ಪುಟ:Chirasmarane-Niranjana.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೫೫ ವ್ಯಾನೂ ಬಂದಿತ್ತು.ಹೆಚ್ಚು ಜನ ಸಶಸ್ತ್ರ ಪೋಲೀಸರು ಬಂದಿದ್ದರು. ಆದರೆ, ತೀರ್ಪಿನ ವಿಷಯ ಅಧಿಕಾರಿಗಳಿಗೆ ಮೊದಲೇ ತಿಳಿದಿದ್ದು ಮುಂಜಾಗ್ರತೆಗಾಗಿ ಈ ಏರ್ಪಾಟು ಆಗಿತ್ತೆಂದು ಊಹಿಸುವುದು ಮಾತ್ರ ಮಾಸ್ತರಿಂದಲೂ ಸಾಧ್ಯವಾಗಿರಲಿಲ್ಲ.

  ಜನ ಚೆದರತೊಡಗಿದ್ದರೂ ಉಳಿದವರ ಸಂದಣೆ ದಟ್ಟವಾಗಿತ್ತು. ಅವರು

ಗುಜುಗುಜು ಮಾತನಾಡುತ್ತ ಕೈದಿಗಳು ಹೊರಬರುವುದನ್ನು ಕಾದಿದ್ದರು. ಮರಣ ದಂಡನೆಗೆ ಗುರಿಯಾದ ನಾಲ್ವರನ್ನೂ ಇನ್ನೊಬ್ಬನಾದ ಕುಟ್ಟಿಕೃಷ್ಣನನ್ನೂ ಬೇರ್ಪಡಿಸಬೇಕು.ಆದರೆ ಆ ಕೆಲಸ ಅಂಟಿಕೊಂಡಿದ್ದ ಅವಳಿ ಮಕ್ಕಳ ಮೇಲಿನ ಶಸ್ತ್ರಕ್ರಿಯೆಗಿಂತಲೂ ಅದು ಕಷ್ಟಕರವಾಗಿತ್ತು.ಹಾಗೆ ವಿಂಗಡಿಸಿ ತಮ್ಮ ಐಕ್ಯವನ್ನೇ ಮುರಿಯುತ್ತಿರುವರೇನೋ ಎಂದು ಕೈದಿಗಳು ಒಬ್ಬರಿಗೊಬ್ಬರು ಒತ್ತಿಕೊಂಡೇ ನಿಂತರು.ಕುಟ್ಟಿಕೃಷ್ಣನಿಗೂ ಅಬೂಬಕರನಿಗೂ ಜತೆಯಾಗಿಯೇ ಬೇಡಿಹಾಕಿತ್ತು. ಸ್ವಯಂಸೇವಕ ದಳದ ನಾಯಕ ಅಬೂಬಕರ್;ಬಾಲಸಂಘದ ನಾಯಕ ಕುಟ್ಟಿಕೃಷ್ಣ. ಇವರಿಬ್ಬರಿಗೂ ಮರಣದಂಡನೆಯಾಗಿದ್ದರೂ ಅವರಿನ್ನು ಜತೆಯಾಗಿ ಇರುವಂತಿಲ್ಲ. ಉರುಳು ಕತ್ತನ್ನು ಬಿಗಿಯುವಷ್ಟು ಪ್ರಾಯಸ್ಥನಾಗಿತಲಿಲ್ಲ ಕುಟ್ಟಿಕೃಷ್ಣ, ಅವರಿಬ್ಬರನ್ನು ಬೇರ್ಪಡಿಸಲು ಪೋಲೀಸರು ಬಂದರು. ಕುಟ್ಟಿಕೃಷ್ಣ."ಅಣ್ಣಾ ಅಣ್ಣಾ!" ಎನ್ನುತ್ತ ಅಬೂಬಕರನ ತೋಳನ್ನು ಬಿಗಿಹಿಡಿದ. ಬಲಶಾಲಿಗಳಾದ ಪೋಲೀಸರು ಜೋಡಿಸಿದ್ದ ಬೇಡಿಗಳನ್ನು ಕಳಚಿ ಬೇರೊಂದನ್ನು ತೊಡಿಸಿದರು. ಕುಟ್ಟಿಕೃಷ್ಣ ಧ್ವನಿತೆಗೆದು ಅತ್ತ:"ಅಣ್ಣಾ! ಅಣ್ಣಾ! ನಾನು ನಿನ್ನ ಜತೇಲೆ ಬರ್ತೇನೆ!" ಅಸಹಾಯನಾದ ಅಬೂಬಕರ್ ಶೂನ್ಯವನ್ನು ನೋಡುತ್ತ ನಿಂತ. ಕಂಬನಿಯ ಧಾರೆಗೆಳೆರಡು ಅವನ ಗಲ್ಲದ ಮೇಲಿನಿಂದ ಹಾದು ಎದೆಗೆ ಧುಮ್ಮಿಕ್ಕಿದುವು. ವಜ್ರಹೃದಯಿ ಎಂದೇ ಎಲ್ಲರೂ ನಂಬಿದ್ದ ಧಾಂಡಿಗ ಗೋಡೆಗೊರಗಿ ತೋಳಲ್ಲಿ ಮುಖ ಮರೆಸಿಕೊಂಡು ಅತ್ತ.ಮಾಸ್ತರು ಈಗಲೂ ಶಾಂವಾಗಿದ್ದು ಮುಗುಳುನಗಲು ಯತ್ನಿಸಿದರು.ತಾಯಿಯ ಜತೆಯಲ್ಲಿ ಅಲೆಯಲು ಹೋಗಿದ್ದ ಮಕ್ಕಳು, ಕತ್ತಲಾಯಿತೆಂದು ಯೋಚನೆಗೊಳಗಾಗಿ ಹೆತ್ತವಳನ್ನು ನೋಡಿದ ಹಾಗೆ, ಅಪ್ಪು ಮತ್ತ ಚಿರುಕಂಡ ಬೊಂಬೆಯ ಹಾಗೆ ನಿಂತಿದ್ದ ಮಾಸ್ತರನ್ನೆ ದಿಟ್ಟಿಸುತ್ತ ಕೇಳಿದರು:

    "ನಮ್ಮನ್ನು ಈಗಲೆ ಒಯ್ತಾರಾ ಸರ್?"
    ತನ್ನಿದುರು ಸದಾ ವಿದ್ಯಾರ್ಥಿಗಳೇ ಆದ ಹುಡುಗರು---ಆತ್ಮೀಯ

ಭಾವವನ್ನುಂಟುಮಾಡುತ್ತಿದ್ದ 'ಸರ್' ಸಂಬೋಧನೆ....ಮಾಸ್ತರ ಕಣ್ಣಿಗೆ ಬಿದ್ದುದು