ಪುಟ:Chirasmarane-Niranjana.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬ ಚಿರಸ್ಮರಣೆ ಹತ್ತು ವರ್ಷಗಳ ಹಿಂದಿನ ಎಳೆಯರಾದ ಅಪ್ಪು ಚಿರುಕಂಡರು... ಏನೆಂದರು ಇಲ್ಲ ಚಿರುಕಂಡ---ನಾನೀಗ ಬೀಡಿ ಸೇದೋದ ಇಲ್ಲ! 'ಏನು? ಅದಲ್ಲವೆ?

 ಪ್ರಶ್ನೆ ಮತ್ತೋಮ್ಮೆ ಬಂತು:
 "ನಾವು ನಾಲ್ಕು ಜನರನ್ನು ಈಗಲೆ ಒಯ್ತಾರಾ ಸರ್?"
  ಎದೆಯಿಂದ ಅಳಲಿನ ಮುದ್ದೆ ಎದ್ದು ಗಂಟಲಿನ ಮೇಲಕ್ಕೆ ಬರಲು ಯತ್ನಿಸಿತು. 
  ಆದರೆ ಗಂಟಲು ಚಿಕ್ಕದು. ಉಗುಳು ನುಂಗಿ ಆ ಮುದ್ದೆಯನ್ನು ಕೆಳಕ್ಕೆ ತಳ್ಳುತ್ತ
  ಮಾಸ್ತರೆಂದರು:
  "ಇಲ್ಲವಪ್ಪ. ಇನ್ನೂ ನಾವು ಜತೇಲೇ ಇರ್ತೇವೆ."
 ಯಾರೋ ಕೇಳಿದರು:
  "ಇವರಿಗೆ   ಐದು ವರ್ಷ ಶಿಕ್ಷೆ ಆದ್ಮೇಲೆ ಮರಣದಂಡನೆಯೋ ವಕೀಲರೆ?"
  ಹಾಗಲ್ಲವೆಂದರು ರಾಜಾರಾಯರು. ಒಂದೊಂದು ಅಪರಾಧಕ್ಕೆ ಒಂದೊಂದು
  ಬಗೆಯ ಶಿಕ್ಷೆ. ಮರಣದಂಡನೆಯ ಜತೆಗೆ ಬೇರೆ ಶಿಕ್ಷೆ ಇದ್ದಾಗ, ಮರಣದಂಡನೆಯ 
ಬಸಿರಲ್ಲಿ ಆ ಶಿಕ್ಷೆ.
 ಚಿರುಕಂಡ ಮಾಸ್ತರನ್ನು ಕೇಳಿದ:"ಬಿಡುಗಡೆಯಾದೋರು ಅವತ್ತೇ ಕಯ್ಯೂರಿಗೆ

ಹೋಗೋದು ಮೇಲು, ಅಲ್ವ ಸರ್?"

   ಆತ ಯಾವಾಗಲೂ ಕಾರ್ಯದರ್ಶಿಯೇ---ಯಾವಾಗಲೂ ಮುಂದಿನ ಕ್ರಮದ

ಯೋಚನೆಯೇ ಆತನಿಗೆ.

 "ಹೂಂ ಹೌದು."
 "ಅವರ ಖರ್ಚಿಗೆ?---"
 ಅಲ್ಲೇ ನಿಂತಿದ್ದ ರಾಜಾರಾವ್ ಹೇಳಿದರು:
 "ಹೊರಗೆ ನಿಮ್ಮವರು ಕೆಲವರಿದ್ದಾರೆ. ಎಲ್ಲಾ ನೋಡಿಕೊಳ್ತಾರೆ. ಆ ಯೋಚನೆ

ಮಾಡ್ಬೇಡಿ."

 ಅಷ್ಟರಲ್ಲಿ ಪೋಲಿಸರ ಸ್ವರ ಕೇಳಿಸಿತು:
 "ಮುಂದೆ ನಡೀರಿ!"
 ಇವತ್ತು ಇನ್ನಳಿದ ಮೂವತ್ತೆಂಟು ಜನ ಬೀದಿಯಲ್ಲಿ ನಡೆಯಬೇಕಾದುದಿಲ್ಲ.

ಈ ನ್ಯಾಯಸ್ಥಾನದ ಕೊನೆಯ ದರ್ಶನದ ಬಳಿಕ ಈಗ ಅವರಿಗೆ ಮೋಟಾರು ವಾಹನವಿದೆ.

 ಜನ ಹತ್ತಿರ ಹತ್ತಿರಕ್ಕೆ ಬಂದರು. ಇವರು ರೈತರಲ್ಲ. ಕಯ್ಯೂರು ಬಲು ದೂರ