಲಭ. ಅಲ್ಲಿ ಆರೋಪಿಗಳ ಮುಖ
ನೋಡದೆಯೇ ತೀರ್ಪು ಕೊಡ್ತಾರೆ:"

.....ತೀರ್ಪು ಕೊಡುವ ದಿನ ಕಯ್ಯೂರಿನಿಂದ ಯಾರೂ ಬಂದಿರಲಿಲ್ಲ.ಆದರೆ

ಮಂಗಳೂರಿನವೆರೇ ನ್ಯಾಯಸ್ಥಾನದಲ್ಲಿ ಕಿಕ್ಕಿರಿದು ನೆರೆದಿದ್ದರು.
 ನ್ಯಾಯಾಧೀಶರು ತಡವಾಗಿ ಬಂದರು. ಬಂದವರೇ ಬರೆದು ತಂದಿದ್ದುದನ್ನು
ಅವಸರ ಅವಸರವಾಗಿ ಓದತೊಡಗಿದರು_ಅದು ನೂರು ಪುಟಗಳಷ್ಟಿದ್ದ ತೀರ್ಪು.
ಪೂರ್ತಿ ಓದಿದರೆ ಸಂಜೆಯ ಹೊತ್ತಿಗೂ ಮುಗಿಯುತ್ತಿತ್ತೋ ಇಲ್ಲವೊ. ಅವರು
ಏನು ಓದುತ್ತಿದ್ದರೆಂಬುದು ಸ್ಪಷ್ಟವಾಗದಹಾಗಿತ್ತು ಓದಿನ ವೇಗ. ನಡುನಡುವೆ,