ಪುಟ:Chirasmarane-Niranjana.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ ೨೬೫
ಅಪ್ಪು ನಕ್ಕ. ಆ ನಗುವನ್ನು ಕಂಡು ಅಪ್ಪು ಕುಟ್ಟಿಯೂ ಅಳು ನಿಲ್ಲಿಸಿ ಹಲ್ಲು
ಕಿರಿದು “ಇಹ್ಹಿ!" ಅಂದ.
ಇಂತಹ ಭೇಟಿಯಲ್ಲಿ ಸಮಯದ ಮಹತ್ವವಷ್ಟೆಂಬುದನ್ನು ತಿಳಿದಿದ್ದ ಅಪ್ಪುವಿನ
ತಂದೆ ಹೇಳಿದ :
"ಸುಮ್ನೆ ನಿಂತಿರ್‍ಬೇಡಿ, ಮಾತಾಡಿ."
ಆದರೆ ಏನನ್ನು ?....ಯಾವ ವಿಷಯ? ಹಿರಿಯ ಹಾಗಂದರೂ ಅವರು
ಮೌನವಾಗಿಯೇ ಇದ್ದರು.
ಬಳಿಕ ವಿಷಯಗಳಿಗಾಗಿ ತಡವರಿಸುತ್ತ ಅಪ್ಪು ನುಡಿದ:
"ಅಕ್ಕನನ್ನ ಇತ್ತೀಚೆಗೆ ನೋಡಿದ್ಯಾ?”
ಜಾನಕಿ ಅಂದಳು: "ಹೂಂ."
"ಮಗು ಚೆನ್ನಾಗಿದ್ಯಾ?"
"ಹೂಂ, ಚೇತನಾಗೆ ಆಗಲೆ ಐದು ತುಂಬಿತು. ಮುಂದಿನ ಸಲ ಶಾಲೆಗೆ
ಹಾಕ್ಬೇಕೂಂತಿದ್ದಾಳೆ ಅಕ್ಕ."
"ಒಳ್ಳೇದೆ?"
ಹಿಂದೆ ಕಮ್ಮೂರಿನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಈಗ
ಹುಡುಗಿಯರನ್ನು ಕಳುಹಿಸುವ ಮಾತು ಕೇಳಿಸುತ್ತಿತ್ತು. ಒಳ್ಳೆಯದೇ.
ಅಮ್ಮನತ್ತ ನೋಡಿ ಅಪ್ಪು ಕೇಳಿದ:
'ಅಜ್ಜಿ ಆರೋಗ್ಯವಾಗಿದ್ದಾಳಾ ಅಮ್ಮಾ?”
"ಹೂಂ ಕಣೋ"
"ತಮ್ಮ?"
"ಹೊಲದ ಎಲ್ಲ ಕೆಲಸ ಅವನೇ ಈಗ ನೋಡ್ಕೊಳ್ತಾನೆ. "
ಕಿರಿಯ ತಮ್ಮನ ನೆನಪು ಕಾಡುತ್ತ ಬಂದು ಅಪ್ಪು ಕೇಳಿದ:
“ಕುಟ್ಟಿ ಈಗ ದೊಡ್ಡನಾಗಿದ್ದೇಕು ಅಲ್ವಾ? ಅವನನ್ನು ಚೆನ್ನಾಗಿ ನೋಡ್ಕೊ
ಅಮ್ಮ, ಅವನಿಗೆ ತುಂಬಾ ಓದಿಸ್ಬೇಕು.”
ಓದಿಸುವ ಮಾತು ಹಳೆಯದೊಂದು ನೆನಪನ್ನು ಕದರಿತು.
“ಅಪ್ಪಾ, ನಾನು ಪೋಲಿ ಸಹವಾಸಕ್ಕೆ ಬೀ‌ಳ್ಭಹುದೂಂತ ಹಿಂದೆ ಭಾವಿಸಿದ್ದೆ.
ಅಲ್ಪ ಅಪ್ಪಾ? ನಾನು ಪೋಲಿಯಾಗಲಿಲ್ಲ. ಆದರೆ ಹೆತ್ತವರಿಗೆ ಸುಖಾನೂ
ಕೊಡಲಿಲ್ಲ.
“ಹಾಗೆಲ್ಲಾ ಆಡ್ತಾರು ಅಪ್ಪು."