ಪುಟ:Chirasmarane-Niranjana.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ "ಗೋಪ್ಯವಾಗಿ ನಾವು ಇಷ್ಟರಲ್ಲೇ ಇನ್ನೊಂದು ಒಳಸಂಚು ನಡೆಸ್ಬಹುದು ಅಂತ ಭಯ, ಅಲ್ಲ?" "ಇರಲಿ ಬಿಡು ಅಬೂಬಕರ್... ಮಾಸ್ತರು ಆ ನಾಲ್ಕೂ ಕೊಠಡಿಗಳ ಎದುರು ನಿಂತು ಆ ನಾಲ್ವರನ್ನೂ ನೋಡಿದರು ಮುಗುಳುನಗಲು ಯತ್ನಿಸಿದರು. ಮಾತು-ಮಾತನಾಡಬೇಕು. ಭೇಟಿಯಿರುವುದು ಸಂಭಾಷಣೆಗೋಸ್ಕರ ಅದರಲ್ಲೂ ಕೊನೆಯ ಭೇಟಿ. ಆದರೆ ನಿಮಿಷಗಳು ಸದ್ದಿಲ್ಲದೆಯೆ ಉರುಳಿದುವು. ಮಾಸ್ತರ ಆಪ್ತ ಶಿಷ್ಯನಾಗಿದ್ದ ಚಿರುಕಂಡನೆಂದ: "ನಾಳೆ ಬೆಳಿಗ್ಗೆ ನಾವೆಲ್ಲ ಹೋಗ್ತೇವೆ ಸರ್" ಪ್ರಿಯಶಿಷ್ಯನಾದ ಅಪ್ಪುವೆಂದ: “ನಮ್ಮನ್ನು ಮರೀಬೇಡಿ ಸರ್." ಆ ಮಾತುಗಳಿಗೆ ಕಿವಿಗೊಡುವುದು ತಡೆಯಲಾಗದ ಸಂಕಟ. ಯಾಕಾದರೂ ಈ ಹುಡುಗರು ಇಂತಹ ಭೇಟಿ ಬೇಕೆಂದರೋ? ಇನ್ನು ಆ ಕುಂಞಂಬು- ಅಬೂಬಕರ್... ಒಬ್ಬರ ಮುಖದಿಂದೊಬ್ಬರ ಮುಖವನ್ನು ಮಾಸ್ತರು ನೋಡುತ್ತಲೇ ನಿಂತರು. ಇಲ್ಲ, ಮಾತನಾಡುವುದೇನೂ ಇರಲಿಲ್ಲ. ಮಾತು ಸಾಧ್ಯವಿರಲಿಲ್ಲ. ಇನ್ನೂ ಒಂದು ನಿಮಿಷ ತಡವಾದರೆ ಅಳಲಿನ ಕಟ್ಟೆ ಒಡೆಯಬಹುದು. ಅದು ಸರಿಯಲ್ಲ, ಅಂಥ ಬೀಳ್ಕೊಡುಗೆ ಸರಿಯಲ್ಲ. ಏನನ್ನೋ ಆಡಬೇಕೆಂದು ಮಾಸ್ತರೆಂದರು: "ಅಪ್ಪು- ಚಿರುಕಂಡ, ಎಲ್ಲಾ ಜತೇಲೇ ಇರಿ...ಕುಂಞಂಬು-ಅಬೂಬಕರ್." "ಇರ್ತೇವೆ, ಜತೆಯಾಗೇ ಇರ್ತೇವೆ." ಇನ್ನು ಅಲ್ಲಿಂದ ಹೊರಡುವುದೇ ಮೇಲೆಂದು ಸರಪಳಿ ಬಿಗಿದಿದ್ದ ಬಲಗೈಯನ್ನೆತ್ತಿ ಬಿಗಿಮುಷ್ಟಿಯ ವಂದನೆ ಕೊಡುತ್ತ ಮಾಸ್ತರೆಂದರು: "ರಕ್ತನಮಸ್ಕಾರ ಬಾಂಧವರೇ!" "ರಕ್ತನಮಸ್ಕಾರ ಸರ್! ರಕ್ತನಮಸ್ಕಾರ ಸಂಗಾತಿ!" ಕೊನೆಯ ಆಸೆಒಯಯ ಭೇಟಿ ಹಾಗೆ ಮುುಗಿಯಿತು.

                             ***