ಪುಟ:Chirasmarane-Niranjana.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೫೬ ಹೊಸದುರ್ಗ, ನೀಲೇಶ್ವರ,ತೇಜಸ್ವಿನಿ ನದಿ, ಚರ್ವತ್ತೂರು ನಿಲ್ದಾಣ, ತ್ರಿಕರಪುರ..... ಇವರ ಪ್ರಯಾಣದ ಸುದ್ದಿ ಹಬ್ಬುವುದಕ್ಕೂ ಅವಕಾಶವಿಲ್ಲದ ಹಾಗೆ ಗಾಡಿ ಚಲಿಸಿತು.

.... ಅದು ದೊಡ್ಡ ಸೆರೆಮನೆ. ಅದರ ಪ್ರಾಕಾರದೊಳಗಿದ್ದ ಕಳ್ಳಕಾಕರ ಸಂಖ್ಯೆ ಹೆಚ್ಚೋದೇಶಪ್ರೇಮಿಗಳ ಸಂಖ್ಯೆ ಹೆಚ್ಚೋ ಹೇಳುವುದು ಕಷ್ಟ. ಹಿಂದೆ ತಳಿಪರಂಬ ರೈತಸಮ್ಮೇಳನದಲ್ಲಿ ಕಯ್ಯೂರಿನವರು ಸಂಧಿಸಿದ್ದ ಹಲವರು ಅಲ್ಲಿದ್ದರು. "ಓಹೋ! ಏನು ಸಮಾಚಾರ?' ಎಂದು ಹೊರಗಿನಿಂದ ಬಂದವರನ್ನು ಆದರದಿಂದ ಮಾತನಾಡಿಸುವ ಸಂಬಂಧಿಕರ ವಿಶಾಲ ಕುಟುಂಬದ ಹಾಗಿತ್ತು ಆ ಸೆರೆಮನೆ....
ಆದರೆ ಅಲ್ಲಿಯೂ ನಿಯಮ ನಿಬಂಧನೆಗಳಿದ್ದುವು. ಮರಣದಂಡನೆಗೆ ಗುರಿಯಾದ ನಾಲ್ವರನ್ನಂತೂ ಪ್ರತ್ಯೇಕವಾಗಿಟ್ಟರು. ಅದು ಇಪ್ಪತ್ತನಾಲ್ಕು ಘಂಟೆಗಳ ಕಾಲವೂ ಬಂಧನ.

ಉಳಿದವರು ಹಳೆಯ ಕ್ಶೆದಿಗಳೊಡನೆ ಬೆರೆಯಲು ಅವಕಾಶವಿದ್ದುದು ಪೆರೆಡೀನ ಕಾಲದಲ್ಲಿ, ಇಲ್ಲವೆ ದುಡಿಮೆಯ ಅವಧಿಯಲ್ಲಿ.

ಪಹರೆ ಹೀಗಿದ್ದರೂ ಅಲ್ಲಿ ಗೋಡೆಗಳ ನಾಲಿಗೆಗು ಪಿಸುಮಾತನಾಡುತ್ತಿದ್ದುವು. ಮೂಕರಂತಿದ್ದ ಕಾವಲುಗಾರರೂ ಕೆಲವೊಮ್ಮೆ ಸರಕ್ಕನೆ ಕೊಠಡಿಗಳತ್ತ ತಿರುಗಿ ಏನಾದರು ಸುದ್ದಿ

ಹೇಳುತ್ತಿದ್ದರು. ಚೀಟಿಗಳು ಬರುತ್ತಿದ್ದುವು....

ಅನಂತರ ಉಳಿದುದು ಮದರಾಸಿನ ಉಚ್ಚ ನ್ಯಾಯಸ್ಥಾನದಲ್ಲಿ ಅಪೀಲಿನ ವಿಚಾರಣೆ. ವಿಚಾರಣೆಯ ದಿನ ನಿರ್ಧಾರವಾಗುವುದು ತಡವಾಯಿತೇ ಹೊರತು ಒಮ್ಮೆ ನ್ಯಾಯಮೂರ್ತಿಗಳು ಆ ವಿಷಯವನ್ನೆತ್ತಿಕೊಂಡಮೇಲೆ ಅವರು ತೀರ್ಪುಕೊಡುವುದು ತಡವಾಗಲಿಲ್ಲ.
ಅದು ಒಮ್ಮೆ ತದ ತೀರ್ಪು .

ಅವರ ಘನ ಅಭಿಪ್ರಾಯದಂತೆ ಸೆಷನ್ಸ್ ನ್ಯಾಯಾಧೀಶರ ತೀರ್ಮಾನ... ಸಮರ್ಪಕವಾಗಿತ್ತು.

.... ಆ ಸುದ್ದಿ ಬಂದಾಗ ಅಪ್ಪು ಪಕ್ಕದ ಕೊಠಡಿಯ ಚಿರುಕಂಡನನ್ನು ಕೇಳಿದ: "ಇನ್ನಾದರೂ ಈ ವಿಚಾರಣೆಗಳ ತೊಂದರೆ ಮುಗಿಯಿತೋ ಇಲ್ಲವೋ?"
ಅದು ಮುಗಿದಿರಲಿಲ್ಲ. ರಕ್ಷಣಾ ಸಮಿತಿಯವರು ಲಂಡನಿನ ಪ್ರಿವಿಕೌನ್ಸಿಲಿಗೆ ಹೋದರು. ಆದರೆ ಯುದ್ಧ ಕಾಲದಲ್ಲಿ ವ್ಯವಹರಣೆಗಳೆಲ್ಲ ಭಾರತದ ಫೆಡರಲ್ ನ್ಯಾಯಸ್ಥಾನಕ್ಕೆ ಸ್ಥಳಾಂತರವಾಗಿದ್ದುವು. 
ಫೆಡರಲ್ ನ್ಯಾಯಸ್ಥಾನದ ದೃಷ್ಟಿಯಲ್ಲಿ ಮದರಾಸು ಹೈಕೋರ್ಟಿನ ತೀರ್ಪಿನ ಬಗ್ಗೆ ಟೀಕಿಸುವಂಥದೇನೂ ಇರಲಿಲ್ಲ.